ಶಹಾಬಾದ: ರಸ್ತೆಯಲ್ಲಿ ತಗ್ಗು ಗುಂಡಿಗಳನ್ನು ನೋಡಿದ್ದೆವೆ.ಆದರೆ ಈ ರಸ್ತೆಯಲ್ಲಿ ತಗ್ಗು ಗುಂಡಿಗಳಲ್ಲಿಯೇ ರಸ್ತೆ ಅಲ್ಪ ಸ್ವಲ್ಪ ಕಾಣುತ್ತದೆ. ನಿತ್ಯ ಈ ರಸ್ತೆಯಿಂದ ತೆರಳುವ ಜನರಿಗೆ ಎಲ್ಲಿಲ್ಲದ ತೊಂದರೆ, ವಾಹನ ಸವಾರರಿಗೆ ದೊಡ್ಡ ಸವಾಲು ಸ್ವೀಕರಿಸಿದಂತಾಗುತ್ತಿದೆ. ಹರಿದು ಚಿಂದಿಯಾಗಿರುವ ರಸ್ತೆ, ಎಲ್ಲಿ ನೋಡಿದರಲ್ಲಿ ತಗ್ಗು ಗುಂಡಿಗಳು, ಇಲ್ಲಿನ ಬಹುತೇಖ ರಸ್ತೆಗÀಳಲ್ಲಿ ಸಂಚರಿಸುವ ಜನರಿಗೆ ಎಲ್ಲಿಲ್ಲದ ಸಂಕಟ.ಇದು ನಗರದಿಂದ ಜೇವರ್ಗಿ ಹೋಗುವ ರಾಜ್ಯ ಹೆದ್ದಾರಿ ರಸ್ತೆಯ ದುಸ್ಥಿತಿ.
ಈಗಾಗಲೇ ಸಾರಿಗೆ ಇಲಾಖೆ ಈ ರಸ್ತೆಗೆ ಬಸ್ ಸಂಚಾರವನ್ನು ಸಂಪೂರ್ಣ ನಿಲ್ಲಿಸಿದ್ದಾರೆ.ಇಲ್ಲಿನ ರಸ್ತೆ ಸಂಪೂರ್ಣ ಹಾಳಾಗಿದೆ.ಅಲ್ಲದೇ ಬಸ್ ಕೆಟ್ಟು ನಿಲ್ಲುತ್ತಿವೆ. ಬಸ್ ಚಲಿಸಲಾರದಂತಹ ಕೆಟ್ಟ ಪರಿಸ್ಥಿತಿಯಿದೆ.ವಾಹನ ಚಾಲಕರು ಕೆಳಗಿಳಿದು ತಗ್ಗುಗಳನ್ನು ನೋಡಿ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಇಲ್ಲಿರುವುದರಿಂದ ಬಸ್ ಸಂಚಾರ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದರೆ ಎಷ್ಟರ್ ಮಟ್ಟಿಗೆ ಹಾಳಾಗಿದೆ ಎಂದು ತಿಳಿದುಕೊಳ್ಳಬಹುದು.
ನಗರದ ಕನಕದಾಸ ವೃತ್ತದಿಂದ ಪ್ರಾರಂಭವಾದ ರಸ್ತೆ ಫಿರೋಜಾಬಾದ ವೃತ್ತದವರೆಗಿನವರೆಗೂ ರಸ್ತೆ ಎಂಬುದು ಅದೋಗತಿಗಿಳಿದಿದೆ. ಹದಗೆಟ್ಟ ಇಲ್ಲಿನ ರಸ್ತೆಗಳು ವರ್ಷದ ಎಲ್ಲಾ ದಿನಗಳಲ್ಲಿ ಇದೇ ಸ್ಥಿತಿಯಲ್ಲಿರುತ್ತವೆ. ಈ ರಸ್ತೆಯ ದುರಸ್ತಿ ಯಾವಾಗ? ಎಂಬುದೆ ನರಕಯಾತನೇ ಅನುಭವಿಸುತ್ತಿರುವ ಪ್ರಯಾಣಿಕರ ಯಕ್ಷ ಪ್ರಶ್ನೆಯಾಗಿದೆ.
ಮಳೆ ಬಂದರೆ ದೊಡ್ಡ ಪ್ರಮಾಣದ ಗುಂಡಿಗಳಲ್ಲಿ ನೀರು ತುಂಬಿಕೊಂಡು ಹೊಂಡಗಳಾಗಿ ಪರಿವರ್ತನೆಯಾಗುತ್ತಿದೆ.ಇದರಿಂದ ವಾಹನ ಸವಾರರಿಗೆ ಗುಂಡಿಗಳ ಆಳ ಗೊತ್ತಾಗದೇ ಬಿದ್ದ ಉದಾಹರಣೆಗಳು ಲೆಕ್ಕಕ್ಕಿಲ್ಲ.ಅನೇಕ ಸಾರ್ವಜನಿಕರು ಆಸ್ಪತ್ರೆಗೂ ಸೇರಿದ್ದಾರೆ.ಆದರೂ ರಸ್ತೆ ಸುಧಾರಣೆ ಮಾಡಬೇಕಾದ ಶಾಸಕರು ಹಾಗೂ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.
