ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಭಾಲ್ಕಿ ಮಠದ ಕೊಡುಗೆ ಅಪಾರ

0
18

ಭಾಲ್ಕಿ; ಪಟ್ಟಣದ ಹಿರೇಮಠ ಸಂಸ್ಥಾನದ ಆವರಣದಲ್ಲಿ ಇರುವ ಶ್ರೀ ಗುರುಪ್ರಸಾದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಶಿಕ್ಷಕರ ದಿನಾಚರಣೆ ಸಮಾರಂಭ ಆಚರಿಸಲಾಯಿತು. ದಿವ್ಯಸಾನಿಧ್ಯ ವಹಿಸಿದ, ನಮ್ಮ ದೇಶ 15ನೆಯ ಅಗಸ್ಟ್ 1947 ರಂದು ಸ್ವಾತಂತ್ರ್ಯವಾದರು ಹೈದ್ರಾಬಾದ ಕರ್ನಾಟಕ ಸ್ವಾತಂತ್ರ್ಯವಾಗಿರಲಿಲ್ಲ. ಹೈದ್ರಾಬಾದ ಸಂಸ್ಥಾನದ ನಿಜಾಮ ಈ ಭಾಗ ಸ್ವತಂತ್ರ ಭಾರತದಲ್ಲಿ ವೀಲಿನಗೊಳಿಸಲು ಒಪ್ಪಲಿಲ್ಲ. ಅದಕ್ಕಾಗಿ ಈ ಭಾಗದ ಜನರು ನಿಜಾಮನ ವಿರುದ್ದ ದಂಡೆದ್ದರು. ಗೋರ್ಟಾ, ಮುಚಳಂಬ ದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಹತ್ಯಾಕಾಂಡ ನಡೆಯಿತು. ಸಾವಿರಾರು ಜನರ ಪ್ರಾಣ ತ್ಯಾಗದಿಂದ ಹಾಗೂ ಸರ್ದಾರ ವಲ್ಲಭಭಾಯಿ ಪಟೇಲ ಅವರ ನಿರ್ಧಾರದಿಂದ ಈ ಭಾಗ 17ನೆಯ ಸಪ್ಟೆಂಬರ್ ದಂದು ಸ್ವಾತಂತ್ರವಾಯಿತು.

ಈ ಹೋರಾಟದಲ್ಲಿ ಭಾಲ್ಕಿ ಹಿರೇಮಠದ ಪರಮಪೂಜ್ಯ ಶ್ರೀ ಚನ್ನಬಸವ ಪಟ್ಟದ್ದೇವರ ಕೊಡುಗೆ ಅಪಾರವಾಗಿತ್ತು. ಪೂಜ್ಯರು ಸ್ವಾತಂತ್ರ ಪೂರ್ವದಲ್ಲಿ ಈ ಭಾಗದಲ್ಲಿ ಶಿಕ್ಷಣದ ಹಣತೆಯನ್ನು ಹಚ್ಚಿ ಜನರಲ್ಲಿ ಸ್ವಾತಂತ್ರದ ಕಿಚ್ಚನ್ನು ಹೊತ್ತಿಸಿದರು. ಸ್ವಾತಂತ್ರ ನಂತರವು ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯಿಕ ಸಾಂಸ್ಕøತಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ನೀಡುತ್ತ ಈ ಭಾಗ ಅಭಿವೃದ್ಧಿ ನೀಡುವಲ್ಲಿ ಭಾಲ್ಕಿ ಹಿರೇಮಠದ ಕೊಡುಗೆ ಅಪಾರವಾಗಿದೆ ಎಂದು ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಆರ್ಶೀವಚನ ನೀಡಿದರು.

Contact Your\'s Advertisement; 9902492681

ಧ್ವಜಾರೋಹಣವನ್ನು ಶ್ರೀಮಠದ ಆತ್ಮೀಯರಾದ ಹಿರಿಯ ಶರಣ ಬಂಡೆಪ್ಪ ಎಂ. ಶರಣರು ಅವರಿಂದ ನೆರವೇರಿತು. ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಅವರು ಮಹಾಪುರುಷರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು. ಶ್ರೀ ರಮೇಶ ಪಟ್ನೆ, ಶಾಂತಯ್ಯ ಸ್ವಾಮಿ, ಓಂಕಾರ ಕಾಮಶೆಟ್ಟಿ, ಸಂಗಮೇಶ ಬಿರಾದಾರ, ಬಾಲಾಜಿ ವಲ್ಲೂರೆ, ರಾಜು ಜುಬರೆ, ಶಿವಾನಂದ ಕತ್ತೆ ಮುಂತಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

10ನೇ ತರಗತಿ ಮಕ್ಕಳಿಂದ ಗುರುಪ್ರಸಾದ ಶಾಲೆಯ ಶಿಕ್ಷಕ/ಶಿಕ್ಷಕಿಯರಿಗೆ ಗೌರವ ಸಲ್ಲಿಸುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಮಕ್ಕಳು ವಚನ ನೃತ್ಯ ಮಾಡಿದರು. ಕು. ಅನ್ನಪೂರ್ಣ ಸ್ವಾಗತಿಸಿದರು. ಕು.ಭವಾನಿ ಆರ್. ಮೈಲಾರೆ ವಚನ ಪ್ರಾರ್ಥನೆ ಮಾಡಿದರು. ಕು.ಸುಸ್ಮೀತಾ ಖಂಡ್ರೆ ಮತ್ತು ಶ್ರದ್ಧಾ ಗಾಯಕವಾಡ ನಿರೂಪಿಸಿದರು. ರಕ್ಷಿತಾ ಪಾಂಚಾಳ ಇವರಿಂದ ಶರಣು ಸಮರ್ಪಣೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here