ಕಲಬುರಗಿ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಕ್ಷಣ ಜನಪರ ಯೋಜನೆಗಳನ್ನು ಜನರಿಗೆ ನೀಡುವ ಮೂಲಕ ಜನಪರ ಸರಕಾರವಾಗಿ ಕೆಲಸ ಮಾಡುತ್ತಿರುವುದನ್ನು ಕಂಡು ಬಿಜೆಪಿಯಲ್ಲಿನ ಪ್ರಮುಖರು ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿಯ ನಿಗಮ ಮಂಡಳಿ, ಅಕಾಡೆಮಿ ಹಾಗೂ ವಿವಿಧ ಪ್ರಶ್ತಿಗಳನ್ನು ನೀಡುತ್ತಿರುವುಕ್ಕೆ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಸಾಜಿದ್ ಅಲಿ ರಂಜೋಳ್ವಿ ವಿರೋಧ ವ್ಯಕ್ತಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಹಲವು ನಿಷ್ಠಾವಂತ ಕಾರ್ಯಕರ್ತರು ನಿಸ್ವಾರ್ಥವಾಗಿ ದೂಡಿಯುತ್ತಿದ್ದಾರೆ. ಅವರನ್ನು ಹೊರೆತುಪಡಿಸಿ ಬಿಜೆಪಿ ತೊರೆದು ಪ್ರಭಾವನ್ನು ಬಳಸಿಕೊಂಡು ಅವಕಾಶವಾದಿ ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹುದ್ದೆಗಳನ್ನು ಪಡೆದುಕೊಳ್ಳು ಪಕ್ಷಕ್ಕೆ ಬರುತ್ತಿದ್ದಾರೆಂದು ಆರೋಪಿಸಿದ್ದಾರೆ.
ಅವಕಾಶವಾದಿಗಳ ವಿರುದ್ಧ ಜಾಗೃತರಾಗಿ ಅಕಾಡೆಮಿಗಳು, ಮಂಡಳಿಗಳು ಮತ್ತು ನಿಗಮಗಳ ಅಧ್ಯಕ್ಷ ಮತ್ತು ಸದಸ್ಯರಾಗಿ ಮರುನಾಮಕರಣ ಮಾಡಬಾರದು. ಅವರಿಗೆ ಪ್ರಶಸ್ತಿಗಳು ಮತ್ತು ಪ್ರಶಸ್ತಿಗಳನ್ನು ನೀಡಬಾರದು. ಅವಕಾಶವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು, ಏಕೆಂದರೆ ಈ ಜನರ ಪಾತ್ರವು ಕಾಂಗ್ರೆಸ್ನ ಸ್ಥಿರತೆಗೆ ಬಹಳ ಅನುಮಾನಾಸ್ಪದ ಮತ್ತು ನಿಷ್ಪ್ರಯೋಜಕವಾಗಿರಬೇಕು ಎಂದು ಹೇಳಿದರು.
ಕಾಂಗ್ರೆಸ್ ಸರಕರವನ್ನು ರಾಜ್ಯದಲ್ಲಿ ಅಧಿಕಾರಿಕ್ಕೆ ಬರಲು ನಿಷ್ಠಾವಂತ ಮತ್ತು ಪ್ರಮಾಣಿಕ ಕಾರ್ಯಕರ್ತರ ಶ್ರಮ ಮಹತ್ವಪೂರ್ಣವಾಗಿದೆ. ನಿಷ್ಠಾವಂತಹ ಹಾಗೂ ಹಿರಿಯ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷ ಗುರುತಿಸಿ ಸುಕ್ತವಾದ ಸ್ಥಾನಮಾನ ನೀಡಬೇಕೆಂದು ಸಾಜಿದ್ ಅಲಿ ರಂಜೋಳ್ವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವುಕುಮಾರ ಅವರಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.