ಕಲಬುರಗಿ: ಸಹಮತ ವೇದಿಕೆಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ‘ಮತ್ತೆ ಕಲ್ಯಾಣ’ ಅಭಿಯಾನ ಆ. 29ರಂದು ಕಲಬುರಗಿಯಲ್ಲಿ ಆಯೋಜಿಸಿರುವ ಹಿನ್ನೆಲೆಯಲ್ಲಿ ಇಂದು ಮಹಾಂತ ನಗರದ ಬಸವ ಮಂಟಪದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಕರ್ಣಧಾರತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕಲಬುರಗಿಯಲ್ಲಿ ನಡೆಯುವ ಈ ಅಭಿಯಾನ ಯಶಸ್ವಿಗೊಳಿಸಲು ಚರ್ಚೆ ನಡೆಸಲಾಯಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈಗಾಗಲೇ ಸ್ವಾಗತ ಸಮಿತಿ ರಚಿಸಲಾಗಿದ್ದು, ಶ್ರೀಶೈಲಂ ಸಾರಂಗಮಠದ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಬಸವ ಸಮಿತಿಯ ಡಾ. ವಿಲಾಸವತಿ ಖೂಬಾ ಗೌರವಾಧ್ಯಕ್ಷರಾಗಿ, ಎಚ್ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ ಅಧ್ಯಕ್ಷರಾಗಿ, ರವೀಂದ್ರ ಶಾಬಾದಿ, ಆರ್.ಜಿ. ಶೆಟಗಾರ, ಮಾರುತಿ ಗೋಖಲೆ, ಮಾಲತಿ ರೇಷ್ಮೆ, ಜಯಶ್ರೀ ಚಟ್ನಳ್ಳಿ ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಿಕೊಂಡು ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ಬಗೆಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಲ್ಲರೂ ಕೈ ಜೋಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಳ್ಳಲಾಯಿತು.
ಮಾಜಿ ಶಾಸಕ ಬಿ.ಆರ್. ಪಾಟೀಲ, ಸಮಿತಿ ಅಧ್ಯಕ್ಷ ಶರಣು ಪಪ್ಪಾ, ಜಿಪಂ ಸದಸ್ಯ ಸಿದ್ಧರಾಮ ಪ್ಯಾಟಿ, ರವೀಂದ್ರ ಶಾಬಾದಿ, ರಾಜಶೇಖರ ಯಂಕಂಚಿ, ಸುನಿಲ್ ಹುಡಗಿ, ಮಾರುತಿ ಗೋಖಲೆ, ಆರ್.ಜಿ. ಶೆಟಗಾರ, ಬಸವರಾಜ ಮೊರಬದ, ಹಣಮಂತರಾವ ಪಾಟೀಲ ಕುಸನೂರ, ಮಹಾಂತೇಶ ಪಾಟೀಲ, ಸತೀಶ ಸಜ್ಜನ್, ಪ್ರಭುಲಿಂಗ ಮಹಾಗಾಂವಕರ್, ಶಿವರಂಜನ್ ಸತ್ಯಂಪೇಟೆ, ಅಯ್ಯನಗೌಡ ಪಾಟೀಲ, ಶಿವಶರಣಪ್ಪ ದೇಗಾಂವ, ಗಣೇಶ ಪಾಟೀಲ, ಶಶಿಕಾಂತ ಪಸಾರ, ನಾಗರಾಜ ಕಾಮಾ, ಶಿವಶರಣಪ್ಪ ಕುಸನೂರ, ಶಿವರಾಯ ಬಳಗಾನೂರ ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.