ಮಹಾತ್ಮಾ ಗಾಂಧಿ ಹಾಗೂ ಲಾಲ ಬಹದ್ದೂರ್ ಶಾಸ್ತ್ರೀ ಜನ್ಮದಿನ ಆಚರಣೆ

0
14

ಕಲಬುರಗಿ : ವಂಶಿಕಾ ವೇಲಪೇರ್ ಮತ್ತು ಎಜ್ಯಕೇಷನಲ್ ಟ್ರಸ್ಟ ಅವರ ಅನನ್ಯ ಪದವಿ ಸ್ನಾತಕೋತರ ಹಾಗೂ ಅನನ್ಯ ಕೋಚಿಂಗ ಸೆಂಟರ್‍ನಲ್ಲಿ ಮಹಾತ್ಮಾ ಗಾಂಧಿ ಯವರ 154ನೇ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀಯವರ 19ನೇ ಜನ್ಮದಿನವನ್ನು ಭಾವಚಿತ್ರದ ಪೂಜೆಯೊಂದಿಗೆ ಆಚರಿಸಲಾಯಿತು.

ಪ್ರಾಂಶುಪಾಲ ಡಾ. ಶರಣು ಹೋನಗೆಜ್ಜಿ ಮಾತಾಡುತ್ತಾ ಗಾಂಧೀಜಿಯವರು ಆಹಿಂಸಾ ಸತ್ಯದ ಪ್ರತಿಪಾದಿಯಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾತ್ಮರು. ಅವರ ಸರಳ ಜೀವನ ನಮಗೆಲ್ಲರಿಗೂ ಮಾದರಿಯಾಗಬೇಕು.
ಲಾಲ ಬಹದ್ದೂರ್ ಶಾಸ್ತ್ರೀಯವರು ಜೈ ಜವಾನ್ ಜೈ ಕಿಸಾನ್ ಘೋಷಣೆ ಮಾಡಿದ ಸರಳ ವ್ಯಕ್ತಿತ್ವದ ಶಾಂತಿದೂತರಾಗಿದ್ದರು. ಅವರು ಪ್ರಧಾನಿಯಾಗಿ ಮಾಡಿದ ಕಾರ್ಯಗಳು ಶ್ಲಾಘನೀಯ, ಶಾಂತಿ, ಅಹಿಂಸೆಗಳ ಹರಿಕಾರ, ಮಹಾನ್ ಮಾನವತಾವಾದಿ, ಸಮಾಜ ಸುಧಾರಕ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜಯಂತಿಯಂದು ಗೌರವ ನಮನ ಸಲ್ಲಿಸಿದರು.

Contact Your\'s Advertisement; 9902492681

ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ, ಮುಂತಾದ ಶಾಂತಿಯುತ ಹೋರಾಟಗಳ ಮೂಲಕ ಬ್ರಿಟಿಷರ ವಿರುದ್ಧ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯವರ ಸೇವೆಯನ್ನು ಸ್ಮರಿಸಿ, ಗೌರವಿಸೋಣ ಹಾಗೂ ಸ್ವಸ್ಥ ಸಮಾಜ ಮಧ್ಯಪಾನ ಸೇವನೆ ಮಾಡದಿರಿ, ಆರೋಗ್ಯವೆ ಭಾಗ್ಯ ಮರೆಯದಿರಿ, ಮಧ್ಯಸೇವನೆಯಿಂದ ಲಾಭವೇನು? ನಿನ್ನ ದೇಹಕಿದು ಹಾನಿಯಲ್ಲವೇನು? ಗಾಂಧಿತತ್ವವ ಮರೆತೆಯೇನು? ಮಧ್ಯಪಾನ ಬಿಟ್ಟು ನಡೆ ನೀನು ನಿನ್ನ ಚಟದಿಂದ ಹಾಳು ಮನೆ-ಮಠ ಇದ ಬಿಟ್ಟು ಬದುಕಲೇಕೆ ನಿನ್ನ ಹಠ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಪ್ರಭಾಕರ ಕೋಂಬಿನ್, ವಿದ್ಯಾರ್ಥಿಗಳಾದ ಪ್ರಶಾಂತ, ವೈಶಾಲಿ, ಪ್ರೀಯಾಂಕಾ ಸೇರಿದಂತೆ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಬಳಗ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here