ಶಿಕ್ಷಕರ, ಪಾಲಕರ ಮಾತು ಪುಸ್ತಕಗಳಿಗಿಂತ ಶ್ರೇಷ್ಠ; ಬಿ.ಎ.ಪಾಟೀಲ ವಿಜ್ಞಾನಿ

0
248

ಕಲಬುರಗಿ: ಉತ್ಸವ, ಆರಾಧನೆಗಳು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುತ್ತದೆ. ಬದುಕಿನ ಭಾಗವಾಗಿ ಸಂಸ್ಕøತಿ ಒಳಗೊಂಡಾಗ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಈ ರೀತಿ ಮಕ್ಕಳಲ್ಲಿರುವ ಕಲೆ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುತ್ತಿರುವ ಮಲ್ಲಿಕಾರ್ಜುನ ತರುಣ ಸಂಘದ ಕಾರ್ಯ ಶ್ಲಾಘನೀಯವಾದುದು ಅಜ್ಜಿಯ ಕಥೆ ಹೇಳುತ್ತ ಅಜ್ಜಿ ನಿನಗೆ ಇಂಗ್ಲಿಷ ಬರಲ್ಲ ಅಂತ ಕೇಳಿದಾಗ ನನಗ ತಗೊಂಡ ಏನು ಮಾಡತ್ತಿ ಆ ನಿನ್ನ ಕಂಪ್ಯೂಟರ ಡಬ್ಬಿಗೆ ಮೊದಲು ಕನ್ನಡ ಕಲಿಸು ಅಂತ ಹೇಳಿದ ಆ ಮಾತಿಗೆ, ಆ ಮಾತಿನ ಪ್ರೇರಣೆಯಿಂದಲೇ ನಾನು ಕಂಪ್ಯೂಟರಗೆ ದೇಶದಲ್ಲೇ ಪ್ರಥಮ ಬಾರಿಗೆ ಕನ್ನಡ ಭಾಷೆಯ ಸಾಫ್ಟವೇರ ಅಳವಡಿಸಲು ಸಾಧ್ಯವಾಯಿತು ಎಂದು 23 ರಂದು ನಗರದ ವಿದ್ಯಾನಗರದ ಮಲ್ಲಿಕಾರ್ಜುನ ತರುಣ ಸಂಘದ 25ನೇ ವಾರ್ಷಿಕೋತ್ಸವ ಹಾಗೂ ಗಣೇಶೋತ್ಸವ ಅಂಗವಾಗಿ ಹಮ್ಮಿಕೊಂಡ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಕ್ಕಳಿಗೆ ಬಹಮಾನ ವಿತರಿಸಿ ಬಾಹ್ಯಾಕಾಶ ವಿಜ್ಞಾನಿ ಬಿ.ಎ. ಪಾಟೀಲ ಮಾತನಾಡಿದರು.

ನನ್ನ ಮಗ ಭಗತಸಿಂಗರಂತಾಗಬೇಕು, ಕಿತ್ತೂರ ರಾಣಿ ಚೆನ್ನಮ್ಮನಂತಾಗಬೇಕು, ಅಬ್ದುಲಕಲಾಂನಂತಾಗಬೇಕು, ವಿವೇಕಾನಂದನಂತೆಯಾಗಬೇಕು ಎಂದು ಬರಿ ಮಾತಿನಲ್ಲಿ ಹೇಳಿದರೆ ಸಾಲದು ಅವರ ಪಾಲಕರಂತೆ ನಾವೂ ಆಗಬೇಕು ತಪ್ಪು ಮಾಡಿದ ಮಕ್ಕಳಿಗೆ ಶಿಕ್ಷೆ ಕೊಟ್ಟು ಬುದ್ಧಿ ಹೇಳಬೇಕು, ಮಗ ಏನು ಮಾಡಿದರು ಅವನನ್ನು ತಲೆಯ ಮೇಲೆ ಕೂಡಿಸಿಕೊಂಡರೆ ಭವಿಷ್ಯತ್ತಿನಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯವಿಲ್ಲ ಮಕ್ಕಳ ಭವಿಷ್ಯತ್ತಿನ ನಡೆಗೆ ಇಂದಿನ ಪಾಲಕರ ನಡೆ-ನುಡಿ ಆಚರ-ವಿಚಾರ ಎಲ್ಲವೂ ಮಕ್ಕಳ ಭವಿಷ್ಯತ್ತು ಅವಲಂಬಿಸಿದೆ ಎಂದು ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ.ಮ.ನಿ.ಪ್ರ.ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

Contact Your\'s Advertisement; 9902492681

ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಅಧ್ಯಕ್ಷತೆ ವಹಿಸಿದ್ದರು, ವಿದ್ಯಾನಗರ ವೆ¯ಫೇರ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಖಜಾಂಚಿ ಗುರುಲಿಂಗಯ್ಯ ಮಠಪತಿ, ತರುಣ ಸಂಘದ ಉಪಾಧ್ಯಕ್ಷ ವಿರೇಶ ನಾಗಶೆಟ್ಟಿ, ಕಾರ್ಯದರ್ಶಿ ಕರಣ ಆಂದೋಲಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಖುರ್ಚಿ ಆಟ, ಕ್ರಿಕೆಟ್, ಸೈಕಲ್ ರೇಸ, ಲೆಮನ್ ಸ್ಪೂನ್, ಓಟದ ಸ್ಪರ್ಧೆ ಹೀಗೆ 32 ಸ್ಪರ್ಧೆಗಳಿಗೆ ಶಶಿಧರ ಪ್ಯಾಟಿ, ಅಮಿತ ಸಿಕೇದ, ವಿಕಾಶ ತೊರವಿ, ಸಂಜು ತಂಬಾಕೆ, ಸಂಚಾಲಕರಾಗಿ ಹಾಗೂ ಸಂಗಮೇಶ ಹೆಬ್ಬಾಳ ಅಂಪೈರ ಆಗಿ ಕಾರ್ಯನಿರ್ವಹಿಸಿದ್ದಾರೆ.

ಹಾಡಿನ ಮತ್ತು ನೃತ್ಯ ಸ್ಪರ್ಧೆಗಳಿಗೆ ನ್ಯಾಯಾಧೀಶರಾಗಿ ರತ್ನಮ್ಮ ನಿಂಬೂರ, ಪದ್ಮಾ ಆಂದೋಲಾ, ಅಶ್ವಿನಿ ಭೊಮ್ಮಾ, ರಂಗೋಲಿ ಸ್ಪರ್ಧೆಯ ನ್ಯಾಯಾಧೀಶರಾಗಿ ತಾರಾ ಪಾಟೀಲ, ಶ್ರೀಮತಿ ದಂಡೋತಿ ಕಾರ್ಯನಿರ್ವಹಿಸಿದ್ದಾರೆ. ಪ್ರಿಯಾ ನಾಗಶೆಟ್ಟಿ, ಸೃಜನಾ, ಧರ್ಮರಾಜ ಹೆಬ್ಬಾಳ, ಧನರಾಜ ಹೆಬ್ಬಾಳ, ಬಹುಮಾನಗಳ ಅಚ್ಚಕಟ್ಟಾದ ಪ್ಯಾಕಿಂಗ ಹಾಗೂ ವಿತರಿಸುವ ಕಾರ್ಯನಿರ್ವಹಿಸಿದರು ಎಂದು ಶ್ರೀ ಮಲ್ಲಿಕಾರ್ಜುನ ತರುಣ ಸಂಘ ಅಧ್ಯಕ್ಷ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here