ಶಹಾಬಾದ: ವಸತಿ ನಿಲಯ ಕಾರ್ಮಿಕರ ನೂತನ ಆದೇಶವನ್ನು ರದ್ದು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ಕಾಮ್ರೇಡ್ ರಾಘವೇಂದ್ರ .ಎಮ್.ಜಿ ಹಾಗೂ ಜಿಲ್ಲಾ ಕಾರ್ಯಧರ್ಶಿ ಶರಣು ಹೇರೂರ ಕಲಬುರಗಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಮತ್ತು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಸತಿ ನಿಲಯ ಕಾರ್ಮಿಕರ ನೂತನ ಆದೇಶವನ್ನು ರದ್ದು ಮಾಡಬೇಕು.50 ಜನ ವಿದ್ಯಾರ್ಥಿಗಳಿಗೆ 3ಜನ ಕಾರ್ಮಿಕರನ್ನು ನೇಮಿಸಬೇಕು.ಬಾಕಿ ವೇತನ, ಕ್ವಾರಂಟೈನ ವೇತನ, ವಾರದ ರಜೆ, ಪ್ರಸಕ್ತ ಕನಿಷ್ಟ ವೇತನ ಹಾಗೂ ಇತ್ಯಾದಿ ಬೇಡಿಕೆಗಳ ಕುರಿತು ಆಗ್ರಹಿಸಿದರು.
ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ರಾಜ್ಯ ಮಟ್ಟದ ಹೋರಾಟಕ್ಕೆ ಎಲ್ಲಾ ಕಾರ್ಮಿಕರು ಸಿದ್ದರಾಗಿ ಇಲಾಖೆಯ ವಿರುದ್ಧ ಹೋರಾಟವನ್ನು ಕಟ್ಟಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಸಂಘದ ಸದಸ್ಯರಾದ ಸಂತೋಷ ದೊಡ್ಡಮನಿ, ಶರಣು ಸಣಗುಂಡಿ, ಸದಾನಂದ ಧನ್ನೆಕರ, ಗುರುನಾಥ ಕೊರವಾರ,ಪ್ರೇಮ ಜ್ಯೋತಿ ದೊಡ್ಡಮನಿ, ಚಂದ್ರು ಕಟ್ಟಿಮನಿ, ಆಕಾಶ ಶಿಂಧೆ, ರವಿಕುಮಾರ ನಾಲವಾರ ಉಪಸ್ಥಿತರಿದ್ದರು.