ಗ್ರಾಮೀಣ ಭಾಗಕ್ಕೆ ಸರಿಯಾಗಿ ವಿದ್ಯುತ್ ಸರಬರಾಜಿಗೆ ಜೆಸ್ಕಾಂ ಎಇಇಗೆ ಮನವಿ

0
17

ಸುರಪುರ: ತಾಲೂಕಿನ ಕಕ್ಕೇರಾ ಭಾಗದ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ,ಆದ್ದರಿಂದ ಸಂಬಂಧಿಸಿರುವ ಜೆ.ಇ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸೇನೆ ವತಿಯಿಂದ ನಗರದ ರಂಗಂಪೇಟೆಯ ಜೆಸ್ಕಾಂ ಕಚೇರಿ ಎಇಇ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಕಕ್ಕೇರಾ ಪಟ್ಟಣದ 33 ಕೆ.ಬಿ ವ್ಯಾಪ್ತಿಯಲ್ಲಿನ ಹುಣಸಿಹೊಳೆ,ಬಂಡೊಳ್ಳಿ,ಲಿಂಗದಳ್ಳಿ ಎಸ್.ಹೆಚ್ ಸೇರಿ ಅನೇಕ ದೊಡ್ಡಿಗಳಿಗೆ ಜೆ.ಇ ಉಮೇಶ ಅವರು ಸರಿಯಾಗಿ ವಿದ್ಯುತ್ ಸರಬರಾಜು ಮಾಡದೆ,ನಿರಂತರ ಜ್ಯೋತಿ ಪಂಪಸೆಟ್‍ದಾರರಿಂದ ಲಂಚ ಪಡೆದು ಅವರಿಗೆ ನಿರಂತರ ವಿದ್ಯುತ್ ನೀಡಿ ಗ್ರಾಮಗಳಿಗೆ ವಂಚನೆ ಮಾಡುತ್ತಿದ್ದಾರೆ.ಆದ್ದರಿಂದ ಜೆ.ಇ ಉಮೇಶ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕಕ್ಕೇರಾ ಭಾಗದ ಎಲ್ಲಾ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ನೀಡಬೇಕು,ಇಲ್ಲವಾದಲ್ಲಿ ನಮ್ಮ ದಲಿತ ಸೇನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಎಇಇ ಅಶೋಕ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಹುಲಗಪ್ಪ ದೇವತ್ಕಲ್,ತಾಲೂಕು ಅಧ್ಯಕ್ಷ ಮರಿಲಿಂಗ ಗುಡಿಮನಿ,ಮುಖಂಡರಾದ ಭೀಮಾಶಂಕರ ಬಡಿಗೇರ,ಬಸವರಾಜ ಮಾಳಳ್ಳಿಕರ್,ಶರಣು ಅಂಬರಕೇಡ,ಮೌನೇಶ,ಬಸವರಾಜ ಮಂಗಳೂರು,ಭೀಮರಾಯ ಮುಷ್ಠಳ್ಳಿ,ಯಲ್ಲಪ್ಪ ಭಾವಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here