ಸುರಪುರ:ಎರಡನೇ ಸುತ್ತಿನ ಇಂದ್ರ ಧನುಷ್ ಅಭಿಯಾನ ಇದೆ ಸಪ್ಟೆಂಬರ್ 11 ರಿಂದ 16ನೇ ತಾರಿಖಿನ ವರೆಗೆ ನಡೆಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಇಂದ್ರ ಧನುಷ್ ಲಸಿಕೆಯಿಂದ ವಂಚಿತರಾಗಿರುವ 0 ದಿಂದ 1 ವರ್ಷದ,1 ರಿಂದ 2 ವರ್ಷದ ಮತ್ತು 5 ರಿಂದ 6 ವರ್ಷದ ಮಕ್ಕಳಿಗೆ ಎಮ್.ಆರ್ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ಸುರಪುರ ತಾಲುಕಿನ 10 ಮತ್ತು ಹುಣಸಗಿ ತಾಲೂಕಿನ 4 ಪ್ರಾಥಮಿ ಆರೋಗ್ಯ ಕೇಂದ್ರಗಳಲ್ಲಿ ಹಾಗೂ 1 ನಗರ ಪ್ರಾಥಮಿಕ ಆರೋಗ್ಯ ಕೇಂದ್ರದÀಲ್ಲಿ ಲಸಿಕೆ ನೀಡಲಾಗುತ್ತದೆ. ತೀವ್ರ ತರಹ ಲಸಿಕೆ ವಿತರಣೆ ಅಭಿಯಾನ ಇದಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಒಟ್ಟು ಗರ್ಭೀಣಿಯರ ಸಂಖ್ಯೆ 484, 0 ದಿಂದ 2 ವರ್ಷದೊಳಗಿನ ಮಕ್ಕಳ ಸಂಖ್ಯೆ 2872, 2 ರಿಂದ 5 ವರ್ಷದೊಳಗಿನ ಮಕ್ಕಳ ಸಂಖ್ಯೆ 471 ಮಕ್ಕಳಿಗೆ ಲಸಿಕೆ ಗುರಿ ಹೊಂದಲಾಗಿದೆ.ಒಟ್ಟು 334 ಸೈಟ್‍ಗಳ ಮೂಲಕ ಲಸಿಕೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.