ಕಲಬುರಗಿ: ಕಾವೇರಿ ನದಿ ನೀರು ವಿಚಾರದಲ್ಲಿ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದು ಆದೇಶ ಹೊರಡಿಸಿದನ್ನು ಧಿಕ್ಕರಿಸಿ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಕಾವೇರಿ ನೀರು ವಿಚಾರದಲ್ಲಿ ನದಿ ತಮಿಳುನಾಡಿಗೆ 5000 ಕ್ಯೂಸೆಕ್ಸ್ ನೀರು ಬೀಡಬೇಕೆಂಬ ಆದೇಶ ಹೊರಡಿಸಿದ್ದು, ಸದರಿ ಆದೇಶದ ವಿರುದ್ಧವಾಗಿ ನಾವು ಈ ಪ್ರತಿಭಟನೆಯ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಕೂಡಲೇ ರಾಜ್ಯ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ಮತ್ತು ರಾಜ್ಯದ ಜನರು ಹಾಗೂ ರೈತರ ಹಿತದೃಷ್ಟಿಯಿಂದ ಕೂಡಲೇ ನೀರು ಬಿಡುಗಡೆ ಮಾಡುವುದನ್ನು ನಿಲ್ಲಿಸಬೇಕು.
ಒಂದು ವೇಳೆ ತಾವುಗಳು ನಮ್ಮ ಮನವಿಯನ್ನು ಪರಿಗಣಿಸಿದೇ ಇದ್ದರೇ ನಾವು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಹೋರಾಟ ಮತ್ತು ಧರಣಿಯನ್ನು ಕೈಕೊಂಡು ನಮ್ಮ ಕನ್ನಡ ನಾಡಿದ ನೆಲ, ಜಲ ಸಂರಕ್ಷಿಸಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಪುನೀತರಾಜ ಸಿ. ಕವಡೆ, ದೇವಿಂದ್ರ ಮಯೂರ, ಕಲ್ಯಾಣಿ ತಳವಾರ, ವಿಠಲ್ ಪೂಜಾರಿ, ಧರ್ಮಸಿಂಗ್ ತಿವಾರಿ, ಈರಣ್ಣಾ ಆಳಂದ, ಪ್ರಭು ಯಳವಂತಗಿ, ರಾಮು, ಚಂದರ್, ದೇವಿಂದ್ರ ಯಲ್ಲಪ್ಪ, ಸಚೀನ ಇದ್ದರು.