ಹೊಸ ಡಿಜಿಟಲ್ ಇಂಡಿಯಾವನ್ನು ಚಿತ್ರಿಸಲು ಬಿಎಸ್‍ಎನ್‍ಎಲ್ ಚಿತ್ರಕಲೆ ಸ್ಪರ್ಧೆ

0
17

ಕಲಬುರಗಿ: ಬಿಎಸ್‍ಎನ್‍ಎಲ್ ಅಕ್ಟೋಬರ್ 1 ರಂದು ಬಿಎಸ್‍ಎನ್‍ಎಲ್ ರಚನಾ ದಿನ’ವನ್ನು ಆಚರಿಸುತಿರುವ ಅಂಗವಾಗಿ 2023ರ ಸೆಪ್ಟೆಂಬರ್ 20ರಿಂದ ಭಾರತದಾದ್ಯಂತ ಬಿಎಸ್‍ಎನ್‍ಎಲ್ ವತಿಯಿಂದ ಮಕ್ಕಳಿಗಾಗಿ ಸ್ಕೆಚ್/ಪೇಂಟಿಂಗ್ ಸ್ಪರ್ಧೆಯನ್ನು ಏರಪಡಿಲಾಯಿತು.

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ವಿವಿಧ ಶಾಲೆಗಳ 5 ವರ್ಷದಿಂದ 10 ವರ್ಷದೊಳಗಿನ ನೂರಾರು ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯ ಥೀಮ್ ಬಿಎಸ್‍ಎನ್‍ಎಲ್ ಭಾರತ್ ಫೈಬರ್ ಬಳಸಿ ಸ್ಮಾರ್ಟ್ ಕಲಿಕೆ ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣದ ವಿಶಾಲ ಪದವಾಗಿ ಸ್ಮಾರ್ಟ್ ಕಲಿಕೆ. ಸುಧಾರಿತ ತಂತ್ರಜ್ಞಾನಗಳು ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ, ಮತ್ತು ಅನುಕೂಲಕರವಾಗಿ ಪಡೆಯಲು ಕಲಿಕೆಯನ್ನು ಹೇಗೆ ಸಕ್ರಿಯಗೊಳಿಸುತ್ತಿವೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ.

Contact Your\'s Advertisement; 9902492681

ಬಿಎಸ್‍ಎನ್‍ಎಲ್ ಭಾರತ್ ಫೈಬರ್ 30 ಎಂಬಿಪಿಎಸ್ ನಿಂದ 300 ಎಂಬಿಪಿಎಸ್ ವರೆಗೆ ಹೈ-ಸ್ಪೀಡ್ ಬ್ರಾಡ್‍ಬ್ಯಾಂಡ್, ಅನಿಯಮಿತ ಧ್ವನಿ ಕರೆಗಳನ್ನು ದೇಶದಾದ್ಯಂತ ನೀಡುತ್ತದೆ. ನವ ಡಿಜಿಟಲ್ ಇಂಡಿಯಾವನ್ನು ಚಿತ್ರಿಸಲು ಚಿಕ್ಕ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.

ಸ್ಪರ್ಧೆಯ ಮೊದಲ ಮೂರು ವಿಜೇತರಿಗೆ ಬಹುಮಾನಗಳು ಮತ್ತು ಉತ್ತಮ ಚಿತ್ರಕಲೆಗಳಿಗೆ ಶ್ಲಾಘನೆಯ ಪ್ರಮಾಣಪತ್ರಗಳನ್ನು ಅಕ್ಟೋಬರ್ 2023 ರ ಮೊದಲ ವಾರದಲ್ಲಿ ನೀಡಲಾಗುವುದು. ಎಂದು ಬಿಎಸ್‍ಎನ್‍ಎಲ್ ಮುಖ್ಯಸ್ಥರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here