ಮೊರಾರ್ಜಿ ಶಾಲೆ ಮಕ್ಕಳಿಗಿಲ್ಲ ಸಮವಸ್ತ್ರ ಭಾಗ್ಯ

0
117

ವಾಡಿ: ಶಾಲೆ ಎಂದರೆ ಅಲ್ಲಿ ಬೂಟು, ಬೆಲ್ಟ್, ಸಮವಸ್ತ್ರ ಧರಿಸಿದ ಶಿಸ್ತುಬದ್ಧ ವಿದ್ಯಾರ್ಥಿ ಸಮೂಹವಿರಬೇಕು. ಶಾಲೆಯ ಮುಂದೊಂದು ಧ್ವಜಸ್ತಂಭವಿರಬೇಕು. ತ್ರೀವರ್ಣದ ರಂಗು ಶಾಲಾ ಗೋಡೆಯ ಸೌಂದರ್ಯ ಹೆಚ್ಚಿಸರಬೇಕು. ಆಟದ ಮೂದಾನದಲ್ಲಿ ಮಕ್ಕಳ ಚಿಲಿಪಿಲಿ ಸದ್ದು ಕಿವಿಗಪ್ಪಳಿಸಬೇಕು. ಇದಾವುದೂ ಇಲ್ಲದ ಶಾಲೆ ದನದ ಕೊಟ್ಟಿಗೆ ರೂಪ ಪಡೆದುಕೊಂಡು ಮಕ್ಕಳ ಭವಿಷ್ಯಕ್ಕೆ ಕಂಟಕವಾಗುತ್ತದೆ.

ಅಂತಹದ್ದೊಂದು ವಸತಿ ಶಾಲೆ ವಾಡಿ ಪಟ್ಟಣದಲ್ಲಿದ್ದು, ಹತ್ತಾರು ಸಮಸ್ಯೆಗಳೊಂದಿಗೆ ಮಕ್ಕಳು ದಿನದೂಡುವಂತಾಗಿದೆ. ಇಲ್ಲಿನ ಸೋನಾಬಾಯಿ ಬಡಾವಣೆಯ ಬಾಡಿಗೆ ಕಟ್ಟಡವೊಂದರಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಶುರುವಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೋರಾರ್ಜಿ ದೇಸಾಯಿ ವಸತಿ ಶಾಲೆ ಸಮಸ್ಯೆಗಳ ಗೂಡಾಗಿದೆ. ಬಡ ಕುಟುಂಬಗಳ ಮಕ್ಕಳಿಗೆ ಊಟ, ವಸತಿ ಹಾಗೂ ಶಿಕ್ಷಣ ಸೌಲಭ್ಯ ಒದಗಿಸುತ್ತಿರುವ ಸರಕಾರ, ಅಗತ್ಯ ಸೌಕರ್ಯಗಳನ್ನು ಸಮರ್ಪಕವಾಗಿ ನೀಡದೆ ವಂಚಿಸಿದ್ದು, ಮಕ್ಕಳ ಗೋಳಾಟಕ್ಕೆ ಕಾರಣವಾಗಿದೆ.
ಈ ಶಾಲೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿರುವ ೨೦೦ ವಿದ್ಯಾರ್ಥಿಗಳು ಅಕ್ಷರಾಭ್ಯಾಸ ಮಾಡುತ್ತಿದ್ದಾರೆ. ೧೪ ಜನ ಶಿಕ್ಷಕರಿದ್ದು, ನಾಲ್ಕು ತರಗತಿ ಕೋಣೆಗಳಿವೆ.

