ಕಲಬುರಗಿ: ನಗರದ ಸುಪರಮಾರ್ಕಟ್‍ನಲ್ಲಿ ಬೀದಿ ವ್ಯಾಪರಿಗಳು ಸಂಬಂಧಿಸಿದ ಹಳೆಯ ಮಾರ್ಕೆಟ್, ಚಪ್ಪಲ ಬಜಾರ, ಕಿರಾಣಾ ಬಜಾರ್, ಕಪಡಾ ಬಜಾರ, ಚೈನಾ ಬಜಾರ, ಬಸ್‍ಸ್ಟ್ಯಾಂಡ, ಈ ಸ್ಥಳದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ, ಪಾದಚಾರಿ ಪಥದಲ್ಲಿ ನಡೆಸುವ ವ್ಯವಹಾರವನ್ನು ನಡೆಸುವವರ ಸ್ಥಳಾಂತರ ಮಾಡಬೇಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ಹಾಗೂ ಜೈ ಕನ್ನಡಿಗರ ಸೇನೆ ಜಂಟಿಯಾಗಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ನಗರದ ಸುಪರ್ ಮಾರ್ಕೆಟ ಹಳೆಯ ಮಾರ್ಕೆಟ್, ಚಪ್ಪಲ ಬಜಾರ, ಕಿರಾಣ ಬಜಾರ, ಕಪಡಾ ಬಜಾರ, ಚೈನಾ ಬಜಾರ, ಸಿಟಿ ಬಸ್‍ಸ್ಟ್ಯಾಂಡ್ ಈ ಎಲ್ಲಾ ಸ್ಥಳಗಳಲ್ಲ ಕಲಬುರಗಿ ನಗರದ ಸ್ಥಳೀಯರು ಹಾಗೂ ಕಲಬುರಗಿ ನಗರದ ಹೊರ ಭಾಗದ ಸಾಕಷ್ಟು ಜನರು ಉದ್ಯೋಗಕ್ಕಾಗಿ ಸೇರುತ್ತಾರೆ. ದಿನನಿತ್ಯವು ಜನಸಂದಣಿ ದಟ್ಟವಾಗಿರುತ್ತದೆ. ಸಾರ್ವಜನಿಕರು ಸದರಿ ಸ್ಥಳಗಳಲ್ಲಿ ಬಂದು ಅಂಗಡಿಗೆ ಹೋಗಬೇಕಾದರೆ ತೊಂದರೆಯಾಗುತ್ತದೆ.
ಇದಕ್ಕೆ ಮೂಲ ಕಾರಣವೇನೆಂದರೆ, ಪಾದಚಾರಿಗಳು ನಡೆದಾಡುವ ಪಾದಚಾರಿ ಪಥದಲ್ಲಿ ಅಕ್ರಮವಾಗಿ ಸಾಕಷ್ಟು ಜನರು ಪಾದಾ ಸಂಚಾರಿಗಳ ಜಾಗದಲ್ಲಿ ಅಕ್ರಮವಾಗಿ ಬೀದಿ ವ್ಯಾಪಾರಿಗಳು ವ್ಯಾಪಾರ ನಡೆದಾಡುವ ಜಾಗದಲ್ಲಿ ನಡೆಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಅದರಲ್ಲೂ ಮಹಿಳೆಯರು, ವಯೋವೃದ್ಧರು ತಾವು ಖರೀದಿಸುವ ಅಂಗಡಿಗಳಿಗೆ ಹೋಗುವುದಕ್ಕಿಂತ ಮೊದಲು ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಬಹಳ ಕಷ್ಟದಾಯಕವಾಗಿರುತ್ತದೆ.
ಈ ವಿಷಯವನ್ನು ಗಂಭೀರವಾಗಿ, ಪರಿಗಣಿಸಿ, ತಾವು ಸ್ವತಃ ಒಂದು ಬಾರಿ, ತಾವು ಅನಿರೀಕ್ಷಿತ ಭೇಟಿ ನೀಡಬೇಕು ಭೇಟಿ ನೀಡಿದ ಸಂದರ್ಭದಲ್ಲಿ ಉಂಟಾಗುವ ತೊಂದರೆ ತಮ್ಮ ಗಮನಕ್ಕೆ ಬರುತ್ತದೆ.
