ಮಣ್ಣಿನ ಗಣಪತಿ ಪ್ರತಿಷ್ಠಾಪನೆಯಿಂದ ಪರಿಸರ ರಕ್ಷಣೆ ಸಾಧ್ಯ: ಕೆ.ಐ.ಬಡಿಗೇರ

0
45

ರಾವೂರ; ಹಿಂದು ಸಂಪ್ರದಾಯದಲ್ಲಿ ಗಣೇಶ ಚತುರ್ಥಿಗೆ ಅದರದೇ ಅದ ಮಹತ್ವದ ಸ್ಥಾನವಿದೆ. ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ದೇಶದ ಜನರಲ್ಲಿ ಏಕತೆ ಮೂಡಿಸಲು ಬಾಲಗಮಗಾಧರ ತಿಲಕ ಅವರು ಪ್ರಾರಂಭಿಸಿದ ಗಣೇಶ ಉತ್ಸವ ಇಂದು ದೇಶ ವಿದೇಶಗಳಲ್ಲಿ ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ. ಆದರೆ ಕಾಲಗತಿಸಿದಂತೆ ಮಣ್ಣಿನ ಗಣಪತಿ ತಯ್ಯಾರಿಕೆ ರಾಸಾಯನಿಕ ಬಣ್ಣಗಳನ್ನು ಬಳಸಿದ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯ್ಯಾರಿಸಿದ ಗಣಪತಿಯಿಂದ ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ. ಪರಿಸರ ಸ್ನೇಹಿ ಮಣ್ಣಿನ ಗಣಪತಿಯಿಂದ ಮಾತ್ರ ಅಮೂಲ್ಯವಾದ ಪರಿಸರವನ್ನು ಉಳಿಸಲು ಸಾದ್ಯವೆಂದು ಸಚ್ಚಿದಾನಂದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಐ.ಬಡಿಗೇರ ಹೇಳಿದರು.

ಅವರು ಮಕ್ಕಳಲ್ಲಿ ಪರಿಸರಸ್ನೇಹಿ ಗಣೇಶ ಹಬ್ಬದ ಅರಿವು ಮೂಡಿಸಲು ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ವಿವಿಧ ಪ್ರಕಲ್ಪಗಳ ಅಡಿಯಲ್ಲಿ ಹಮ್ಮಿಕೊಂಡಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯ್ಯಾರಿಸುವ ಸ್ಪರ್ಧೇಯನ್ನು ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ಗಣೇಶ ಉತ್ಸವದ ನೆಪದಲ್ಲಿ ನಡೆಯುತ್ತಿರುವ ಪರಿಸರದ ಹಾನಿಯ ಕುರಿತು ಪ್ರತಿಯೊಬ್ಬರೂ ಜನಜಾಗೃತಿಯನ್ನು ಮೂಡಿಸಬೇಕಾಗಿದೆ. ಅಪರೂಪದ ಜಲ, ಪ್ರಾಣಿಸಂಪತ್ತು ಹಾಳಗುವುದನ್ನು ತಡೆಗಟ್ಟಲು ನೀವು ತಯ್ಯಾರಿಸಿದ ಗಣಪತಿ ಮೂರ್ತಿಯನ್ನು ನೀವು ಮನೆಯಲ್ಲಿ ಪ್ರತಿಷ್ಠಾಪಿಸಿ ನಂತರ ನೀರಿನಲ್ಲಿ ವಿಸರ್ಜಿಸಿದರೆ ಖಂಡಿತ ಪರಿಸರವನ್ನು ಉಳಿಸಿದ ಹಾಗೇ ಇದನ್ನು ಸಮುದಾಯಕ್ಕೂ ಮನದಟ್ಟು ಮಾಡಿ ಎಂದರು.

ನೂರಕ್ಕೂ ಹೆಚ್ಚು ಮಕ್ಕಳು ಪ್ರಾಥಮಿಕ ಮತ್ತು ಪ್ರೌಢ ವಿಭಾಗದಿಂದ ಭಾಗವಹಿಸಿದ್ದರು. ಉತ್ತಮ ಮೂರ್ತಿ ತಯ್ಯಾರಿಸಿದ ಶರಣ ತಂದೆ ರವಿ (7ನೇ), ಕಿರಣ ತಂದೆ ಮಲ್ಲಪ್ಪ (10ನೇ), ಅನೀಲ ತಂದೆ ಮಹಾದೇವ (10ನೇ), ಮಲ್ಲಿಕಾರ್ಜುನ ತಂದೆ ಲಿಂಗಪ್ಪ (9ನೇ), ಶರಣಬಸ್ಸು ತಂದೆ ಸುಭಾಷ (10ನೇ) ವಿಧ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಶಿಕ್ಷಕರಾದ ಈಶ್ವರಗೌಡ ಪಾಟೀಲ, ಶಿವಕುಮಾರ ಸರಡಗಿ, ಈರಣ್ಣ ಹಳ್ಳಿ, ರಾಜಶೇಖರ ಅಳ್ಳೋಳ್ಳಿ, ಸುಗುಣಾ ಕೊಳ್ಕೂರ, ವಿಜಯಲಕ್ಷ್ಮಿ ಬಮ್ಮನಳ್ಳಿ, ಭುವನೇಶ್ವರಿ ಎಂ, ಜ್ಯೋತಿ ತೆಗನೂರ, ಕುಮಾರಸ್ವಾಮಿ ಸೇರಿದಂತೆ ಮಕ್ಕಳು ಇದ್ದರು.

ಸಿದ್ಧಲಿಂಗ ಬಾಳಿ ಶಿಕ್ಷಕ- ನಾನು ಕಳೆದ 8 ವರ್ಷಗಳಿಂದ ಇಂತಹ ಪ್ರಯತ್ನವನ್ನು ಮಕ್ಕಳಿಂದ ಮಾಡಿಸುತ್ತದ್ದೇನೆ. ಮಕ್ಕಳ ಮೂಲಕ ಸಮಾಜಕ್ಕೆ ಸಂದೇಸ ಸಾರಲು ಇಂತಹ ಪ್ರಯತ್ನ ಎಲ್ಲರ ಸಹಕರದಿಂದ ನಡೆಯುತ್ತಿದೆ. ಸ್ವತ: ನಾನು ಕಳೆದ 8 ವರ್ಷಗಳಿಂದ ಮಕ್ಕಳೆ ಮಡಿದ ಮಣ್ಣಿನ ಗಣಪತಿಯನ್ನು ನನ್ನ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದೇನೆ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಪರಿಸರಸ್ನೇಹಿ ಗಣೇಶ ಉತ್ಸವ ಆಚರಿಸಲು ಮನವಿ ಮಾಡಿಕೊಳ್ಳುತ್ತೇನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here