ಜನರನ್ನು ಆಧ್ಯಾತ್ಮಿಕದ ಕಡೆ ಕೊಂಡೊಯ್ಯುವ ಶಕ್ತಿ ಪ್ರವಚನಕ್ಕಿದೆ: ಶಾಸಕ ಅಲ್ಲಮಪ್ರಭು ಪಾಟೀಲ್

0
19

ಕಲಬುರಗಿ: ಆಧ್ಯಾತ್ಮಿಕ ಅರಿವು ಮೂಡಿಸುವುದು ಪುರಾಣ, ಪ್ರವಚಗಳಿಂದ ಮಾತ್ರ ಸಾಧ್ಯ.ಜನರನ್ನು ಆಧ್ಯಾತ್ಮಿಕದ ಕಡೆ ಕೊಂಡೋಯ್ಯುವ ಶಕ್ತಿ ಪ್ರವಚನಕ್ಕಿದೆ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅಭಿಪ್ರಾಯಪಟ್ಟರು.

ಶ್ರಾವಣ ಮಾಸದ ಅಂಗವಾಗಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಜಯನಗರ ಶಿವಮಂದಿರದಲ್ಲಿ ಒಂದು ತಿಂಗಳ ಆಧ್ಯಾತ್ಮಿಕ ಪ್ರವಚನ ಶಿವ ಧರ್ಮ ಪ್ರವಚನದ 4ನೇ ದಿನವಾದ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Contact Your\'s Advertisement; 9902492681

ಚಿಕ್ಕವರಿದ್ದಾಗ ನಾವು ಹಳ್ಳಿಗಳಲ್ಲಿ ಪುರಾಣ, ಪ್ರವಚನ ಕೇಳುತ್ತಿದ್ದೇವು.ಇಂದು ಬದಲಾದ ದಿನಗಳಲ್ಲಿ ಹಳ್ಳಿಯಂತೆ ನಗರಗಳಲ್ಲೂ ಜನರು ಪ್ರವಚನಗಳತ್ತ ಆಸಕ್ತಿ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ.ಜನರಲ್ಲಿ ಆಧ್ಯಾತ್ಮಿಕ ತೆ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದ ಅವರು ಭಕ್ತಿ ಇಂದ ನಡೆದರೆ ದೇವರು ಶಕ್ತಿ ಕರುಣಿಸುತ್ತಾನೆ.ನಾನು ಜನರಿಂದ ಆಯ್ಕೆಯಾದ ಶಾಸಕ.ವಿಶ್ವಾಸವಿಟ್ಟು ನನ್ನನ್ನು ಗೆಲ್ಲಿಸಿದ್ದಾರೆ.ಮುಖ್ಯಮಂತ್ರಿಗಳು ನೀಡುವ ಅನುದಾನಕ್ಕೆ ಕಾಯದೆ ಕೊಟ್ಟ ಮಾತಿನಂತೆ ಕೈಲಾದಷ್ಟು ಅಭಿವೃದ್ಧಿ ಕೆಲಸಗಳು ಮಾಡುವೆ.ಬಡಾವಣೆಗಳಲ್ಲಿರುವ ಕುಂದುಕೊರತೆಗಳ ಬಗ್ಗೆ ದೂರುಗಳು ಬಂದಿವೆ.ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಪರಿಹಾರ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.

ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದು ಅಪಾರ ಜನರು ಭಕ್ತಿಯಿಂದ ಮಠ.ಮಂದಿರಗಳಿಗೆ ಬರುತ್ತಿದ್ದಾರೆ.ಗುಡಿಗಳ ಜೀರ್ಣೋದ್ಧಾರಕ್ಕಾಗಿ ಶಾಸಕರು ಗಮನ ಹರಿಸಬೇಕು ಎಂದರು.

ಪ್ರವಚನಕಾರ ಶಿವಶಂಕರ ಬಿರಾದಾರ, ಹಿರಿಯ ಮುಖಂಡ ಗೌರಿಶಂಕರ ಶಾಸ್ತ್ರೀ ವೇದಿಕೆಯಲ್ಲಿ ಇದ್ದರು.ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಸ್ವಾಗತಿಸಿದರು.ಜಿ.ಜಿ.ವಣಿಕ್ಯಾಳ ನಿರೂಪಿಸಿದರು. ವೀರೇಶ ದಂಡೋತಿ, ಶಿವಪುತ್ರಪ್ಪ ಮರಡಿ, ಬಂಡಪ್ಪ ಕೇಸೂರ, ಸಿದ್ಧಲಿಂಗ ಗುಬ್ಬಿ,ಬಸವರಾಜ ಮಾಗಿ,ಎಂ.ಡಿ.ಮಠಪತಿ, ಭೀಮಾಶಂಕರ ಶೆಟ್ಟಿ,ಮಲ್ಲಿಕಾರ್ಜುನ ಕಲ್ಲಾ, ಎಸ್.ಡಿ.ಸೇಡಂಕರ,ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಬೀದಿಮನಿ, ವಿರೇಶ ಹುಡುಗಿ, ಈರಯ್ಯ ಸ್ವಾಮಿ ಮಾಡಬಾಳಮಠ, ಸಾಜಿದ್ ಅಲಿ ರಂಜೊಳ್ವಿ, ವಿನೋದ ಪಾಟೀಲ, ಮಂಜುನಾಥ ಶಾಸ್ತ್ರೀ, ಪ್ರಶಾಂತ ತಂಬೂರಿ, ಮಹಿಳಾ ಘಟಕದ ಸದಸ್ಯರಾದ ಅನುರಾಧ ಕುಮಾರಸ್ವಾಮಿ, ಶೈಲಜಾ ವಾಲಿ, ಅನಿತಾ ನವಣಿ, ಸುಷ್ಮಾ ಮಾಗಿ, ವಿಜಯಾ ದಂಡೋತಿ, ಗೀತಾ ಸಿರಗಾಪೂರ, ಲತಾ ತುಪ್ಪದ, ವಿಜಯಲಕ್ಷ್ಮಿ ಪುರ್ಮಾ, ಶಕುಂತಲಾ ಮರಡಿ ಸೇರಿದಂತೆ ವಿವಿಧ ಬಡಾವಣೆಗಳ ಹಿರಿಯರು, ಮಹಿಳೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here