ವಾಡಿ: ಪಟ್ಟಣದಲ್ಲಿ ಪುರಸಭೆ ಸಂಯೋಗದೊಂದಿಗೆ ಬಿಜೆಪಿ ಶಕ್ತಿ ಕೇಂದ್ರ, ಪತಂಜಲಿ ಯೋಗ ಸಮಿತಿ,ಜೈ ಭವಾನಿ ತರುಣ ಮಂಡಲ ರೈಲ್ವೆ ಕಾಲೋನಿ ಹಾಗು ಮರಾಠಿ ಗಲ್ಲಿ ಸೇರಿದಂತೆ ವಿವಿಧ ಸಂಘಟನೆಗಳಿಂದ ಸ್ವಚ್ಚತಾ ಹಿ ಸೇವಾ ಅಭಿಯಾನ ಜರುಗಿತು.
ಪಟ್ಟಣದ ಗಾಂಧಿ ವೃತ್ತದಲ್ಲಿ ಅಭಿಯಾನಕ್ಕೆ ಚಾಲನೆ ನಿಡಿ ಮಾತಾನಾಡಿದ ಪಟ್ಟಣದ ಹಿರಿಯ ಮುಖಂಡ ಬಸವರಾಜ ಪಂಚಾಳ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ಬೆಳಿಗ್ಗೆ 10:00 ಗಂಟೆಗೆ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಲು ಭಾರತದ ಎಲ್ಲಾ ನಾಗರಿಕರಿಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಇದನ್ನು ‘ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್’ ಎಂಬ ಧ್ಯೇಯ ದೊಂದಿಗೆ, ಸ್ವಚ್ಛತಾ ಹಿ ಸೇವಾ ಅಭಿಯಾನದಲ್ಲಿ ನಾವು ಪಾಲ್ಗೊಂಡು ವಾಡಿಯ ಸಮಸ್ತ ಜನರೊಂದಿಗೆ ಇದನ್ನು ಯಶಸ್ವಿಗೊಳಿಸುವುದು ನಮ್ಮ ಜವಾಬ್ದಾರಿ ಎಂದರು.
ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜೀರೋಳ್ಳಿ, ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ, ಪುರಸಭೆ ಅಧಿಕಾರಿ ಲತಾಮಣಿ,ಯುವ ಮುಖಂಡ ಭಾಗಣ್ಣ ದೊರೆ ಮಾತನಾಡಿದರು.
ರಾಮಚಂದ್ರ ರಡ್ಡಿ, ಹರಿ ಗಲಾಂಡೆ,ರವಿ ನಾಯಕ,
ಶಿವಶಂಕರ ಕಾಶೆಟ್ಟಿ, ಪ್ರಮೋದ ಚೊಪಡೆ,ಬಸವರಾಜ ಕಿರಣಗಿ, ಶಿಕ್ಷಕಿ ಅನುಸುಯಾ ಚವ್ಹಾಣ,ಹೀರಾ ನಾಯಕ, ಮಹೇಂದ್ರ ಕುಮಾರ ಪುಜಾರಿ, ಅಭಿಷೇಕ ರಾಠೊಡ,ಅರ್ಜುನ ದಹಿಯಾಂಡೆ,ಆನಂದ ಇಂಗಳಗಿ, ಅಯ್ಯಣ್ಣ ದಂಡೋತಿ,ಪ್ರೇಮ ರಾಠೊಡ, ಸೇರಿದಂತೆ ಪಟ್ಟಣದ ಪ್ರಮುಖರು, ಪುರಸಭೆ ಸಿಬ್ಬಂದಿಗಳು ಪೌರ ಕಾರ್ಮಿಕರು ಪಾಲ್ಗೊಂಡು ಗಾಂಧಿ ವೃತ್ತದಿಂದ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸುತ್ತಾ ಡಾ ಬಿ ಆರ್ ಅಂಬೇಡ್ಕರ್ ಅವರ ವೃತದಲ್ಲಿ ಸ್ವಚ್ಚತಾ ಅಭಿಯಾನ ಮುಕ್ತಾಯ ಗೊಳಿಸಿದರು.