ಈ ದಿನ.ಕಾಮ್ ಜನಸಾಮಾನ್ಯರಿಗೆ ನ್ಯಾಯ ದೊರಕಿಸುವ ಪತ್ರಿಕೆ

0
46

ಶಹಾಬಾದ: ಸತ್ಯ,ನ್ಯಾಯ ಪ್ರತಿಪಾದಿಸುತ್ತ ಸಮಾಜದಲ್ಲಿ ಪ್ರೀತಿ ಬಿತ್ತುವ ಆಶಯದಿಂದ ಕಾರ್ಯನಿರ್ವಹಿಸುತ್ತಿರುವ ಈ ದಿನ.ಕಾಮ್ ಇಂದು ಜನಸಾಮಾನ್ಯರ ವಿಶ್ವಾನೀಯ ಪತ್ರಿಕೆಯಾಗಿ ಹೊರಹೊಮ್ಮತ್ತಿರುವುದು ಶ್ಲಾಘನೀಯ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ಅವರು ನಗರದ ಶಮ್ಸ್ ಫಂಕ್ಷನ್ ಹಾಲ್‍ನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಈ ದಿನ.ಕಾಮ್ ಪತ್ರಿಕೆ ಏರ್ಪಡಿಸಿದ್ದ ‘ಪರ್ಯಾಯ ಮತ್ತು ಜನಪರ ಮಾಧ್ಯಮ ಏಕೆ? ಬೇಕು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಪ್ರಗತಿಪರ ಸಂಘಟನೆಗಳು ಅತ್ಯಂತ ಕ್ರೀಯಾಶೀಲತೆಯಿಂದ ಕೆಲಸ ಮಾಡುತ್ತ ಬಿಡಿಯಾಗಿದ್ದ ಸಂಘಟನೆಗಳನ್ನು ಉಗ್ಗೂಡಿಸಿಕೊಂಡು ಸಾಂಘಿಕ ಪ್ರಯತ್ನದಿಂದ ಈ ದಿನ.ಕಾಮ್ ಪ್ರಾರಂಭವಾಗಿದೆ.ಇದೊಂದು ಜನಸಾಮಾನ್ಯರ, ನೊಂದವರ ಪತ್ರಿಕೆಯಾಗಿದೆ ಎಂದು ಹೇಳಿದರು.

ಈ ದಿನ.ಕಾಮ್ ಪತ್ರಿಕೆಯ ಮುಖ್ಯಸ್ಥರಾದ ಡಾ.ವಾಸು.ಎಚ್.ವಿ ಮಾತನಾಡಿ, ಕಾರ್ಪೋರೇಟರ್‍ಗಳ ಕೈ ಹಿಡಿತದಲ್ಲಿರುವ ಮಾಧ್ಯಮಗಳು ಅವರ ಬೇಕಾದಂತೆ ವರ್ತಿಸುತ್ತಿವೆ.ಅಲ್ಲದೇ ಕೆಲವೊಂದು ಮಾರ್ಧಯಮಗಳು ರಾಜಕೀಯ ಪಕ್ಷಗಳಿಗೆ ಅಂಟಿಕೊಂಡಿದ್ದರಿಂದ ಜನಸಾಮಾನ್ಯರರಿಗೆ ನ್ಯಾಯ ಒದಗಿಸುವಲ್ಲಿ ಇಂದಿನ ಬಹುತೇಕ ಮಾಧ್ಯಮಗಳು ಸೋತಿವೆ. ಆದ್ದರಿಂದ ಜನಪರ ಸಂಘಟನೆಗಳ ಮೂಲಕ ಜನಸಾಮಾನ್ಯರ ನೋವಿನ ಧ್ವನಿಯಾಗಿ ಹುಟ್ಟು ಹಾಕಿರುವ ಒಂದು ಮಾಧ್ಯಮವೇ ಈ ದಿನ.ಕಾಮ್. ಪ್ರಜಾಪ್ರಭುತ್ವದ ಮೂರು ಅಂಗಗಳನ್ನು ಪ್ರಶ್ನೆ ಮಾಡುವ ಮೂಲಕ ಕಣ್ತೆರಿಸುವ ಕೆಲಸಗಳು ಮಾಧ್ಯಮ ಪ್ರಪಂಚ ಮಾಡಬೇಕಿದೆ.

