ಶಹಾಬಾದ: ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ ರವರ ಆಶಯದಂತೆ ಪ್ರತಿಯೊಬ್ಬರಿಗೂ ಪ್ರಜಾಪ್ರಭುತ್ವದ ಅರಿವು ಮೂಡುವ ದೃಷ್ಟಿಯಿಂದ ಸಂವಿಧಾನ ಪೀಠಿಕೆ ಓದುವ ಕಾರ್ಯ ಕೈಗೊಂಡಿರುವುದಕ್ಕೆ ಸಿದ್ದರಾಮಯ್ನವರ ಸರಕಾರಕ್ಕೆ ಕಾಂಗ್ರೆಸ್ ಯುವ ಮುಖಂಡ ಸ್ನೇಹಲ್ ಜಾಯಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದಿನ ಹಿನ್ನಲೆಯಲ್ಲಿ ಸಂವಿಧಾನ ಸಂಭ್ರಮ, ಸಮಾನತೆ, ಐಕ್ಯತೆ ಮೌಲ್ಯಗಳ ಸಂಕೇತ. ಸಂವಿಧಾನ ಪೀಠಿಕೆ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಓದಿಸುವ ಅಭಿಯಾನ ಸರ್ಕಾರವು ಹಮ್ಮಿಕೊಂಡಿರುವುದು ಅರ್ಥಪೂರ್ಣ ಆಚರಣೆ. ಇದು ರಾಜ್ಯದ ಪ್ರಪ್ರಥಮ ಬಾರಿಗೆ ಪ್ರಜಾಪ್ರಭುತ್ವದ ಮೌಲ್ಯವನ್ನು ತಿಳಿಸು ವಂತಹ ಕಾರ್ಯಕ್ರಮವನ್ನು ಕೇವಲ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದಲ್ಲದೆ ಸಾರ್ವಜನಿಕರು ಕೂಡ ಈ ಭಾರತೀಯ ಸಂವಿಧಾನದ ಪೀಠಿಕೆ ಓದುವ ಮೂಲಕ ಪ್ರಜಾಪ್ರಭುತ್ವ ದಿನದಲ್ಲಿ ಸಾರ್ವಜನಿಕರು ಭಾಗವಹಿಸುವಂತ ಮತ್ತು ವಿವಿಧತೆಯಲ್ಲಿ ಏಕತೆ ತರುವಲ್ಲಿ ಹೆಜ್ಜೆ ಹಾಕಿ, ಭಾರಿ ಪ್ರಮಾಣದಲ್ಲಿ ಇಂದು ಪ್ರತಿಜ್ಞೆ ಸ್ವೀಕರಿಸಿದ್ದಾರೆ
.ಈ ದಿಟ್ಟ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಮಾಜಕಲ್ಯಾಣ ಸಚಿವರಾದ ಹೆಚ್.ಸಿ. ಮಹಾದೇವಪ್ಪ ಇವರಿಗೆ ಜಾಯಿ ಅಭಿನಂದಿಸಿದ್ದಾರೆ.