ಜೀವ ತೆಗೆದವ ಜೀವನಕ್ಕೆ ಹೆದರಿ ಪ್ರಾಣ ಬಿಟ್ಟ!

0
100

ಕಲಬುರಗಿ: ನಿನ್ನೆ ಅಫಜಲಪುರ ತಾಲೂಕಿನ ನೀಲೂರ ಗ್ರಾಮದಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ಹೆದರಿಕೊಂಡು ನೇಣಿಗೆ ಶರಣಾದ ಘಟನೆ ತಾಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ನಡೆದಿದೆ.

ಪೋಸಯ್ಯ ಕಲ್ಯಾಣಕರ್ (28) ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಸ್ಟೇಶನ್ ಗಾಣಗಾಪುರ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ನಿನ್ನೆ ರಾತ್ರಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Contact Your\'s Advertisement; 9902492681

ಹಂದಿ ಹಿಡಿಯುವ ಕಾಯಕ ಮಾಡುತ್ತಿದ್ದ ಆರೋಪಿ, ನಿನ್ನೆ ಮಧ್ಯಾಹ್ನ ನೀಲೂರ ಗ್ರಾಮದಲ್ಲಿ ಬಹಿರ್ದಸೆಗೆ ಹೋಗಿದ್ದ ಲಕ್ಷ್ಮಿಬಾಯಿ ಹೂಗಾರ ಎಂಬ ಮಹಿಳೆಯನ್ನು ಕೊಲೆ ಮಾಡಿ ಆಕೆ ಬಳಿಯ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಆತನ ಬಂಧನಕ್ಕೆ ಸ್ಟೇಷನ್ ಗಾಣಗಾಪುರದಲ್ಲಿರುವ ಆತನ ಮನೆಗೆ ತೆರಳಿದ್ದರು.

ಆದರೆ, ಆ ಸಮಯದಲ್ಲಿ ಆರೋಪಿ ಮನೆಯಲ್ಲಿ ಇರದ ಕಾರಣ ಹಿಂತಿರುಗಿದ್ದಾರೆ. ಬಳಿಕ ಪೊಲೀಸರು ಮ‌ನೆಯವರೆಗೆ ಬಂದಿರುವ ವಿಷಯ ತಿಳಿದ ಆರೋಪಿ ಪೋಸಯ್ಯ ಹೆದರಿಕೊಂಡು ತಡರಾತ್ರಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ರೇವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here