ಆ ನಿಟ್ಟಿನಲ್ಲಿ ಕೆಲಸಗಳು ಮಾಡಬೇಕಿದ್ದ ಮಧ್ಯಮಗಳು ಆಳುವ ಸರಕಾರ ಹಾಗೂ ಉದ್ಯಮಿಗಳ ಕೈಗೊಂಬೆಗಳಾಗಿ ಕುಣಿಯುತ್ತಿವೆ. ಅದರ ಪರ್ಯಾಯವಾಗಿ ಉತ್ತಮ ಸಮಾಜ ಹಾಗೂ ಸರಕಾರ ಸರಿದಾರಿಗೆ ತರುವತ್ತ ಈ ದಿನ.ಕಾಮ್ ನಿಮ್ಮೆಲ್ಲರ ಸಹಕಾರದಿಂದ ನಡಸುಕೊಂಡು ಬರುತ್ತಿದೆ.ಮಾಧ್ಯಮ ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ.ಇದೊಂದು ಮುಳ್ಳಿನ ಹಾಸಿಗೆ.ಆದರೂ ಪ್ರಗತಿಪರ ಸಂಘಟನೆಗಳು ಹಾಗೂ ಜನಸಾಮನ್ಯರು ತಮ್ಮ ಸುತ್ತಮುತ್ತಲಿನ ಸುದ್ದಿಗಳನ್ನು ತಾವು ನಮಗೆ ಕಳಿಸಬಹುದು.ಅಲ್ಲದೇ ನಮ್ಮ ಪತ್ರಿಕೆ ಅಂಗವಾಗಬಹುದೆಂದು ಹೇಳಿದರು.

ಉಪನ್ಯಾಸಕ ಪೀರ್ ಪಾಶಾ, ಮಹಿಳಾ ಹೋರಾಟಗಾರ್ತಿ ಗುಂಡಮ್ಮ ಮಡಿವಾಳ, ಈ ದಿನ. ಕಾಮ್ ನ ಅನಿಲಕುಮಾರ, ಎಮಡಿಎಮ ಶಾಲೆಯ ಮುಖ್ಯಗುರು ಶೇಖ ಸಾಹೀರಾ, ಸುನಿಲ ಹುಡಗಿ, ಸಾಬಮ್ಮ ಕಾಳಗಿ, ಮರೆಪ್ಪಾ ಚಟ್ಟರಕರ ವೇದಿಕೆ ಮೇಲೆ ಇದ್ದರು. ಪಿ.ಎಸ್.ಮೇತ್ರಿ ನಿರೂಪಿಸಿದರು,ಜಗನ್ನಾಥ.ಎಸ್.ಎಚ್ ಸ್ವಾಗತಿಸಿದರು, ಮಲ್ಲೇಶಿ ಭಜಂತ್ರಿ ವಂದಿಸಿದರು.

ಶರಣಗೌಡ ಪಾಟೀಲ್, ಮರೇಪ್ಪ ಮೇತ್ರಿ, ಭರತ ಧನ್ನ, ಮಲ್ಲಣ್ಣ ಮಸ್ಕಿ, ನಾಗಪ್ಪ ರಾಯ್ಚೂರಕರ್, ವಿಶ್ವರಾಜ್ ಫಿರೋಜಬಾದ್, ಸುಭಾμï ಸಾಕ್ರೆ, ಚಂದ್ರಶೇಖರ್ ಪಾಟೀಲ್, ಮಲ್ಲಿಕಾರ್ಜುನ್ ಗೌಡ, ಮೋಹನ ಹಳ್ಳಿ, ಗುರುಲಿಂಗ ತುಂಗಳ, ಗಣಪತಿ ಮಾನೆ, ರಾಮಣ್ಣ ಇಬ್ರಾಹಿಂಪುರ್, ಮಲ್ಲಿಕಾರ್ಜುನ ಹಳ್ಳಿ, ನರಸಿಂಹಲು ರಾಯಚೂರಕರ ಹಾಗೂ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here