ಸಮಾಜದ ಪದಾಧಿಕಾರಿಗಳ ಆಯ್ಕೆ: ಕುಸಿಯದಿರಲಿ ಕೋಲಿ ಸಮಾಜದ ಸಂಘಟನಾ ಶಕ್ತಿ

0
145

ವಾಡಿ: ಕೋಲಿ ಸಮಾಜದ ಬಂದುಗಳು ಸಂಘಟನಾ ಶಕ್ತಿಯನ್ನು ಪಡೆಯದಿದ್ದರೆ ಆಳ್ವಿಕರು ಸೌಲಭ್ಯಗಳಿಂದ ವಂಚಿಸುತ್ತಾರೆ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಲು ಒಗ್ಗಟ್ಟು ಅತ್ಯಗತ್ಯ ಎಂದು ವಾಡಿ ಪಟ್ಟಣದ ಕೋಲಿ ಸಮಾಜದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ತಳವಾರ ಹೇಳಿದರು.

ರವಿವಾರ ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ಕೋಲಿ (ಕಬ್ಬಲಿಗ) ಸಮಾಜದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಅವರು ಮಾತನಾಡಿದರು. ನಿಜಶರಣ ಅಂಬಿಗರ ಚೌಡಯ್ಯನವರ ಚಿಂತನೆಗಳ ಆಧಾರದರಲ್ಲಿ ಸಮಾಜವನ್ನು ವೈಚಾರಿಕವಾಗಿ ಹಾಗೂ ಕೋಮು ಸೌಹಾರ್ಧತಾ ತತ್ವಗಳಡಿ ಸಮುದಾಯದ ಯುವ ಶಕ್ತಿಯನ್ನು ಸಂಘಟಿಸಬೇಕಿದೆ. ಅಲ್ಲದೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಮುದಾಯದ ಕಟ್ಟಕಡೆಯ ಕುಟುಂಬಗಳಿಗೂ ತಲುಪಿಸಲು ಹಿರಿಯ ಕಿರಿಯರೆನ್ನದೆ ಎಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದರು.

Contact Your\'s Advertisement; 9902492681

ಸಮಾಜದ ನಿಕಟಪೂರ್ವ ಅಧ್ಯಕ್ಷ ನಾಗೇಂದ್ರ ಜೈಗಂಗಾ ಮಾತನಾಡಿ, ಸಮಾಜವನ್ನು ಇನ್ನಷ್ಟು ಪ್ರಗತಿಯತ್ತ ಸಾಗಿಸಲು ಸಕಾಲಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡುವುದು ನಿಯಮ. ಸಂಘದ ಪದಾಧಿಕಾರಿಗಳ ಜತೆಗೆ ಸಮುದಾಯದ ಹಿರಿಯರು ಮಾರ್ಗದರ್ಶಕರಾಗಿ ನಿಂತು ಕಾರ್ಯಚಟುವಟಿಕೆಗಳನ್ನು ಮುನ್ನಡೆಸೋಣ. ಸಮುದಾಯದ ಜನರಿಗೆ ಒಳಿತಾಗುವ ನಿರ್ಧಾಗಳನ್ನು ಕೈಗೊಂಡು ಶರಣರ ವಿಚಾರಗಳನ್ನು ಜೀವನದಲ್ಲಿ ಪಾಲಿಸೋಣ ಎಂದರು.

ಕೋಲಿ ಸಮಾಜದ ಹಿರಿಯರಾದ ಭೀಮರಾಯ ನಾಟೇಕರ, ಶರಣಪ್ಪ ಮಂತ್ರಿ, ಬಸವರಾಜ ಕೋಲಿ, ಶಿವಪ್ಪ ಮುಂಡರಗಿ, ಶರಣಬಸು ಗೋಳಾ, ನಾಗೇಂದ್ರ ಜೈಗಂಗಾ, ದೇವಿಂದ್ರ ನಾಟೇಕರ, ಬಸವರಾಜ ಮುತ್ತಗಿ, ಶರಣಪ್ಪ ಬೆಣ್ಣೂರ, ಹಣಮಂತ ತರನಳ್ಳಿ ಸೇರಿದಂತೆ ಸಮಾಜದ ಯುವಕರು ಪಾಲ್ಗೊಂಡಿದ್ದರು. ಶಿವಪ್ಪ ಮುಂಡರಗಿ ನಿರೂಪಿಸಿ, ವಂದಿಸಿದರು.

ಪದಾಧಿಕಾರಿಗಳ ಆಯ್ಕೆ: ಇದೇ ವೇಳೆ ಹಿರಿಯ ಸಮ್ಮುಖದಲ್ಲಿ ಕೋಲಿ ಕಬ್ಬಲಿಗ ಸಮಾಜಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಮಲ್ಲಿಕಾರ್ಜುನ ತಳವಾರ (ಅಧ್ಯಕ್ಷ), ತಿಪ್ಪಣ್ಣ ಮಾಲಗತ್ತಿ, ರಾಘವೇಂದ್ರ ಕೋಲಿ, ರಾಜು ಕೋಲಿ (ಉಪಾಧ್ಯಕ್ಷರು), ಅನಿಲಕುಮಾರ ಶಿವಭೋ (ಪ್ರಧಾನ ಕಾರ್ಯದರ್ಶಿ), ಮಡಿವಾಳ ಬಿದನೂರಕರ, ನಾಗರಾಜ ಮುತ್ತಗಿ, ಬಾಬು ಕೂಡಿ (ಸಹ ಕಾರ್ಯದರ್ಶಿಗಳು), ರಮೇಶ ಕೋಡ್ಲಾ, ರಾಜು ಆಂದೇಲಿ (ಸಂಘಟನಾ ಕಾರ್ಯದರ್ಶಿಗಳು), ಮಲ್ಲಿಕಾರ್ಜುನ ಕೋರಿ (ಖಜಾಂಚಿ), ಸುಭಾಷ ಕೋಲಿ, ವಿಶ್ವರಾಧ್ಯ ವಾಲೀಕಾರ ಹಾಗೂ ಇತರರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here