ಜಾನಪದ ಸಾಹಿತ್ಯದಲ್ಲಿ ಜೀವನಮೌಲ್ಯವಿದೆ: ವಲ್ಲೆಪ್ಪನವರ್

0
36

ರಂಗಂಪೇಟೆ: ಜಾನಪದ ಸಾಹಿತ್ಯ, ಸಂಗೀತ ಸಂಸ್ಕೃತಿಯಲ್ಲಿ ಜೀವನ ಮೌಲ್ಯಗಳು ಅಡಕವಾಗಿವೆ ಎಂದು ಪ್ರಸಿದ್ದ ಜಾನಪದ ಗಾಯಕ ಹುಬ್ಬಳ್ಳಿಯ ಇಮಾಮಸಾಬ ವಲ್ಲೆಪ್ಪನವರು ಹೆಳಿದರು.

ಸಮಿಪದ ರಂಗಂಪೇಟೆಯ ಖಾದಿಕೇಂದ್ರದ ಆವರಣದಲ್ಲಿ ಜಾನಪದ ಕಲಾಲೋಕ ರಂಗಂಪೇಟ ಸಂಸ್ಥೆಯ ವತಿಯಿಂದ ವಿಶ್ವ ಜಾನಪದ ದಿನಾಚಾರಣೆಯ ಅಂಗವಾಗಿ ಆಯೋಜಿಸಿದ್ದ ಜಾನಪದ ಸಾಹಿತ್ಯದ ಕುರಿತು ಉಪನ್ಯಾಸ ಹಾಗೂ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜನಪದ ಎಂಬುವುದು ಮಾನವಿಯ ಸಂಬಂಧದ ಮೂಲ ಸರಪಳಿ, ನಮ್ಮ ಮೂಲ ಬದುಕಿನ ಪ್ರತಿ ಹಂತದಲ್ಲು ಜಾನಪದ ಬಂದು ಹೊಗುತ್ತದೆ, ಇಂದಿನ ಬದಲಾದ ಸನ್ನಿವೇಶದಲ್ಲಿ ಜಾನಪದ ಸಂಸ್ಕೃತಿ ಆಧುನಿಕರಣದ ಹೊಡೆತಕ್ಕೆ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಜಾನಪದ ಎಂಬುವುದು ಒಂದು ಸಂಸ್ಕೃತಿ ಅದು ನಮ್ಮ ನೈತಿಕತೆ, ವೈಚಾರಿಕೆ, ಪಾರದರ್ಶಕತೆ, ಪ್ರತಿನಿಧಿಸುತ್ತದೆ ಜಾನಪದಕ್ಕೆ ಹಿರಿದಾದ ಶಕ್ತಿ ಇದೆ, ಇದು ಮಾತೃ ಹೃದಯದ ಭಾಷೆ ಇದಕ್ಕೆ ತನ್ನದೆ ಆದ ಸಂಸ್ಕೃತಿ, ಸಂಸ್ಕಾರ ಹಿನ್ನೆಲೆ ಒಳಗೊಂಡಿಗೆ ಎಂದು ಹೇಳಿದರು.

Contact Your\'s Advertisement; 9902492681

ಅಧ್ಯಕ್ಷತೆಯನ್ನು ಜಾನಪದ ಕಲಾಲೋಕ ಸಂಸ್ಥೆಯ ಅಧ್ಯಕ್ಷ ಶಿವಶರಣಪ್ಪ ಹೆಡಿಗಿನಾಳ ವಹಿಸಿದರು, ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕುರಿತು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಉಪನ್ಯಾಸ ನೀಡಿದರು, ಪ್ರಮುಖರಾದ ಕರ್ನಾಟಕ ನವನಿರ್ಮಾಣ ವೇದಿಕೆಯ ಅಧ್ಯಕ್ಷ ಶಿವರಾಜ ಕಲಿಕೇರಿ, ಕಾರ್ಯದರ್ಶಿ ವಾಸುದೇವ ಬೈರಿಮಡ್ಡಿ, ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ ಸೇರಿದಂತೆ ಇತರರು ಇದ್ದರು. ಮಹೇಶ ಬಿಶೆಟ್ಟಿ ನಿರುಪಿಸಿದರು, ಮೌನೇಶ ಐನಾಪುರ ಸ್ವಾಗತಿಸಿದರು, ಬಸವರಾಜ ಚನ್ನಪಟ್ನ ವಂದಿಸಿದರು. ಇದೇ ಸಂದರ್ಭದಲ್ಲಿ ನಡೆದ ಇಮಾಮಸಾಬ ವಲ್ಲೆಪ್ಪನವರ ತಂಡದ ಜಾನಪದ ಕಾರ್ಯಕ್ರಮ ಗಮನ ಸೇಳೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here