ಕಲಬುರಗಿ ಇನ್‍ಟ್ಯಾಕ್ ವತಿಯಿಂದ ವಿಶ್ವಪ್ರವಾಸೋಧ್ಯಮ ದಿನಾಚರಣೆ

0
211

ಕಲಬುರಗಿ: ಇನ್‍ಟ್ಯಾಕ್ ಕಲಬುರಗಿ ಅಧ್ಯಾಯ ಹಾಗೂ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರವಾಸೋಧ್ಯಮ ದಿನಾಚರಣೆಯ ಅಂಗವಾಗಿ ‘ಕಲಬುರಗಿ ಕೋಟೆಯ ದರ್ಶನ’ವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಇನ್‍ಟ್ಯಾಕ್ ಕಾರ್ಯದರ್ಶಿಗಳಾದ ರಿಜವಾನ್ ಉರ್-ರಹಮಾನ್ ಸಿದ್ದೀಕಿಯವರು ಉದ್ಘಾಟಿಸಿ, ಕಲಬುರಗಿ ಕೋಟೆಯು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಈ ಕೋಟೆಯನ್ನು ಸ್ವಚ್ಛಗೊಳಿಸಿದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ ಎಂದು ಹೇಳಿದರು.

Contact Your\'s Advertisement; 9902492681

ಡಾ.ಬಿ.ಎಸ್. ಗುಲಶೆಟ್ಟಿ ಇನ್‍ಟ್ಯಾಕ್ ಅಧ್ಯಕ್ಷರು ಇವರು ಸ್ಥಳಿಯ ಸ್ಮಾರಕಗಳ ಮತ್ತು ಪ್ರವಾಸೋಧ್ಯಮ ಕುರಿತು ಮಾತನಾಡಿದರು.

ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ. ಭೀಮಣ್ಣ ಘನಾತೆ ಮುಖ್ಯಸ್ಥರು ಇತಿಹಾಸ ವಿಭಾಗ, ಇವರು ಕಲಬುರಗಿ ಕೋಟೆಯ ಜಾಮಿ ಮಸೀದಿಯ ವಿಶೇಷತೆಯನ್ನು ಕುರಿತು, ಡಾ. ಮಲ್ಲಿಕಾರ್ಜುನ ಶೆಟ್ಟಿ ವಿಶ್ವ ಪ್ರವಾಸೋಧ್ಯಮದ ವಿಶೇಷತೆ ಹಾಗೂ ವಿಶ್ವ ಪ್ರವಾಸೋಧ್ಯಮಕ್ಕೆ ಕಲಬುರಗಿಯ ಕೊಡುಗೆಗಳನ್ನು ಕುರಿತು, ಡಾ. ಪ್ರಕಾಶ ಬಡಿಗೇರ್ ಬಹಮನಿ ಸುಲ್ತಾನರ ಕೊಡುಗೆಗಳನ್ನು ಕುರಿತು ಉಪನ್ಯಾಸ ನೀಡಿದರು. ಡಾ. ಪದ್ಮಾವತಿಯವರು ಮಕ್ಕಳಿಂದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಡೆಸಿಕೊಟ್ಟರು.

ಡಾ. ಶಂಭುಲಿಂಗ ಎಸ್. ವಾಣಿ ಸಂಯೋಜಕರು, ಕಲಬುರಗಿ ಇನ್‍ಟ್ಯಾಕ್ ಅಧ್ಯಾಯ ಇವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಇಂದು ನಾವು ಅಚರಿಸುತ್ತಿರುವ ‘ವಿಶ್ವಪ್ರವಾಸೋಧ್ಯಮ ದಿನಾಚರಣೆಗೆ ಸೂಕ್ತವಾಗಿರುವಂತಹ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸ್ಮಾರಕಗಳು ನಮ್ಮ ಕಲಬುರಗಿಯಲ್ಲಿವೆ. ಅದರಲ್ಲಿ ಜಾಮಿಮಸೀದಿ ಮತ್ತು ಜಗತ್ತಿನ ಉದ್ದನೆಯ ತೋಪು. ಆದರೆ ಇವುಗಳ ನಿರ್ವಹಣೆ, ಪ್ರಚಾರ, ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಸಮಾರೋಪ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ, ವಿದ್ಯಾರ್ಥಿನಿಯರು, ಇನ್‍ಟ್ಯಾಕ್ ಪದಾಧಿಕಾರಿಗಳು ಹಾಗೂ ಸ್ಥಳಿಯ ನಾಗರಿಕರು ಭಾಗವಹಿಸಿದರು. ಕೊನೆಯದಾಗಿ ವಿದ್ಯಾರ್ಥಿನಿಯರು ಕಾರ್ಯಕ್ರಮ ಕುರಿತು ಅನಿಸಿಕೆಯನ್ನು ಹೇಳುವುದರ ಮೂಲಕ ಮುಕ್ತಾಯಗೊಂಡಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here