ದೇಶದ ಸವಾರ್ಂಗೀಣ ಬೆಳವಣಿಗೆಯಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಪಾತ್ರ ಮಹತ್ತರವಾದುದು; ಸಭಾಪತಿ ಬಸವರಾಜ ಹೊರಟ್ಟಿ

0
16

ಬೆಂಗಳೂರು/ಹುಬ್ಬಳ್ಳಿ; ದೇಶದ ಪ್ರಗತಿ ಹಾಗೂ ಅಭಿವೃದ್ದಿಯ ಮುನ್ನೋಟವು ಪ್ರಜಾಪ್ರಭುತ್ವ ಸಂಸ್ಥೆಗಳ ಪರಿಣಾಮಕಾರಿ ಕಾರ್ಯಚಟುವಟಿಕೆಗಳ ಮೇಲೆ ಅವಲಂಬಿತವಾಗಿದ್ದು, ಜನಪ್ರತಿನಿಧಿಗಳ ಕ್ರೀಯಾಶೀಲತೆ ಹಾಗೂ ಪಕ್ಷಬೇಧವಿಲ್ಲದ ಅಭಿವೃದ್ಧಿಪರ ಚಿಂತನೆಯಿಂದ ಮಾತ್ರ ರಾಷ್ಟ್ರದ ಭವಿಷ್ಯ ಉಜ್ವಲವಾಗಬಲ್ಲದು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಭಿವ್ಯಕ್ತಪಡಿಸಿದರು.

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಮೂರು ದಿನಗಳ 9 ನೇ ಕಾಮನ್‍ವೆಲ್ತ್ ಸಂಸದೀಯ ಸಂಘದ ಭಾರತ ವಲಯದ ಸಮ್ಮೇಳನದಲ್ಲಿ “ಪ್ರಜಾಪ್ರಭುತ್ವ ಸಂಸ್ಥೆಗಳ ಮೂಲಕ ರಾಷ್ಟ್ರವನ್ನು ಸಧೃಡಗೊಳಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ” ಎಂಬ ವಿಷಯದ ಕುರಿತು ಅವರು ವಿಚಾರ ಮಂಡಿಸಿದರು.

Contact Your\'s Advertisement; 9902492681

ನಾಗರೀಕ ಸಮಾಜ ಹೆಚ್ಚು ಪ್ರಜಾಸತ್ತಾತ್ಮಕವಾಗಿರಬೇಕೆನ್ನುವುದು ಪ್ರಜಾಪ್ರಭುತ್ವದ ಮೂಲ ಆಶಯವಾಗಿದ್ದು, ಈ ಆಶಯಕ್ಕೆ ಪೂರಕವಾಗಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಜಾತ್ಯಾತೀತತೆ, ಧಾರ್ಮಿಕ ಸಹಿಷ್ಣುತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿಂದುಳಿದ ಹಾಗೂ ದಮನಿತ ವರ್ಗಗಳ ಏಳಿಗೆಗಾಗಿ ನಮ್ಮ ಸಂವಿಧಾನದಲ್ಲಿ ಸಂಸದೀಯ ಮೌಲ್ಯಗಳನ್ನು ರೂಪಿಸಲಾಗಿದೆ ಇದು ಇಂದಿನ ಆಧುನಿಕ ವಿಚಾರವೆನಿಸಿದರೂ ಈ ವೈಜ್ಞಾನಿಕ ಪರಿಕಲ್ಪನೆಯು 12 ನೇ ಶತಮಾನದಲ್ಲಿಯೇ ಕರ್ನಾಟಕದಲ್ಲಿ ಬೀಜಾಂಕುರವಾಗಿರುವುದು ಅಭಿಮಾನದ ಸಂಗತಿ. ಜನಸಾಮಾನ್ಯರ ಬದುಕಿಗೆ ಧ್ವನಿಯಾದ ಜಗಜ್ಯೋತಿ ಬಸವೇಶ್ವರರು ಪ್ರತಿಪಾದಿಸಿದ ಅದರ್ಶ ನೈತಿಕ ಮೌಲ್ಯಗಳೇ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಅಡಿಪಾಯ ಒದಗಿಸಿವೆ ಎಂದು ಸಭಾಪತಿ ಅವರು ತಿಳಿಸಿದರು.

ಪ್ರಜಾಪ್ರಭುತ್ವದ ಸಾರ್ಥಕತೆಯಲ್ಲಿ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಜನರ ಸಂಕಷ್ಠ, ಬವಣೆಗಳ ಧ್ವನಿಗೆ ಜನಪ್ರತಿನಿಧಿಗಳು ಕಿವಿಯಾದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನೈಜ ಅರ್ಥ ಬರುತ್ತದೆ. ಜನರ ಮಾನವೀಯ ಅಗತ್ಯತೆಗಳನ್ನು ಕಾನೂನಿನ ಚೌಕಟ್ಟಿಗೆ ತರುವುದೇ ಶಾಸನ ರಚನೆ ಆಗಿದ್ದು, ಈ ಹಂತದಲ್ಲಿ ಕಾಯಾರ್ಂಗ ಮತ್ತು ಶಾಸಕಾಂಗಳೆರಡು ರಥದ ಜೋಡಿ ಗಾಲಿಗಳ ಹಾಗೆ ಚಲಿಸಿದರೆ ಮಾತ್ರ ಪ್ರಜಾಪ್ರಭುಯತ್ವ ಯಶಸ್ವಿಯಾಗುತ್ತದೆ. ಪ್ರಜಾಪ್ರಭುತ್ವದ ಮುಖ್ಯ ಉದ್ದೇಶಗಳನ್ನು ಅತ್ಯಂತ ದಕ್ಷ ಹಾಗೂ ಪರಿಪೂರ್ಣ ನೆಲೆಗಳಲ್ಲಿ ಈಡೇರಿಸಲು ಇರುವ ಏಕೈಕ ವೇದಿಕೆ ಎಂದರೆ ಉಭಯ ಮಂಡಲದ ಸದನಗಳು ಎಂದು ಬಣ್ಣಿಸಿದರು.