ಸ್ಥಳಗಳಲ್ಲಿ ಪಾದಾಚಾರಿಗಳ ನಡೆಸುವ ವ್ಯವಹಾರಗಳು ಸ್ಥಗಿತಗೊಆಸಿ ಈಗಾಗಲೇ ಬೀದಿ ಬದಿ ವ್ಯಾಪಾರಿಗಳ ಸುಪರ್ ಮಾರ್ಕೆಟ್ ಹತ್ತಿರದಲ್ಲಿರುವ ಚೌಪಾಟ (ಹಳೇ ಜೈಲು) ಸ್ಥಳಕ್ಕೆ ಸ್ಥಳಾಂತರಗೊಳಸಬೇಕು, ಸದರಿ ಸ್ಥಳಗಳಲ್ಲ ಪಾದಾಚಾರಿ ಪಥದಲ್ಲಿ ವ್ಯವಹಾರ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂಚಾರಿ ಪೆÇೀಲಿಸ್ ಠಾಣಿ ಸೂಚನೆ ನೀಡಬೇಕು, ಸಂಬಂಧಿತ ಅಧಿಕಾರಿಗಳಿಗೆ ವಿಷಯಕ್ಕೆ ಸಂಬಂಧಪಟ್ಟಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ, ಅಧಿನಿಯಮ 2014 ಮತ್ತು 2019-20 ರನ್ವಯ ನೆನೆಗುದ್ದಿಗೆ ಬಿದ್ದು, ವಲಯಗಳನ್ನು ಗುರ್ತಿಸಿರುವುದಿಲ್ಲ.
ಆದ್ದರಿಂದ ವಲಯಗಳನ್ನು ಗುರ್ತಿಸಿ ಸೌಲಭ್ಯ ಒದಗಿಸಿಕೊಡಬೇಕು, ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳು ಎಷ್ಟು ಜನರಿರುವುದನ್ನು ಸರಿಯಾದ ರೀತಿಯಲ್ಲ ಸಮೀಕ್ಷೆ ಮಾಡಿಲ್ಲ. ಕೇವಲ 5-6 ಸವಿರ ಜನರ ಮಾಹಿತಿ ಇರುತ್ತದೆ. ಆದರೆ ಅಂದಾಜು 10-15 ಸಾವಿರ ಜನ ಬೀದಿ ಬದಿ ವ್ಯಾಪಾರಿಗಳು ಇರುವರು. ಆದ್ದರಿಂದ ಸರಿಯಾದ ಸಮೀಕ್ಷೆ ನಡೆಸಿ, ಎಲ್ಲರಿಗೂ ಮೂಲಭೂತ ಸೌರ್ಕಯ ಒದಗಿಸಿಕೊಡಬೇಕು
ಒಂದು ವೇಳೆ ತಾವುಗಳು ಈ ಬಗ್ಗೆ 07 ದಿನಗಳಲ್ಲಿ ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೆ, ಕನ್ನಡಪರ ಸಂಘಟನೆ ಒಕ್ಕೂಟದಿಂದ ಜಂಟಿಯಾಗಿ ಪ್ರತಿಭಟನೆ ಇಳದು, ಸುಪರ್ ಮಾರ್ಕೆಟ್, ಜನತಾ ಬಜಾರ ರಸ್ತೆ ಬಂದು ಮಾಡುವ ಮೂಲಕ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸಚೀನ್.ಎಸ್.ಫರಹತಾಬಾದ, ಜೈ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ದತ್ತು ಹೆಚ್. ಭಾಸಗಿ, ಮುಖಂಡರಾದ ಸುರೇಶ, ಅಕ್ಷಯ, ನವೀನ, ಸಾಯಿಕುಮಾರ ಸಿಂಧೆ, ರಾಮು ಪೂಜಾರಿ, ಆನಂದ ಕೊಳ್ಳೂರ, ಹುಸೇನ್ ಇದ್ದರು.