ಕಲ್ಯಾಣ ಕರ್ನಾಟಕ ಉತ್ಸವ ವಿಶ್ವಕರ್ಮ ಜಯಂತಿ ಪೂರ್ವಭಾವಿ ಸಭೆ

0
16

ಸುರಪುರ:ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಆಚರಣೆ ಅಂಗವಾಗಿ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ವಿಜಯಕುಮಾರ ಕೆ ಮಾತನಾಡಿ,ಇದೇ ತಿಂಗಳು 17ನೇ ತಾರಿಖು ಬೆಳಿಗ್ಗೆ 8 ಗಂಟೆಗೆ ತಹಸೀಲ್ದಾರ್ ಕಚೇರಿಯಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಗುವುದು,ನಂತರ ನಗರದ ಕಬಾಡಗೇರ ಬಳಿಯ ಕಾಳಿಕಾದೇವಿ ದೇವಸ್ಥಾನದ ಬಳಿಯಿಂದ ಬಡಿಗೇರ ಬಾವಿ ಬಳಿಯ ವಿಶ್ವಕರ್ಮ ಸಮುದಾಯ ಭವನದ ವರೆಗೆ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು,ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಚಾಲನೆ ನೀಡುವರು ಎಂದು ತಿಳಿಸಿದರು.

Contact Your\'s Advertisement; 9902492681

ಇದೇ ದಿನ ಬೆಳಿಗ್ಗೆ 10 ಗಂಟೆಗೆ ನಗರದ ಸರ್ದಾರ್ ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಉದ್ಘಾಟಿಸುವರು,ನಂತರ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.ಇದಕ್ಕೂ ಮುನ್ನ ಬೆಳಿಗ್ಗೆ 8 ಗಂಟೆಯ ಒಳಗಾಗಿ ಎಲ್ಲಾ ಶಾಲಾ ಕಾಲೇಜು ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ರಾಷ್ಟ್ರ ಧ್ವಜಾರೋಹಣ ಮಾಡಿ ಉತ್ಸವ ಆಚರಿಸಿ ನಂತರ ತಾಲೂಕು ಆಡಳಿತದ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೆಂಕಟೇಶ ದಳವಾಯಿ,ಮೌನೇಶ ವಿ.ಅರ್ಚಕರು,ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ದೇವಿಂದ್ರಪ್ಪ ತಳವಾರಗೇರ,ಮುಖಂಡರಾದ ಶಂಭು ಪ್ರತಿಹಸ್ತ,ಮಹೇಶ ಕುಮಾರ ಶಾರದಳ್ಳಿ,ಪ್ರಭುದೇವ ಪತ್ತಾರ,ಮಹೇಶ ಸಗರ,ಸುರೇಶ ಕುಳಗೇರಿ,ಶಿವುಕುಮಾರ ಕಕ್ಕೇರಾ,ನಾರಯಣ ಪತ್ತಾರ, ಎಪಿಎಮ್‍ಸಿ ಕಾರ್ಯದರ್ಶಿ ಮಲ್ಲಪ್ಪ ಗೋಗಿ,ನಗರಸಭೆಯ ಶಿವಪುತ್ರ,ಅಬಕಾರಿ ಇಲಾಖೆಯ ಪೂಜಾ ಖರ್ಗೆ,ಕೃಷಿ ಇಲಾಖೆ ಎ.ಡಿ ಗುರುನಾಥ,ಮೀನುಗಾರಿಕೆ ಇಲಾಖೆಯ ಕವಿತಾ,ಸಿಡಿಪಿಒ ಅನಿಲ್ ಕಾಂಬ್ಳೆ,ವಕೀಲ ಯಲ್ಲಪ್ಪ ಹುಲಿಕಲ್,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾವೇರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here