ಶಹಾಬಾದ : ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹಿಂದುಳಿದ ಸಮುದಾಯಗಳ ಆಶಾಕಿರಣವಾಗಿದ್ದರು ಎಂದು ಎಸ್.ಎಸ್.ನಂದಿ ಪ್ರೌಢಶಾಲೆಯ ಮುಖ್ಯಗುರು ಸುಧೀರ ಕುಲಕರ್ಣಿ ಹೇಳಿದರು.
ಅವರು ರವಿವಾರ ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾದ ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇವರಾಜ ಅರಸರು ಕೃಷಿಕ ಕುಟುಂಬದಿಂದ ಬಂದು ಸಾಹಿತ್ಯ, ಶೈಕ್ಷಣಿಕ ಕ್ಷೇತ್ರಗಳ ಬಗ್ಗೆ ಅರಿತುಕೊಂಡು ರಾಜಕೀಯ ಮಟ್ಟದಲ್ಲೂ ಉನ್ನತ ಮಟ್ಟಕ್ಕೆ ಏರಿದರು. ಉಳುವನ ಸಂಕಷ್ಟವನ್ನು ಪರಿಹರಿಸಲು ಎಷ್ಟೇ ವಿರೋಧಗಳ ನಡುವೆಯೂ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವುದರ ಮೂಲಕ ಉಳುವನೇ ಭೂಮಿಯ ಒಡೆಯ ಆಗುವಂತಹ ಭೂ ಸುಧಾರಣೆ ಕಾನೂನನ್ನು ಜಾರಿಗೆ ತಂದು ಹಿಂದುಳಿದ ಹಾಗೂ ಶೋಷಿತ ಸಮುದಾಯದವರು ನೆಮ್ಮದಿಯ ಜೀವನ ನಡೆಸಲು ಅರಸರೇ ಕಾರಣಿಭೂತರು ಎಂದರು.
ಎಸ್.ಜಿ.ವರ್ಮಾ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿ,ಅರಸು ಅವರು ಜೀತದಾಳು ಹಾಗೂ ಮಲಹೊರುವ ಪದ್ಧತಿಯನ್ನು ನಿμÉೀಧಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅರ್ಥ ಕಲ್ಪಿಸಿದವರು. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬಂತೆ ಎಲ್ಲಾ ಬಡವರಿಗೂ ವಸತಿ ಸೌಲಭ್ಯ, ಶಿಕ್ಷಣದಲ್ಲಿ ಸಮಾನತೆ ಕಲ್ಪಿಸುವ ಮೂಲಕ ಸಮಾಜಮುಖಿಯಾಗಿ ಶ್ರಮಿಸಿದವರು ಎಂದು ತಿಳಿಸಿದರು.ಜನಪ್ರಿಯ ಯೋಜನೆಗಳನ್ನು ಜನಪರ ಯೋಜನೆಗಳನ್ನಾಗಿ ಅನುμÁ್ಠನಗೊಳಿಸುವಂತೆ ಮಾಡಿದ ಕೀರ್ತಿ ಅರಸು ಅವರದ್ದು, ಸಾಮಾಜಿಕ ಸಂಬಂಧವನ್ನು ಬೆಳೆಸುವುದರಲ್ಲಿ ದಿಮಂತ ನಾಯಕರಾಗಿದ್ದವರು. ಇವರ ಮಾನವೀಯ ಗುಣ, ಪರಿವರ್ತನೆಯ ಪ್ರಜ್ಞೆ, ಕಾರ್ಯವೈಖರಿಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ತಿಳಿಸಿದರು.
ಮುಖ್ಯಗುರುಮಾತೆ ಅನಿತಾ ಶರ್ಮಾ ಮಾತನಾಡಿ, ಡಿ.ದೇವರಾಜ ಅರಸು ಅವರು ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಅವರ ಗೇಣಿ ಶಾಸನ, ಹಾವನೂರು ಆಯೋಗದಂತಹ ನಿರ್ಧಾರಗಳನ್ನು ತೆಗೆದುಕೊಂಡು ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದವರು ಅರಸು ಅವರು ತಮ್ಮ ನಿರ್ಧಾರದ ದೂರದೃಷ್ಠಿಯಿಂದ ಮುಂದಿನ ಪೀಳಿಗೆಯ ಬದುಕಿನ ಯೋಜನೆಗಳನ್ನು ರೂಪಿಸಿದವರು ಎಂದು ಹೇಳಿದರು.
ಶಿಕ್ಷಕರಾದ ಗೀತಾ ಸಿಪ್ಪಿ, ರಂಜಿತಾ ಹಿರೇಮಠ, ಭಾರತಿ ಚವ್ಹಾಣ, ಶ್ರೀರಾಮ ಚವ್ಹಾಣ, ಸಂಗೀತಾ, ಮಂಜುಳಾ ಸೇರಿದಂತೆ ಇತರರು ಹಾಜರಿದ್ದರು.