ಗಡಿಯಲ್ಲಿ ಸಂಸ್ಕೃತಿಕ ವಾತಾವರಣ ನಿರ್ಮಾಣವಾಗಲು ಗಡಿ ಅಭಿವೃದ್ಧಿ ಪ್ರಾಧಿಕಾರ ಕಾರಣ

0
15

ಶಹಪುರ: ಇಲ್ಲಿನ ಸಮೀಪದ ದೋರನಹಳ್ಳಿ ಪಕ್ಕದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಹಾಗೂ ಕರ್ನಾಟಕ ಸರ್ಕಾರ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ನಡೆದ 15ನೇ ವರ್ಷದ ಗಡಿ ಕನ್ನಡಿಗರ ನುಡಿ ಉತ್ಸವ ಸಾಂಸ್ಕತಿಕ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮವನ್ನು ಪೂಜ್ಯ ವಿಶ್ವರಾಧ್ಯ ದೇವರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಪಾಟೀಲ್ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆಯನ್ನು ಕರವೇ ಉತ್ತರ ಕರ್ನಾಟಕ ಅದ್ಯಕ್ಷರಾದ ಶರಣು ಬಿ ಗದ್ದುಗೆ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಮಹಿಳಾ ಘಟಕದ ಅದ್ಯಕ್ಷರಾದ ಕವಿತಾ ವಿ ಪಾಟೀಲ್ ಅವರು ಚಾಲನೆ ನೀಡಿದರು. ನಂತರ ಮಾತನಾಡಿ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಬೇಕಾದರೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಕಾರ ಮುಖ್ಯವಾಗಿದೆ ಎಂದು ಗದ್ದುಗೆ ಹೇಳಿದರು.

Contact Your\'s Advertisement; 9902492681

ಗಡಿ ಭಾಗದ ಕಲಾವಿದರಿಗೆ ಸಾಹಿತಿಗಳಿಗೆ ಸಂಘ-ಸಂಸ್ಥೆಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದರ ಮೂಲಕ ಸಹಕಾರ ಪ್ರಾಧಿಕಾರ ನೀಡುತ್ತಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಗಡಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ವೇದಿಕೆಯಿಂದವ ಹಮ್ಮಿಕೊಳ್ಳಲಿ ಎಂದು ಕವಿತಾ ಪಾಟೀಲ್ ಹೇಳಿದರು.

ತಾಲೂಕು ಪಂಚಾಯಿತಿಯ ಮುಖಂಡರಾದ ನಿಜಗುಣ ದೋರನಹಳ್ಳಿ,ಶರಣು ದೋರನಹಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರವತಿ ದೊರೆ, ಸದಸ್ಯರಾದ ಮಾಂತೇಶ್, ಕರವೇಯ ಶರಣು ಇಟಗಿ,ಸಿದ್ದು ರೆಡ್ಡಿ, ಶಿವಕುಮಾರ್ ಯರಗೋಳ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಗಡಿ ಭಾಗದಲ್ಲಿ ಸೇವೆ ಸಲ್ಲಿಸದ ಅಧಿಕಾರಿಗಳಾದ ನಗರ ಸಭೆಯ ಹರೀಶ್, ಕಲಾವಿದರಾದ ಮಹೇಶ್ ಪತ್ತಾರ,ಪರಮಾನಂದ ಹೂಗಾರ,ಸುಭಾಷ್ ಡೋಲಕ್ ಸೇರಿದಂತೆ ಹಲವರಿಗೆ ಗೌರವಿಸಲಾಯಿತು.

ಅನೇಕ ಕಲಾವಿದರಾದ ಬಾಲು ಆರ್ ಕೆ, ಮಲ್ಲಯ್ಯ,ಬಸವರಾಜ, ಡಾ ಗುಂಡು ಅವರಿಂದ ಸುಗಮ ಸಂಗೀತ ಗೀತೆಗಳು ಹಾಡಿ ರಂಜಿಸಿದರು. ಸಂತೋಷ್ ಸಗರ ನೃತ್ಯ ತಂಡದಿಂದ ವಿವಿಧ ರೂಪಕಗಳು ನೃತ್ಯಗಳು ಅದ್ದೂರಿಯಾಗಿ ಪ್ರದರ್ಶನಗೊಂಡವು. ನಾಗರಾಜ ಅವಂಟಿ ನಿರೂಪಣೆ ಮಾಡಿದರು. ವೆಂಕಟೇಶ್ ಬೋನೇರ ಸ್ವಾಗತ ಕೋರಿದರು,ಗೌಡಪ್ಪ ಕೋರಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here