ಸುರಪುರ: ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭ

0
25

ಸುರಪುರ: ನಗರದ ಬಸ್ ನಿಲ್ದಾಣ ಸಮೀಪ ಮಡಿವಾಳ ಮಾಚಿದೇವ ದೇವಸ್ಥಾನದ ಹತ್ತಿರ ವನವಾಸಿ ಕಲ್ಯಾಣ ಕರ್ನಾಟಕ ಹಾಗೂ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಸುರಪುರದ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರ ಉದ್ಘಾಟನೆ ಮಾಡಲಾಯಿತು

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗಂಗಾಧರ ನಾಯಕ ತಿಂಥಣಿ ವನವಾಸಿ ಕಲ್ಯಾಣ ರಾಜ್ಯ ಸಹ ಕಾರ್ಯದರ್ಶಿಗಳು ಮಾತನಾಡುತ್ತಾ,ವನವಾಸಿ ಕಲ್ಯಾಣ ಕರ್ನಾಟಕ ರಾಜ್ಯವಲ್ಲದೆ ಇಡೀ ಭಾರತ ದೇಶಾದ್ಯಂತ ವ್ಯವಸ್ಥಿತವಾಗಿರುವಂತಹ ಸಂಘಟನೆಯಾಗಿದೆ ಇದರಲ್ಲಿ ಬಹಳ ಪ್ರಾಮಾಣಿಕ ಮತ್ತು ನಿಷ್ಠೆ ಸತ್ಯದಿಂದ ಮತ್ತು ಫಲಾಫೇಕ್ಷೆ ಇಲ್ಲದೆ ಸಾವಿರಾರು ಕಾರ್ಯಕರ್ತರು ಸೇವೆಯನ್ನು ಮಾಡುತ್ತಿದ್ದಾರೆ, ಇಂಥ ಅಖಿಲ ಭಾರತೀಯ ಮಟ್ಟದ ವನವಾಸಿ ಕಲ್ಯಾಣ ಆಶ್ರಮದ ಸಂಸ್ಥೆ ವತಿಯಿಂದ ಇಡೀ ದೇಶಾದ್ಯಂತ ವನ ಬಂಧುಗಳಿಗೆ ಅಂದರೆ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಶೈಕ್ಷಣಿಕವಾಗಿ ಅಭಿವೃದ್ಧಿಗಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿಗಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಗಾಗಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತಿದೆ ಎಂದು ಹೇಳಿದರು.

Contact Your\'s Advertisement; 9902492681

ಅತಿಥಿ ವೆಂಕಟೇಶ್ ಬೇಟೆಗಾರ ಮಾತನಾಡುತ್ತಾ, ವನವಾಸಿ ಕಲ್ಯಾಣ ಸಂಸ್ಥೆಯು ಅಖಿಲ ಭಾರತೀಯ ಮಟ್ಟದಲ್ಲಿ ಒಳ್ಳೆಯ ಮೌಲ್ಯವರ್ಧಿತ ಸಂಸ್ಥೆಯಾಗಿದೆ ಬಹಳ ಪ್ರಾಮಾಣಿಕತೆಯಿಂದ ಪರಿಶಿಷ್ಟ ಪಂಗಡದ ಜನರ ಶ್ರೇಯೋ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ ಇಂದು ಸುರುಪುರದಲ್ಲಿ ಉಚಿತ ಕಂಪ್ಯೂಟರ್ ತರಬೇತಿಯನ್ನು ನೀಡುತ್ತಿರುವುದು ಇದೊಂದು ದೊಡ್ಡ ಸಾಧನೆ ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ರಮೇಶ್ ದೊರೆ ಆಲ್ದಾಳ ವನವಾಸಿ ಕಲ್ಯಾಣ ತಾಲೂಕ ಸಮಿತಿ ಅಧ್ಯಕ್ಷರು ವಹಿಸಿದ್ದರು, ಅಧ್ಯಕ್ಷತೆಯನ್ನು ಕಾಶಪ್ಪ ದೊರೆ ಯಾದಗಿರಿ ವನವಾಸಿ ಕಲ್ಯಾಣ ಶ್ರದ್ಧಾ ಜಾಗರಣ ವಿಭಾಗ ಪ್ರಮುಖರು ವಹಿಸಿದ್ದರು. ಈ ಸಂದರ್ಭದಲ್ಲಿ ರಕ್ಷಾ ಬಂಧನ ಕೂಡ ಸಂದೇಶಗಳನ್ನು ಓದಿ ಪರಸ್ಪರ ನೂಲು (ರಾಕಿ) ಕಟ್ಟುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮವನ್ನು ಮಾಡಲಾಯಿತು. , ಗುರುನಾಥ್ ರೆಡ್ಡಿ, ಸಿದ್ದನಗೌಡ ಪಾಟೀಲ್, ಬಲಭೀಮ ನಾಯಕ್ ನ್ಯಾಯವಾದಿಗಳು, ಶಂಭುಲಿಂಗ ಶಹಭಾದಿ, ಕನಕಚಲ ನಾಯಕ ಯಡಿಯಾಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು ಬಸವರಾಜ್ ಬಡಿಗೇರ್ ನೆರವೇರಿಸಿದರು ಮಂಜುಳ ಹಸನಾಪುರ್ ವೆಂಕಟೇಶ್ ಯಮನೂರ್, ಭೀಮಾಶಂಕರ್ ನಾಯಕ್ ಲಿಂಗದಳ್ಳಿ ಭಾಗವಹಿಸಿದ್ದರು.

ವನವಾಸಿ ಕಲ್ಯಾಣ ಸಂಸ್ಥೆಯ ಮನೆ ಪಾಠ ಕೇಂದ್ರದ ಶಿಕ್ಷಕರು ಹಾಗೂ ತಾಲೂಕ ಪ್ರಮುಖರು ಹಾಗೂ ಜಿಲ್ಲಾ ಪ್ರಮುಖರು ನಗರ ಸಮಿತಿಯ ಪದಾಧಿಕಾರಿಗಳು ಹಾಗೂ ತಾಲೂಕ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here