ವಾಡಿ: ಬಸವಾದಿ ಶರಣರ ತತ್ವ ಆದರ್ಶ ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು ಎಂದು ರಾವೂರಿನ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
ಶ್ರಾವಣ ಮಾಸಾಚರಣೆ ನಿಮಿತ್ತ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದಲ್ಲಿ ಏರ್ಪಡಿಸಿದ್ದ ಶಿವಲಿಂಗ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಬಸವಾದಿ ಶರಣರು ಕಾಯಕದ ಮೇಲೆ ಶ್ರದ್ಧಾ ಭಕ್ತಿ ಇಟ್ಟು ಮಾನವ ಕುಲಕ್ಕೆ ಹಾಗು ಸಮಾಜಕ್ಕೆ ಮಾದರಿಯಾಗಿದ್ದರು.
ಆದರೆ ಇಂದಿನ ಯುವ ಜನಾಂಗದಲ್ಲಿ ಸಂಯಮ ಕಡಿಮೆಯಾಗುತ್ತಿದ್ದು, ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಸಂಯಮ ಸಂಸ್ಕೃತಿಯನ್ನು ಮತ್ತೆ ಬೆಳೆಸಬೇಕಾದರೆ ಸ್ವಾಮಿ ವಿವೇಕಾನಂದ, ಬಸವಣ್ಣನಂತಹ ಮಹಾಪುರುಷರ ತತ್ವ ದರ್ಶನ ಅವಶ್ಯವಾಗಿ ಬೇಕಾಗಿದೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ, ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ಮುಖಂಡರಾದ ಪರುತಪ್ಪ ಕರದಳ್ಳಿ, ಸಿದ್ದಣ್ಣ ಕಲಶೆಟ್ಟಿ, ಅಣ್ಣಾರಾವ ಪಸಾರೆ, ಬಸವರಾಜ ಶೆಟಗಾರ, ಮಲ್ಲಣ್ಣಗೌಡ ಗೌಡಪ್ಪನೋರ, ಚನ್ನಪ್ಪ ಸೂಲಹಳ್ಳಿ, ಸಂಗಣ್ಣ ಇಂಡಿ, ಅಮೃತಪ್ಪ ದಿಗ್ಗಾಂವ, ಅಶೋಕ ಖಾನಕುರ್ತೆ, ವೀರಣ್ಣಗೌಡ ನಾಲವಾರ, ವೀರಣ್ಣ ಯಾರಿ, ಮಹಾಲಿಂಗ ಶೆಳ್ಳಗಿ, ಕಾಶೀನಾಥ ಶೆಟಗಾರ, ಬಸವರಾಜ ಯರಗಲ್, ನಿಂಗಣ್ಣ ದೊಡ್ಡಮನಿ, ಅಯ್ಯಪ್ಪ ಪಂಚಾಳ, ಶ್ರೀಶೈಲ ಜಿರೊಳಿ, ವಿಶ್ವನಾಥ ಪಡಶೆಟ್ಟಿ, ರಾಜಶೇಖರ ಧೂಪದ, ಕಾಶಿನಾಥ ಪಾನಗಾಂವ, ಮಹಾಂತಗೌಡ ಗುಡೂರ, ಸತೀಶ ಸಾವಳಗಿ, ವಿಶಾಲ ಕಲಶೆಟ್ಟಿ, ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.