ಜೇವರ್ಗಿ: ಸ್ಥಳೀಯ ಬಿಜೆಪಿ ಮುಖಂಡನೊಬ್ಬ ತಲ್ವಾರ್ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ವೇಳೆ ಸರ್ಕಲ್ ಇನ್ಸಪೇಕ್ಟರ್ ಸಹ ಇದ್ದರು ಎನ್ನುವ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ಸಖತ್ ವೈರಲ್ ಆಗಿವೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಪಿಐ ಡಿ.ಬಿ ಪಾಟೀಲ್ˌ ಬಿಜೆಪಿ ಮುಖಂಡ ಶರಣು ಕೊಳಕೂರ ಬರ್ತಡೆಗೆ ಹೋಗಿದ್ದು ನಿಜ ಅಂತ ಒಪ್ಪಿಕೊಂಡಿದ್ದಾರೆ. ಆದರೆ ನಾನಿದ್ದ ಸಂದರ್ಭದಲ್ಲಿ ಇಂತಹ ಅವಘಡ ನಡೆದಿಲ್ಲ. ನಾನು ಬರ್ತಡೆ ಮುಗಿಸಿಕೊಂಡು ತೆರಳಿದ ನಂತರ ಏನಾಗಿದೆ ಎಂಬುದು ಗೊತ್ತಿಲ್ಲ. ತಲ್ವಾರದಿಂದ ಕೇಕ್ ಕತ್ತರಿಸುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ನನ್ನ ಗಮನಕ್ಕೆ ಬಂದಿದೆ.
ಈ ರೀತಿಯಾಗಿ ಮಾಡಿದ್ದರಿಂದ ಅವರ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚತ್ತುಕೊಂಡಿದ್ದಾರೆ. ಆದರೆ ಜೇವರ್ಗಿ ಪೊಲೀಸರು ಮಾತ್ರ ಇದರ ಬಗ್ಗೆ ಗೊತ್ತೆ ಇಲ್ಲ ಎನ್ನುವಂತೆ ವರ್ತಿಸಿದ್ದರು.