Contact Your\'s Advertisement; 9902492681

ಬಾಡಿಗೆ ಕಟ್ಟಡವಾಗಿದ್ದರಿಂದ ಶೌಚಾಲಯ ಮತ್ತು ಸ್ನಾದ ಕೋಣೆಗಾಗಿ ಸಾಲುಗಟ್ಟಿ ಕಾಯಬೇಕಿದೆ. ಎಲ್ಲಾ ವಿದ್ಯಾರ್ಥಿಗಳು ಏಕಕಾಲದಲ್ಲಿ ಊಟ ಮಾಡುವಂತಿಲ್ಲ. ಇಕ್ಕಟ್ಟಾದ ಒಂದು ಕೋಣೆಯಲ್ಲಿ ಒಂದು ತರಗತಿಯ ಮಕ್ಕಳು ಒಮ್ಮೆ ಎಂಬಂತೆ ಸರತಿ ಸಾಲಿನಲ್ಲಿ ಭೋಜನ ಮುಗಿಸಬೇಕು. ಕೂಡಲು ಜಾಗವಿಲ್ಲದ್ದಕ್ಕೆ ಹಸಿದ ಮಕ್ಕಳು ಗಂಟೆಗಟ್ಟಲೆ ಕಾಯ್ದು ಹೊಟ್ಟೆ ಸುಡಬೇಕಾದ ಸ್ಥಿತಿಯಿದೆ. ಮಲಗಲು ಗಾದಿ ಮಂಚಗಳಿದ್ದರೂ ನೆಲದ ಮೇಲೆ ಮಲಗಬೇಕಾದ ಪರಸ್ಥಿತಿದೆ. ಪುಸ್ತಕ, ನೋಟ್‌ಬುಕ್ ವಿತರಿಸಲಾಗಿದೆ. ಆದರೆ ಶಾಲೆ ಶುರುವಾಗಿ ಮೂರು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿಲ್ಲ. ಹೀಗಾಗಿ ಮಕ್ಕಳಲ್ಲಿ ಶಿಸ್ತು ಕಣ್ಮರೆಯಾಗಿದ್ದು, ಶಾಲಾ ವಾತಾವರಣವೇ ಕಳೆಗುಂದಿದೆ. ಉತ್ತಮ ಕಟ್ಟಡ ಒದಗಿಸುವ ಜತೆಗೆ ಅಗತ್ಯ ಸೌಲಭ್ಯಗಳನ್ನು ಪೂರೈಸುವ ಮೂಲಕ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂದು ಪುರಸಭೆ ಸದಸ್ಯ ತಿಮ್ಮಯ್ಯ ಪವಾರ, ಕಾಂಗ್ರೆಸ್ ಮುಖಂಡ ನಾಗೇಂದ್ರ ಜೈಗಂಗಾ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ವಿಜಯಕುಮಾರ ಯಲಸತ್ತಿ ಆಗ್ರಹಿಸಿದ್ದಾರೆ.

ಸ್ವಂತ ಕಟ್ಟಡವಿಲ್ಲದ ಕಾರಣ ಮೋರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕಳೆದ ನಾಲ್ಕು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದೇವೆ. ಸರಕಾರ ಎಲ್ಲಾ ಸೌಲಭ್ಯ ಒದಗಿಸಿದೆ. ಸ್ಥಳದ ಕೊರತೆಯಿಂದ ಸಮರ್ಪಕವಾಗಿ ಮಕ್ಕಳಿಗೆ ಸಲ್ಲುತ್ತಿಲ್ಲ. ಊಟ ಮತ್ತು ವಸತಿಗೆ ತೊಂದರೆಯಾಗುತ್ತಿದೆ. ಸರಕಾರದಿಂದ ಸಮವಸ್ತ್ರ ವಿತರಣೆಯಾಗಿಲ್ಲ. ರಾವೂರ ಗ್ರಾಮದಲ್ಲಿ ವಸತಿ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಸುಣ್ಣ ಬಣ್ಣ ಮುಗಿದ ನಂತರ ಕಟ್ಟಡ ನಮಗೆ ಹಸ್ತಾಂತರವಾಗಲಿದೆ. ಅಕ್ಟೋಬರ್ ತಿಂಗಳಲ್ಲಿ ಹೊಸ ಕಟ್ಟಡಕ್ಕೆ ಶಿಫ್ಟ್ ಆಗುತ್ತೇವೆ ಎಂದು ಪ್ರಾಂಶುಪಾಲ ಮೃತ್ಯುಂಜಯ ಚೌಧರಿ ಪ್ರತಿಕ್ರೀಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here