ಸರ್ವತೋಮುಖ ವಿಕಾಸಕ್ಕೆ ಶ್ರಮ: ಬಸವರಾಜ ಪಾಟೀಲ ಸೇಡಂ

0
25

ಕಲಬುರಗಿ: ಭಾರತ ವಿಕಾಸ ಸಂಗಮವು 2025 ರ ಜನೆವರಿ 29 ರಿಂದ ಫೆಬ್ರವರಿ 6 ರ ವರೆಗೆ ನಡೆಸಲಿರುವ 7 ನೇ ಭಾರತೀಯ ಸಂಸ್ಕೃತಿ ಉತ್ಸವದ ಮಾಧ್ಯಮ ವಿಭಾಗಕ್ಕೆ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂರಕ್ಷಕರಾದ ಬಸವರಾಜ ಪಾಟೀಲ ಸೇಡಂ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ದೇಶ-ವಿದೇಶಗಳಿಂದ 30-35 ಲಕ್ಷ ಜನರು ಭಾಗವಹಿಸುವ ಈ ಉತ್ಸವದ ಮಾಹಿತಿ ಮತ್ತು ಉತ್ಸವ ಸಂಬಂಧಿ ಪ್ರಸರಣ ಸಾಹಿತ್ಯ ನಿರ್ಮಾಣದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ್, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿ ಡಾ.ಸದಾನಂದ ಪೆರ್ಲ, ಕಲಬುರಗಿ ರಂಗಾಯಣದ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಅವರು ಪ್ರಮುಖರಾಗಿರುವ ಸಮಿತಿ ಮಾಡಲಾಗಿದೆ. ಸಮೂಹ ಮಾಧ್ಯಮಗಳ ಮೂಲಕ ಉತ್ಸವದ ಉದ್ದೇಶ ಮತ್ತು ಜನಮಾನಸದಲ್ಲಿ ಈ ಉತ್ಸವ ಬೀರುವ ಪರಿಣಾಮಗಳಿಂದ ಮುಂದಿನ ತಲೆಮಾರುಗಳಿಗೆ ಪ್ರಯೋಜನವಾಗಲಿದೆ ಎಂದರು.

Contact Your\'s Advertisement; 9902492681

ಭಾರತೀಯ ಸಂಸ್ಕೃತಿಯ ಮಹತ್ವ, ಕೃಷಿ, ಶಿಕ್ಷಣ, ಕಲೆ, ಸ್ವಯಂ ಉದ್ಯೋಗ, ಧರ್ಮನೀತಿ ಒಳಗೊಂಡಿರುವ ವಿಷಯಗಳಲ್ಲದೇ, ಪ್ರಕೃತಿ ಕೇಂದ್ರಿತ ವಿಕಾಸ, ಶಾಲೆ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು, ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುತ್ತದೆ ಎಂಬ ಮೂರು ತತ್ತ್ವಗಳ ಸಾಕ್ಷಾತ್ಕಾರಗೊಳುಸುವ ದಿಸೆಯಲ್ಲಿ ಈ ಉತ್ಸವ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಮಾರ್ಥಂಡ ಶಾಸ್ರಿ, ವಿ.ಶಾಂತರೆಡ್ಡಿ, ಡಾ.ಶ್ರೀನಿವಾಸ ಸಿರನೂರಕರ್, ಡಾ.ವಾಸುದೇವ ಅಗ್ನಿಹೋತ್ರಿ, ಡಾ.ಶ್ರೀಶೈಲ ಬಿರಾದಾರ, ವಿಶ್ವನಾಥ ಕೋರಿ, ಚನ್ನಬಸಪ್ಪ ಗವಿ, ನರಸಿಂಗರಾವ ಹೇಮನೂರ,ಸಂಜೀವ ಸಿರನೂರಕರ್, ವೆಂಕಟರಾವ ದೇಶಪಾಂಡೆ, ಮೋಹನ ಸೀತನೂರ, ಮೋಹನ್ ಸೀತನೂರ, ದತ್ತಾತ್ರೇಯ ಐನಾಪುರ, ಭೀಮರಾಯ ಹೇಮನೂರ, ಸಂತೋಷ ತೊಟ್ನಳ್ಳಿ ಉಪಸ್ಥಿತರಿದ್ದರು. ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರಭಾಕರ ಜೋಶಿ ಸ್ವಾಗತಿಸಿದರು. ಡಾ.ಸದಾನಂದ ಪೆರ್ಲ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here