ಶಹಾಪುರ: ನಿನ್ನೆ ಸುರಿದ ಮಹಾಮಳೆಗೆ ಶಹಾಪುರ ನಗರದ ಹಲವಾರು ಬಡಾವಣೆಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿ ಜಲ್ಲಿಕಲ್ಲುಗಳು ತೇಲಿ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ ಅದರಲ್ಲೂ ನಗರದ ಗದ್ದುಗೆ ರಸ್ತೆಯ ಪಕ್ಕದಲ್ಲಿರುವ ಬಡಾವಣೆಯ ಪರಿಸ್ಥಿತಿ ಹೇಳತೀರದು.
ರಸ್ತೆ ಮಧ್ಯೆ ದೊಡ್ಡ ದೊಡ್ಡ ತಗ್ಗುಗಳು ಬಿದ್ದು ಅಲ್ಲಲ್ಲಿ ನೀರು ನಿಂತಿವೆ,ನಿಂತ ನೀರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ’ಮಲೇರಿಯಾ, ಕಾಲರಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ.ಇದು ಶಾಸಕರ ಬಡಾವಣೆಯ ಪಕ್ಕದಲ್ಲಿರುವ ಬಡಾವಣೆಯಾಗಿದ್ದು ಕಂಡು ಕಾಣದಂತೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಕೂಡಲರ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ರಿಪೇರಿ ಮಾಡಬೇಕು ಹಾಗೂ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ ಮಾಡಿದರೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ಬಡಾವಣೆಯ ನಿವಾಸಿ ಮಡಿವಾಳಪ್ಪನವರ ತಿಳಿಸಿದರು.