ವಿದ್ಯಾರ್ಥಿ ವೇತನ: ಅಗಸ್ಟ್ 31ವರೆಗೆ NSP ಬಯೋ ಮೆಟ್ರಿಕ್ ಅವಧಿ ವಿಸ್ತರಣೆ

0
265

ಕಲಬುರಗಿ: 2022-23ನೇ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿದ ವಿದ್ಯಾರ್ಥಿಗಳ ಬಯೋ ಮೆಟ್ರಿಕ್ ದೃಢೀಕರಣ ದಿನಾಂಕವನ್ನು ಅಗಸ್ಟ್ 31 ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಜಾವಿದ್ ಕರಣಗಿ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಫಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವದ 9 ಮತ್ತು 10ನೇ ತರಗತಿ ಹಾಗೂ ವೃತ್ತಿಪರ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬಯೋ ಮೇಟ್ರಿಕ್ ಅಥೆಂಟಿಕೇಶನ್ ಮಾಡಲು ಅಗಸ್ಟ್ 28 ಕೊನೆ ದಿನವಾಗಿತು.

Contact Your\'s Advertisement; 9902492681

ರಾಷ್ಟ್ರೀಯ ವಿದ್ಯಾರ್ಥಿ ವೇತನವನ್ನು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮಂಜೂರು ಮಾಡಲು ಈಗಾಗಲೇ ಎನ್.ಎಸ್.ಪಿ ಹಗೂ ನಿರ್ದೇಶನಾಲಯದಿಂದ ಒದಗಿಸಲಾದ ಪಟ್ಟಿಯಲ್ಲಿನ ಕಲಬುರಿಗ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳ ಮುಖ್ಯಸ್ಥರ, ನೋಡಲ್ ಅಧಿಕಾರಿಗಳ ಬಯೋ ಮೇಟ್ರಿಕ್ ಅಥೆಂಟಿಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಿದಂತಹ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು ನೋಡಲ್ ಅಧಿಕಾರಿಗಳು ತಮ್ಮ ವಿದ್ಯಾರ್ಥಿಗಳನ್ನು ಈ ಕೆಳಕಂಡ ಬಯೋ ಮೇಟ್ರಿಕ್ ಕೇಂದ್ರಗಳಿಗೆ ಅಗಸ್ಟ್ 31 ರೊಳಗಾಗಿ ಸಂಪರ್ಕಿ ಪೂರ್ಣಗೊಳ್ಳಿಸಿಕೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ವಿಧಾನ ಸೌಧದ ನಾಲ್ಕನೇ ಮಹಾಡಿಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಯೋ ಮೆಟ್ರಿಕ್ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here