ಮಾಚನೂರು ಗ್ರಾಮಕ್ಕೆ ಖಾಯಂ ಶಿಕ್ಷಕರ ನೇಮಕ್ಕೆ ಉಪನಿರ್ದೇಶಕರಿಗೆ ಎಚ್.ಕ.ಎಸ್.ಎಫ್ ಆಗ್ರಹ

0
126

ರಾಯಚೂರು/ಮಾನ್ವಿ: ಹೈದ್ರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟ ವತಿಯಿಂದ ಮಾಚನೂರು ಗ್ರಾಮಸ್ಥರ ಪರವಾಗಿ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ  ಮತ್ತು ಪ್ರೌಢ ಶಾಲೆ ಮಾಚನೂರು ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಿಸುವಂತೆ ಮತ್ತು ಪ್ರೌಢಶಾಲೆಯ ಕೊಠಡಿಗಳನ್ನು ಶೀಘ್ರದಲ್ಲಿ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಒಕ್ಜೂಟದ ನ್ಯಾಯವಾದಿ ಎಂ.ಮಲ್ಲೇಶ ಮಾಚನೂರು ಮನವಿ ಸಲ್ಲಿಸಿ ಆಗ್ರಹಿಸಿದರು.

ಉಪನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ ಶೀಘ್ರದಲ್ಲೇ ಗ್ರಾಮದ ಶೈಕ್ಷಣಿಕ ಸಮಸ್ಯೆಗೆ ಕ್ರಮಕ್ಕೆ ಮನವಿ ಮಾಡಿದ್ದು,  ಶಿಕ್ಷಕರನ್ನು ನೇಮಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಅವರು ತಿಳಿಸಿದರು. ಈಸಂದರ್ಭದಲ್ಲಿ ವಿಜಯ ಮಾಚನೂರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here