ಕಲಬುರಗಿ; ಜಾತ್ರೆಗಳು ನಮ್ಮ ದೇಶದ ಮೂಲ ಸಂಸ್ಕೃತಿ ಬಿಂಬಿಸುತ್ತವೆ, ಜಾತ್ರೆಗಳು ಸಾಮರಸ್ಯದ ಸಂಕೇತಗಳಾಗಿ ಎಲ್ಲರನ್ನು ಒಂದೇ ಕಡೆ ಹಿಡಿದಿಡುತ್ತವೆ. ಇದರಿಂದ ಸಾಜದಲ್ಲಿ ಸಾಮರಸ್ಯದ ಬದುಕು ಕಟ್ಟುವುದು ಸಾಧ್ಯ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್ ನೆಲೋಗಿ ಹೇಳಿದ್ದಾರೆ.
ಕಲಬುರಗಿ ಹೊರವಲಯದಲ್ಲಿರುವ ಪಾಣೆಗಾoವ್ ಶಿವಾಜಿ ತಾಂಡದಲ್ಲಿ ಶ್ರೀ ಆದಿತ್ಯ ಮಹಾರಾಜರು ಎರಡನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಾತನಾಡಿದರು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯ ಪರವತ ಲಿಂಗ ಪರಮೇಶ್ವರ ಮಾರಾಜರು ಪೂಜ್ಯ ಬಲಿರಾಮ ಮಹಾರಾಜರು, ಪೂಜ್ಯ ಮುರಾರಿ ಮಹಾರಾಜರು, ಮಾತೃಶ್ರೀ ಲತಾದೇವಿ ಭಾಗ್ಯವಂತಿ ವರಪುತ್ರೀ ಕೆಸರಟಿಗಿ ಪೂಜ್ಯ ಅನಿಲ್ ಮಹಾರಾಜರು, ಮಾತೃಶ್ರೀ ಕಲಾವತಿ ದೇವಿ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು.
ಅತಿಥಿಗಳಾಗಿ ಲಿಂಗರಾಜ್ ಕಣ್ಣಿ, ಖಣದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಂಕರ್ ಕಾರಬಾರಿ ಗ್ರಾಮ ಪಂಚಾಯಿತಿ ಸದಸ್ಯರಾದ ಹುಸೇನ್ ಸಾಬ ಮೊಹಜನ್ , ಕಿಶನ್ ಗುಂಡು ರಾಠೋಡ , ನಾಗೇಶ್ ಡಿ ಮುಚ್ಕೆಡ್, ಕಲ್ಯಾಣ ರಾವ್ ಪಾಟೀಲ್, ಗಂಟು ನಾಯಕ್ , ಕುಪೇಂದ್ರ ರಾಠೋಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು