ತಿಂಥಣಿ: ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬ ಆಚರಣೆ

0
12

ಸುರಪುರ: ತಾಲೂಕಿನ ತಿಂಥಣಿಯ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ತಾಲೂಕು ಆಡಳಿತ ದಿಂದ ವಿಶೇಷವಾಗಿ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಯಿತು.ಶುಕ್ರವಾರ ಮುಂಜಾನೆ ವಿಶೇಷವಾಗಿ ಪೂಜೆ ನೆರವೇರಿಸಲಾಯಿತು.

ನಂತರ ತಹಸೀಲ್ದಾರ್ ವಿಜಯಕುಮಾರ ಕೆ ಅವರು ಸುಮಂಗಲಿಯರಿಗೆ ಕುಪ್ಪಸ ಬಳೆ ಅರಿಸಿನ ಕುಂಕುಮ ಸೇರಿದಂತೆ ವಿವಿಧ ವಸ್ತುಗಳ ಬಾಗಿನ ವಿತರಿಸುವ ಮೂಲಕ ವಿಶೇಷವಾಗಿ ಹಬ್ಬ ಆಚರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮೌನೇಶ್ವರ ಮಹಾಸ್ವಾಮೀಜಿ,ಮೌನೇಶ್ವರ ದೇವಸ್ಥಾನ ಸಮಿತಿ ಸದಸ್ಯರಾದ ವೆಂಟಕೇಶ ಯರಡೋಣಿ,ಮಲ್ಲಪ್ಪ ಕುರ್ಲಿ,ಪದ್ಮಾವತಿ ಚಂದ್ರಶೇಖರ ವಿಶ್ವಕರ್ಮ ಹಾಗೂ ಗ್ರಾಮದ ಮುಖಂಡರಾದ ಗಂಗಾಧರ ನಾಯಕ ತಿಂಥಣಿ,ಮಾನಯ್ಯ ಕವಾಲ್ದಾರ್,ಪರಮಣ್ಣ ಹುಣಸಿಹೊಳೆ,ಚಂದ್ರಶೇಖರ ಮುತ್ಯಾ ಕೊಡೇಕಲ್,ಜನ ದರ್ಶನ ವೇದಿಕೆ ಜಿಲ್ಲಾಧ್ಯಕ್ಷ ಮಾನಯ್ಯ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here