ದೇಶದ ಉನ್ನತಿಯಲ್ಲಿ ಜನಪ್ರತಿನಿಧಿಗಳ ಪಾತ್ರ ಹಾಗೂ ನಡವಳಿಕೆ ಕುರಿತು ತಮ್ಮ ನಾಲ್ಕು ದಶಕಗಳ ಅನುಭವವನ್ನು ಮೆಲುಕು ಹಾಕಿದ ಅವರು, ಜಾತಿ, ಧರ್ಮ ಲಿಂಗಗಳ ಭೇದವಿಲ್ಲದೆ ಜನರ ಅರ್ಶೀವಾದದಿಂದ ಜನಪ್ರತಿನಿಧಿಯಾಗುವ ಅವಕಾಶವನ್ನು ಪ್ರಜಾಪ್ರಭುತ್ವ ಕಲ್ಪಿಸಿಕೊಟ್ಟಿದ್ದು, ಇಂತಹ ಪವಿತ್ರ ಸನ್ನಿವೇಶದಲ್ಲಿ ಜನರ ಬೇಕು ಬೇಡಗಳ, ದುಖಃ ದುಮ್ಮಾನಗಳನ್ನು ಆಲಿಸುವ, ಚರ್ಚಿಸುವ, ನಿರ್ವಹಿಸುವ ಔದಾರ್ಯವನ್ನು ಪ್ರತಿಯೊಬ್ಬ ಜನಪ್ರತಿನಿಧಿಯು ತೋರಬೇಕು. ಪಕ್ಷಬೇಧ ಮರೆತು ಪರಸ್ಪರ ವಿಶ್ವಾಸಾರ್ಹತೆಯಿಂದ ವರ್ತಿಸಿ ಎಲ್ಲಾ ಜನಪ್ರತಿನಿಧಿಗಳು ನಾಡಿನ ಹಾಗೂ ದೇಶದ ಅಭ್ಯುದಯಕ್ಕೆ ಕಟಿಬದ್ಧರಾಗುವ ಅವಶ್ಯಕತೆಯಿದೆ ಎಂದರು.

ಸಂಸದೀಯ ಮೌಲ್ಯಗಳನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಅವುಗಳ ಕಾರ್ಯರೂಪಕ್ಕೆ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುವುದು ನಮ್ಮೆಲ್ಲರ ಅಧ್ಯತೆಯಾಗಬೇಕಿದೆ. ಜನರಿಂದ ಆಯ್ಕೆಯಾದ ಪ್ರತಿಯೊಬ್ಬ ಪ್ರತಿನಿಧಿಯು ನಿರ್ಧಿಷ್ಟ ನೀತಿ ಸಂಹಿತೆಯನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಪೂರ್ವಿಕ ಸಂಸದೀಯ ಪಟುಗಳ ಹೆಜ್ಜೆ ಗುರುತುಗಳಲ್ಲಿರುವ ತತ್ವಾದರ್ಶ ಮೌಲ್ಯಗಳನ್ನು ಸಕಾಲಿಕ ವಿವೇಕದೊಂದಿಗೆ ಗ್ರಹಿಸಿ ಅವುಗಳನ್ನು ಕಾರ್ಯರೂಪಗೊಳಿಸುವ ಸಂಕಲ್ಪ ಮಾಡಬೇಕಾಗಿರುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ ಎಂದು ತಿಳಿಸಿದರು.

ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ದೇಶದ ಎಲ್ಲಾ ರಾಜ್ಯಗಳ ವಿಧಾನ ಸಭೆಯ ಸಭಾಧ್ಯಕ್ಷರು, ಉಪಸಭಾಧ್ಯಕ್ಷರುಗಳು ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಹಾಗೂ ಉಪಸಭಾಪತಿಗಳು ಭಾಗವಹಿಸಿದ್ದಾರೆ. ಲೋಕಸಭಾಧ್ಯಕ್ಷ ಓಂ ಬಿರ್ಲಾ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್, ರಾಜ್ಯಸಭೆಯ ಉಪಸಭಾಪತಿ ಹರಿವಂಶ, ರಾಜಸ್ಥಾನದ ವಿಧಾನ ಸಭಾಧ್ಯಕ್ಷ ಸಿ.ಪಿ ಜೋಷಿ ಸೇರಿದಂತೆ ರಾಜಸ್ಥಾನದ ಶಾಸಕರು, ಸಂಸದರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here