ವಿಶ್ವ ಛಾಯಾಚಿತ್ರಗಾಹಣ ದಿನಾಚರಣೆಗೆ ಚಾಲನೆ

0
11

ಕಲಬುರಗಿ: ಸಮಾಜದಲ್ಲಿನ ಇತರರ ಕಣ್ಣಿಗೆ ಕಾಣದ ದೃಶ್ಯಗಳನ್ನು ಕಂಡು ಹಿಡಿಯುವವನೆ ನಿಜವಾದ ಛಾಯಾಗ್ರಾಹಕ. ಒಂದು ಛಾಯಾಚಿತ್ರ ಹೃದಯವನ್ನುನ ಕರಗಿಸುವ ಶಕ್ತಿಯನ್ನೂ ಸಹ ಹೊಂದಿದೆ. ಜಿಲ್ಲೆಯಲ್ಲಿರುವ ಪ್ರತಿಯೊಬ್ಬ ಛಾಯಾಗ್ರಾಹಕನು ಇಂದು ಸಂಘಟಿತರಾಗಿದ್ದು, ಅವರ ಸಂಘಕ್ಕೆ ಸರಕಾರದಿಂದ ಒಂದು ನಿವೇಶನ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಅಲ್ಲದೇ ಬಡ ಫೋಟೋಗ್ರಾಫರ್ ನ ಜೀವನಕ್ಕೆ ಅನುಕೂಲವಾಗುವಂತೆ ಬಡವರಿಗಾಗಿ ಸರಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಫೋಟೋಗ್ರಾಫರ್ಸ ಅಸೋಸಿಯೇಶನ್ ವತಿಯಿಂದ ಏರ್ಪಡಿಸಿದ ವಿಶ್ವ ಛಾಯಾಚಿತ್ರಗಾಹಣ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಒಂದು ಛಾಯಾಚಿತ್ರ ಸಾವಿರ ಪದಗಳಿಗಹೆ ಸಮ ಎಂಬುದು ಒಂದು ಸತ್ಯದ ಮಾತಿದೆ. ಒಂದು ಪುಟದಷ್ಟೂ ಬರೆದರೂ ಅರ್ಥವಾಗದ ವಿಷಯಗಳನ್ನು  ಒಂದು ಛಾಯಾಚಿತ್ರ ಕ್ಷಣಮಾತ್ರದಲ್ಲಿ ಮನಮುಟ್ಟುವಂತೆ ವಿವರಿಸುವ ಸಾಮಥ್ರ್ಯ ಹೊಂದಿದೆ. ಒಂದು ಘಟನೆಯ ಸಾಕ್ಷ್ಯಕ್ಕೆ ಛಾಯಾಚಿತ್ರ ಅತ್ಯಮೂಲ್ಯ ದಾಖಲೆ. ಅಲ್ಲದೇ ಗತಕಾಲದ ನೆನಪುಗಳ, ಸಂತಸದ ಕ್ಷಣಗಳು, ಸಂಭ್ರಮದ ಘಳಿಗೆಗಳು ಶಾಶ್ವತವಾಗಿಡುವಲ್ಲಿ ಛಾಯಾಚಿತ್ರದ ಪಾತ್ರ ಬಹಳ ದೊಡ್ಡದಿದೆ ಎಂದರು.

ಸಂಸದ ಡಾ. ಉಮೇಶ ಜಾಧವ ಮಾತನಾಡಿ, ಸಂಘವು ನಿವೇಶನ ಹೊಂದಿದ್ದರೆ ಅದರ ಕಟ್ಟಡಕ್ಕೆ 10 ಲಕ್ಷ ಅನುದಾನ ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು.

ಸಂಘದ ಅಧ್ಯಕ್ಷ ಬಸವರಾಜ ತೋಟದ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ವಿಶಾಲ ಧರ್ಗಿ, ಕಾಂಗ್ರೇಸ್ ಮುಖಂಡ ಲಿಂಗರಾಜ ತಾರಫೈಲ್, ಜೇಡಿಎಸ್ ಮುಖಂಡ ಕೃಷ್ಣಾರೆಡ್ಡಿ ಮಾತನಾಡಿದರು. ಸಂಘದ ಪ್ರಮುಖರಾದ ಅನೀಲಕುಮಾರ ಹುಮನಾಬಾದ, ರಮೇಶ ಲಾಲಬಂದ್ರೆ, ಪ್ರಕಾಶ ಶೇರಖಾನೆ, ಅನೀಲಕುಮಾರ ಗಣೇಶಕರ್, ಅಫಸರ್ ಪಟೇಲ್, ಗಂಗಾರಾಮ ರಾಠೋಡ, ಶಿರವಾಳಕರ್, ಮಡಿವಾಳಪ್ಪ ಹತ್ತೂರೆ, ಉಳು ಸ್ವಾಮಿ, ತುಳಸಿದಾಸ್, ಆಕಾಶ ಪೂಜಾರಿ, ಶ್ರೀನಿವಾಸ ಮಡಕಿ, ಮಂಜುಆಥ ಜಂಬಗಿ ವೇದಿಕೆ ಮೇಲಿದ್ದರು.

ಸಂಘದ ತಾಲೂಕಾಧ್ಯಕ್ಷರು ಹಾಗೂ ಜಿಲ್ಲೆಯ ಹಿರಿಯ ಛಾಯಾಚಿತ್ರಗ್ರಾಹಕರನ್ನು ಮತ್ತು ಛಾಯಾಚಿತ್ರಗ್ರಾಹಕರ ಪ್ರತಿಭಾವಂತ ಮಕ್ಕಳನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here