ಪತ್ರಕರ್ತರು ಜನರ ಮತ್ತು ಸರ್ಕಾರ ನಡುವೆ ಸೇತುವೆಯಾಗಬೇಕು: ಶಿವರಂಜನ್ ಸತ್ಯಂಪೇಟೆ

0
26

ಯಡ್ರಾಮಿ: ಪತ್ರಕರ್ತರು ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಪತ್ರಕರ್ತ ಡಾ. ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಪಟ್ಟಣದ ಕಲ್ಯಾಣಿ ಕಲ್ಯಾಣ  ಮಂಟಪದಲ್ಲಿ ಏರ್ಪಡಿಸಿದ್ದ ತಾಲ್ಲೂಕ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

Contact Your\'s Advertisement; 9902492681

ಕಾಯಾಂಗ ಶಾಸಕಾಂಗಗಳು ತಮ್ಮ ಜವಾಬ್ದಾರಿಯನ್ನು ಮರೆತರೆ ಅದನ್ನು ಪತ್ರಿಕಾಂಗ ನೆನಪು ಮಾಡಿಕೊಡುವ ಕೆಲಸ ಮಾಡುತ್ತದೆ. ಅಂತೆಯೇ ಪತ್ರಿಕೆಗಳು ಪ್ರಜಾಪ್ರಭುತ್ವದ ಕಾವಲು ನಾಯಿಗಳು ಎನ್ನಲಾಗುತ್ತದೆ.

ಪತ್ರಕರ್ತರು ರಾಜಕೀಯ ನಾಯಕರ ಗುಲಾಮರಾಗಿ ಕೆಲಸ ಮಾಡದೆ ನೈಜ ವರದಿಗಳನ್ನು ಪ್ರಸಾರ ಮಾಡುವ ಮೂಲಕ ತನ್ನ ಜವಾಬ್ದಾರಿ ನಿರ್ವಹಿಸಬೇಕು ಎಂದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ ಪತ್ರಕರ್ತರು ನೈಜ ವರದಿ ಮಾಡಿದರೆ ವಿಶ್ವಾಸಾರ್ಹತೆ ಬೆಳೆಸಿಕೊಳ್ಳುತ್ತಾರೆ. ನಿತ್ಯ ಪತ್ರಿಕೆ ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಯಡ್ರಾಮಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ? ಕಡಕೋಳ ಮಠದ ರುದ್ರಮುನಿ ಶಿವಾಚಾರ್ಯ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ. ಪ್ರದಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ? ಹಣಮಂತರಾವ ಬೈರಾಮಡಗಿ ತಹಶೀಲ್ದಾರ ಶಾಂತಗೌಡ ಬಿರಾದಾರ? ಬಸವರಾಜ ಸಜ್ಜನ? ನಾಗಪ್ಪ ಸಜ್ಜನ? ವಿಜಯ ಕೇದಾರಲಿಂಗಯ್ಯ ಹೀರೆಮಠ ಸೇರಿದಂತೆ ಇತರರು ಇದ್ದರು. ಸಂಘ ಅಧ್ಯಕ್ಷ ಸಂತೋಷ ನವಲಗುಂದ ಅಧ್ಯಕ್ಷತೆ ವಹಿಸಿದ್ದರು. ಮಡಿವಾಳಪ್ಪ ಯತ್ನಾಳ ಸ್ವಾಗತಿಸಿದರು. ಮಲ್ಲಿಕಾರ್ಜುನ ಯಾದಗಿರಿ ನಿರೂಪಿಸಿದರು. ಆನಂದ ಕುಸ್ತಿ ವಂದಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಅಶೋಕ ದೊಡ್ಮನಿ ಶ್ರವಣಕುಮಾರ ನಾಯಕ ವಿಜಯೇಂದ್ರ ಮಳ್ಳಿ ಶ್ರೀಶೈಲ್ ಗಂಗಾಕರ? ಸಂತೋಷ ಕೊಡೆಕಲ್ ಇವರನ್ನು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here