ರಾಯಚೂರು: ರಾಯಕಮ್ ಮೆಡಿಕೇರ್ ಸ್ಟಾಫ್ & ವರ್ಕಸ್ ಯೂನಿಯನ್ ವತಿಯಿಂದ ವಿವಿಧ ಬೇಡಿಕೆಗಳ ಆಗ್ರಹಿಸಿ ಪ್ರತಿಭಟನೆ

0
148

ರಾಯಚೂರು: ತಾಲೂಕಿನ ಚಿಕ್ಕಸುಗೂರು ಕೈಗಾರಿಕಾ ವಲಯದಲ್ಲಿ ಬರುವ ರಾಯಕಮ್ ಮೆಡಿಕೇರ್ ಸ್ಟಾಫ್ & ವರ್ಕಸ್್ರ ಯೂನಿಯನ್ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡುವ ಕುರಿತು ಇತ್ತೀಚೆಗೆ ವಜಾ ಮಾಡಲಾದ 5 ಜನ ಗುತ್ತಿಗೆ ಕಾರ್ಮಿಕರನ್ನು ಮುಂದುವರೆಸುವಂತೆ ಆಗ್ರಹಿಸಿ ಕಾರ್ಮಿಕರು ಮುಖ್ಯ ದ್ವಾರ ಬಂದ್ ಮಾಡಿ ಮುಷ್ಕರ ನಡೆಸಿದರು.

ಇತರ ಬೇಡಿಕೆಗಳ ಕುರಿತು ಈ ಪತ್ರವನ್ನು ನೀಡುತ್ತಾ ಆಡಳಿತ ಮಂಡಳಿಯು ಇದೀಗ ನಮ್ಮನ್ನು ಚರ್ಚೆಗೆ ಆಹ್ವಾನಿಸಿರುವುದು ಸಂತೋಷದ ಸಂಗತಿಯಾಗಿದೆ. ಆದರೆ ಈಗಾಗಲೇ ಹಲವಾರು ಬಾರಿ ಮಾತುಕಥೆ ಮಾಡಿದಾಗ್ಯೂ ಬೇಡಿಕೆಗಳನ್ನು ಪರಿಹರಿಸುವಲ್ಲಿ ಒಪ್ಪಂದಕ್ಕೆ ಬರಲಾಗದಿರುವುದು ಅತ್ಯಂತ ಖೇದಕರವಾಗಿದೆ ಎಂದು ಎ..ಐ.ಯು.ಟಿ.ಯು.ಸಿ ಜಿಲಾ ಅಧ್ಯಕ್ಷ ಏನ್ ವೀರೇಶ್ ತಿಳಿಸಿದ್ದಾರೆ.

Contact Your\'s Advertisement; 9902492681

ಸಂಘದ ಗುತ್ತಿಗೆ ಕಾರ್ಮಿಕರ ಸೇವೆ ಖಾಯಮಾತಿಗೆ ಸಂಭಂಧಿಸಿದಂತೆ ಹಲವಾರು ಬಾರಿ ಚರ್ಚಿಸಿದ ನಂತರ ಇತ್ತೀಚೆಗೆ ಕಂಪನಿಯ ಸಿಇಓ ಮತ್ತು ಹೆಚ್‌ಆರ್ ನಿರ್ಧೇಶಕರು ಸಹ ಆಗಮಿಸಿದ ಮೇಲೂ ಸಹ ಇನ್ನಿದುವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅತ್ಯಂತ ನಿರಾಶಾದಾಯಕ ಸಂಗತಿಯಾಗಿದ್ಕದು, ಕಳೆದ 3-4 ವರ್ಷಗಳಿಂದಲೂ ತಾಳ್ಮೆ ಹಾಗೂ ಸಹನೆಯಿಂದ ಸೌಹಾರ್ದಯುತ ಮಾತುಕತೆಗಳನ್ನು ಮಾತುಕತೆಯಾಡುತ್ತಾ ಬಂದಿದ್ದಾಗ್ಯೂ ಕಾಲವಿಳಂಭ ಮಾಡುತ್ತಿರುವುದು ಯಾವುದೇ ರೀತಿಯಲ್ಲಿ ಸಮರ್ಥನೀಯವಲ್ಲ ಎಂದರು.

120 ಕ್ಕೂ ಹೆಚ್ಚು ಕಾರ್ಮಿಕರು ಮೂಲ ಉತ್ಪಾದನೆಗೆ ಸಂಬಂಧಿಸಿದ ಚಟುವಟಿಕೆ, ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವ ಹೆಲ್ಬರ್ಸ್, ಅಲ್ಲದೇ ಸುಮಾರು 80 ಕ್ಕೂ ಹೆಚ್ಚು ಕೆಮಿಸ್ಟ್‌ಗಳು, ಆಪರೇಟರ್ಸ್‌, ಫಿಟರ್‌ಗಳು ಇತ್ಯಾದಿ ತಾಂತ್ರಿಕ ಕೆಲಸಗಳನ್ನು ನಿರ್ವಹಿಸುತ್ತಿರುವ ಕಾರ್ಮಿಕರಿದ್ದಾರೆ.

ಪ್ರತಿಭಾ ಎಂಟರ್‌ಪ್ರೈಸಸ್ ನ 5 ಜನ ಕಾರ್ಮಿಕರು ಅವರು ಮಾಡಿರುವ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದು, ಈಗಾಗಲೇ 5 ತಿಂಗಳು ಕೆಲಸವಿಲ್ಲದೇ ಅಗತ್ಯಕ್ಕಿಂತ ಹೆಚ್ಚಿನ ಶಿಕ್ಷೆ ಅನುಭವಿಸಿದ್ದಾರೆ. ಅವರು ಕೆಲಸವಿಲ್ಲದೆ ಇರುವುದರಿಂದ, ಕುಟುಂಬಗಳ ಹಣೆಗೆ ಬಹಳ ತೊಂದರೆಯಾಗಿದ್ದು ತೀವ್ರ ಆರ್ಥಿಕ ಅಡಚಣೆಯನ್ನು ಅನುಭವಿಸುತ್ತಿದ್ದಾರೆ. ಅವರ ಮನಸ್ಸು ಹಾಗೂ ದೋಷವನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ಅವರು ಪುನಃ ಅತ್ತು ಹೋಗದಂತೆ ಮುಚ್ಚಳಿಕೆ ಪಡೆಯ:ಲ ಇದೊಂದು ಅವಕಾಶ ಕಲ್ಪಿಸಬೇಕೆಂದು ಕಾರ್ಮಿಕರು ದ್ವಾರ ಬಂದ್ ಮಾಡಿ ಮುಷ್ಕರ ನಡೆಸಿದರು.

ಈ ಸಂದರ್ಭದಲ್ಲಿ ಸಂಚಾಲಕರು ಯಲ್ಲಪ್ಪ ಮಹೇಶ್ ಚಿಕಪಾರ್ವಿ, ನಾಮಾಲಿ ಶರಣಪ್ಪ ನೆಲಹಾಳ್ ಬಸಪ್ಪ ರಾಘವೇಂದ್ರ ಮುಂತಾದವರು ಪಾಲ್ಗೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here