ಭಾರತೀಯರ ಪ್ರಜಾಪ್ರಭುತ್ವದ ಜೀವಾಳವೇ ಸಂವಿಧಾನ

0
219

ಶಹಾಬಾದ: ಭಾರತೀಯ ಪ್ರಜಾಪ್ರಭುತ್ವದ ಜೀವಾಳ ನಮ್ಮ ಅಮೂಲ್ಯವಾದ ಸಂವಿಧಾನವಾಗಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ಅವರು ಶುಕ್ರವಾರ ಪ್ರಗತಿಪರ ಸಂಘಟನೆಗಳ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.

Contact Your\'s Advertisement; 9902492681

ಬಡವ, ಹಿಂದುಳಿದ, ಕಾರ್ಮಿಕ, ಮಹಿಳೆ, ಮಕ್ಕಳು ಸೇರಿದಂತೆ ಸರ್ವ ಸಮುದಾಯದ ಹಿತರಕ್ಷಣೆಗೆ ಸಂವಿಧಾನ ರೂಪಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮಿತರಲ್ಲ; ಅವರು ಸರ್ವ ಜನರ ಹಿತರಕ್ಷಕರು ಎಂದು ಹೇಳಿದರು. ಕೆಲವು ಅನ್ಯ ಹಿತಾಸಕ್ತಿಗಳು ಸಂವಿಧಾನವನ್ನು ವಿರೋಧಿಸುತ್ತಿವೆ. ಸಂವಿಧಾನ ವಿರೋಧಿಗಳನ್ನು ಪ್ರತಿಯೊಬ್ಬರು ವಿರೋಧಿಸಬೇಕು. ಸಂವಿಧಾನದ ಪಾವಿತ್ರ್ಯತೆ, ಪ್ರಾಮುಖ್ಯತೆ ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಗುರುತರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ಸಂವಿಧಾನದ ಅರಿವು ಎಲ್ಲರಿಗೂ ಅಗತ್ಯವಾಗಿದೆ. ಪ್ರತಿಯೊಬ್ಬರಿಗೂ ಸಮಾನತೆ, ಸೌಹಾರ್ದತೆ, ಭ್ರಾತೃತ್ವ, ಶಾಂತಿ, ನೆಮ್ಮದಿ ದೊರಕಲು ಸಂವಿಧಾನ ನೀಡಿರುವ ಅವಕಾಶಗಳು ಕಾರಣವಾಗಿವೆ ಎಂದರು.

ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ,ಡಾ.ಬಿ.ಆರ್. ಅಂಬೇಡ್ಕರ್ ಅವರು ಎಲ್ಲರಿಗೂ ಘನತೆಯ ಬದುಕು ಬದುಕಲು ಅವಶ್ಯವಿರುವ ಅವಕಾಶಗಳನ್ನು ಮೂಲಭೂತ ಹಕ್ಕುಗಳ ಸ್ವರೂಪದಲ್ಲಿ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಎಲ್ಲ ಧರ್ಮಿಯರು ಒಂದಾಗಿ ಬಾಳಬೇಕು ಎಂಬುದು ಡಾ.ಬಿ.ಆರ್. ಅಂಬೇಡ್ಕರ ಅವರ ಆಶಯ ಮತ್ತು ಗುರಿ ಆಗಿತ್ತು ಎಂದು ಹೇಳಿದರು.

ಪಿ.ಎಸ್.ಮೇತ್ರೆ ಮಾತನಾಡಿ, ಸಂವಿಧಾನದ ಪೀಠಿಕೆಯು ಸಂವಿಧಾನದ ತಿರುಳಾಗಿದೆ. ಸಮಗ್ರ ಅಭಿವೃದ್ಧಿಯ ಎಲ್ಲ ಆಶಯಗಳನ್ನು ಅದು ಒಳಗೊಂಡಿದೆ. ಇಂದಿನ ಯುವಜನತೆ’ ಸಂವಿಧಾನವನ್ನು ಓದಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ವಿವಿಧ ಮಹನೀಯರ ಸಾಮಾಜಿಕ ಚಿಂತನೆ, ಕೊಡುಗೆಗಳನ್ನು ತಿಳಿದು, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಸಂವಿಧಾನದ ಸಾರ್ಥಕತೆ ಮೂಡುತ್ತದೆ’ ಎಂದು ಸಂವಿಧಾನ ಪೀಠಿಕೆಗೆ ಬದ್ಧರಾಗಿ ಸಾಂವಿಧಾನಿಕ ತತ್ವಗಳನ್ನು ಜೀವನ ಮತ್ತು ಕರ್ತವ್ಯದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.

ಈ ಸಂದರ್ಭದಲ್ಲಿ ನಗರ ಸಭೆಯ ಪೌರಾಯುಕ್ತೆ ಪಂಕಜಾ ರಾವೂರ, ರಘುನಾಥ ನರಸಾಳೆ,ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ, ಕೃಷ್ಣಪ್ಪ ಕರಣಿಕ, ಬಸವರಾಜ ಮಯೂರ, ನಾಗಣ್ಣ ರಾಂಪೂರೆ, ಸತೀಶ ಕೋಬಾಳಕರ, ನಾಗಪ್ಪ ರಾಯಚೂರ, ಮಹಾದೇವ ತರನಳ್ಳಿ, ತಿಪ್ಪಣ್ಣ ಧನ್ನೇಕರ, ಮಲ್ಲಣ್ಣ ಮಸ್ಕಿ, ಹಣಮಂತ ತರನಳ್ಳಿ, ಸ್ನೇಹಲ್ ಜಾಯಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here