ಕಲಬುರಗಿ: ನವ ಕಲ್ಯಾಣ ಕರ್ನಾಟಕ ವಿಡಿಯೋ ಮತ್ತುಫೋ ಟೋಗ್ರಾಫರ್ ಅಸೋಸಿಯಲ್ ವತಿಯಿಂದ ವಿಶ್ವ ಛಾಯಾ ಗ್ರಹಣ ದಿನಾಚರಣೆಯನ್ನು ನಗರದ ಶರಣಬಸವೇಶ್ವರ ದೇವಸ್ಥಾನ ಮಹಾಮನೆಯಲ್ಲಿ ಶ್ರೀ ಶರಣಬಸವೇಶ್ವರ ಅಪ್ಪಾಜಿ, ಮಾತೃಶ್ರೀ ದಾಕ್ಷಾಣಿ ಅವಾಜಿ, ಚಿರಂಜೀವಿ ಶ್ರೀ ಶರಣಬಸಪ್ಪ ಅಪ್ಪಾಜಿ ಅವರುಗಳ ನೇತೃತ್ವದಲ್ಲಿ ಫೋಟೋ ತೆಗೆಯೋದ್ರ ಮೂಲಕ ವಿಶ್ವ ಫೋಟೋಗ್ರಾಫಿ ದಿನಾಚರಣೆ ಆಚರಿಸಲಾಯಿತು.
ಈಸಮಯದಲ್ಲಿ ಅಪ್ಪಾಜಿಯವರು ಮಾತನಾಡಿ ನಮ್ಮ ನಾಡಿನ ಪರಂಪರೆ ಇತಿಹಾಸ ಪ್ರಪಂಚದ ಎಲ್ಲಾ ಕಡೆ ಹಬಲು ಛಾಯಾಚಿತ್ರ ವಾಗಿದೆ ನಮ್ಮ ನಾಡಿನ ನಮ್ಮ ಕ್ಷೇತ್ರದ ವಿಷಯಗಳ ಬಗ್ಗೆ ಮತ್ತು ಪೂರ್ತಿ ಮನಪೂರ್ವಕ ಅರಿತುಕೊಳ್ಳಬೇಕಾದರೆ ಛಾಯಾಚಿತ್ರಗಳು ನೋಡಿ ತಿಳಿದುಕೊಳ್ಳುತ್ತಾರೆ ಸತ್ಯ ಸತ್ಯಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಛಾಯಾಚಿತ್ರ ಮೂಲ ಕಾರಣವಾಗಿದೆ ಎಂದು ತಿಳಿಸಿದರು.
ನಂತರ ಅವ್ವಾಜಿ ಅವರು ಮಾತನಾಡಿ ನಮ್ಮ ಮಹಿಳೆಯರು ಕೆಲವು ಕಾರ್ಯಗಳನ್ನು ಮಾಡಿದ್ದನ್ನು ಪತ್ರಿಕೆಯ ಮೂಲಕ ಪ್ರಕಟಿಸಿ ಮತ್ತು ಅವರ ವಿಷಯಗಳ ಬಗ್ಗೆ ಪರಿಪೂರ್ಣ ಮಾಹಿತಿ ಚಿತ್ರದ ಮೂಲಕ ತಿಳಿಸುವುದರಿಂದ ನಮ್ಮ ಹೆಣ್ಣು ಮಕ್ಕಳು ಬಹಳ ಮುಂದುವರಿಯು ಬೇಕಾಗಿದೆ ಅದಕ್ಕೆ ಎಲ್ಲರೂ ಸಹಕರಿಸಿ ನಮ್ಮ ಪರಂಪರೆಯ ನಮ್ಮ ನಾಡಿನ ಸಾಹಿತ್ಯ ಪ್ರಾಣಿ ಪಕ್ಷಿ ನಿಸರ್ಗದ ಎಲ್ಲಾ ವಿಷಯಗಳ ಬಗ್ಗೆ ಚಿತ್ರಗಳ ಮೂಲಕ ತಿಳಿದುಕೊಳ್ಳುವುದು ವಿಶೇಷವಾಗಿ ನಾವುಗಳು ನೋಡಿದ್ದು ಜಾತ್ರಾ ಮಹೋತ್ಸವ ನೇರ ಸಂಪರ್ಕ ಚಿತ್ರೀಕರಣ ಪ್ರಪಂಚದ ಎಲ್ಲಾ ಭಾಗದಲ್ಲಿ ವೀಕ್ಷಣೆ ಮಾಡುವುದನ್ನು ನಾವು ನೋಡಿದ್ದೇವೆ ಇಂದು ಓಲ್ಡ್ ಫೋಟೋಗ್ರಾಫಿಕ್ ಡೇ ಆಚರಣೆ ಮಾಡಲು ನಮ್ಮನ್ನು ಹೆಮ್ಮೆ ಅನಿಸುತ್ತಿದೆ. ಇನ್ನು ನಮ್ಮ ಭಾಗದ ಅನೇಕ ವಿಷಯಗಳು ನಮ್ಮ ಭಾಗದ ಛಾಯಾ ಚಿತ್ರಗಾರರು ಪ್ರಯತ್ನ ಪಡಬೇಕು ಅವರಿಗೂ ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ತಿಳಿಸಿದ್ದರು.
ಇದೇ ಸಮಯದಲ್ಲಿ ನವ ಕಲ್ಯಾಣ ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷರಾದ ಆನಂದ ನರೋಣ, ಸಂಯುಕ್ತ ಕರ್ನಾಟಕ ಛಾಯಾಚಿತ್ರ ದಾರ ರಾಜು ಎಸ್. ಕೋಸ್ಟಿ, ಸಂಘದ ಸದಸ್ಯರುಗಳಾದ ಶಿವಶರಣ ದಂಡೂರ್ಕರ್, ಶಿವರಾಜ್ ಸ್ವಾಮಿ, ಶರಣಗೌಡ, ಸುರೇಶ್ ಕಟ್ಟಿಮನಿ ಸಚಿನ್, ಮಹೇಶ್ ನೇಲ್ಲೂರ್, ವಿಶೇಷವಾಗಿ ಕಲ್ಯಾಣ ಪಾಟೀಲ್, ಅಲ್ಲಮಪ್ರಭು ದೇಶಮುಖ್ ಮತ್ತು ಅನೇಕರು ಉಪಸ್ಥಿದ್ದರು.