ಜನಸ್ನೇಹಿಯಾಗಿರಬೇಕಾದ ರಸ್ತೆಗಳು ಮಾತ್ರ ಹದಗೆಟ್ಟಿವೆ. ರಸ್ತೆಗಳಿಗಾಗಿ ಸರ್ಕಾರ ಕೊಟ್ಯಾಂತರ ರೂಪಾಯಿಗಳು ಖರ್ಚು ಮಾಡುವ ಹಣ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಈ ರಸ್ತೆಯ ಮೂಲಕ ಪ್ರತಿನಿತ್ಯ ಸಾವಿರಾರು ವಾಹನಗಳು ಚಲಿಸುತ್ತವೆ. ಅದರೊಳಗೆ ಪ್ರಯಾಣಿಸುವ ಪ್ರಯಾಣಿಕರು ಜಟಕಾ ಬಂಡಿಯೊಳಗೆ ಕುಂತ ಅನುಭವ ಆಗದೇ ಇರಲಾರದು. ಜೀವ ಕೈಯಲ್ಲಿ ಹಿಡಿದುಕೊಂಡು ಇಲ್ಲಿನ ಜನರು ಪ್ರಯಾಣ ಬಯಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರೆ ಇಲ್ಲಿನ ರಸ್ತೆಗಳಲ್ಲಿ ತೆಗ್ಗು ಗುಂಡಿಗಳನ್ನು ಎಣಿಸಲು ಸಾಧ್ಯವಿಲ್ಲಷ್ಟರ ಮಟ್ಟಿಗೆ ಹಾಳಾಗಿದೆ ಎಂಬುದು ತಿಳಿಕೊಳ್ಳಬಹುದು.
ಇದೇ ರಸ್ತೆಯ ಮೂಲಕ ಅಧಿಕಾರಿಗಳು, ಜನಪ್ರತಿನಿಧಿಗಳು ಅನೇಕ ಬಾರಿ ತಿರುಗಾಡಿದರೂ ಬಹುಶ: ಅವರಿಗೆ ಇದರ ಅನುಭವ ಬಂದಿರಲಕ್ಕಿಲ್ಲ. ಇವರು ಇದ್ದು ಏನು ಪ್ರಯೋಜನವಿಲ್ಲ ಎಂದು ಪ್ರಯಾಣಿಕರ ಅಂಬೋಣವಾಗಿದೆ.ಇಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋದರೂ ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನಹರಿಸುತ್ತಿಲ್ಲ.ಜನರ ಗೋಳು ಕೇಳುತ್ತಿಲ್ಲ. ಈ ರಸ್ತೆಗಳ ಶಾಶ್ವತ ಸುಧಾರಣೆಗೆ ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳುವ ಮೂಲಕ ಪ್ರಯಾಣಿಕರ ನರಕಯಾತನೆ ತಪ್ಪಿಸಬೇಕಾಗಿದೆ.
ರಸ್ತೆಯ ಉದಕ್ಕೂ ತಗ್ಗು ಗುಂಡಿಗಳು, ನೆಲದ ಮೇಲೆ ಕರಡಿಕೊಂಡಿರುವ ಕಂಕರ್ ಬಚಾವಾಗಿ ಹೋಗಬೇಕಾದ ಪ್ರಸಂಗ ಎದುರಾಗಿದೆ. ಶಹಾಬಾದ ನಗರದಿಂದ ಜೇವರ್ಗಿಗೆ ಹೋಗಬೇಕಾದರೆ ಸಾರ್ವಜನಿಕರಿಗೆ ಎಲ್ಲಿಲ್ಲದ ಸಂಕಟ ಉಂಟಾಗುತ್ತಿದೆ.ಕೂಡಲೇ ರಸ್ತೆ ಮಾಡಬೇಕಾದ ಅನಿವಾರ್ಯವಿದೆ. – ಮಹ್ಮದ್ ಅಜರ್ ಜೆಡಿಎಸ್ ಯುವ ಅಧ್ಯಕ್ಷ ಶಹಾಬಾದ.
ನಿತ್ಯ ಪ್ರಯಾಣಿಸುವ ನೌಕರಸ್ಥರು, ವಿದ್ಯಾರ್ಥಿಗಳಿಗೆ ಬಸ್ ಸಂಚಾರ ನಿಲ್ಲಿಸಿರುವುದರಿಂದ ತೊಂದರೆ ಉಂಟಾಗುತ್ತಿದೆ.ಶಹಾಬಾದಿಂದ ಕಲಬುರಗಿಗೆ ನಂತರ ಕಲಬುರಗಿಯಿಂದ ಜೇವರ್ಗಿಗೆ ಸುತ್ತುವರೆದು ಹೋಗುವ ಪರಿಸ್ಥಿತಿ ಉಂಟಾಗಿದೆ.ನಮ್ಮ ಗೋಳು ಯಾರು ಕೇಳದಂತಾಗಿದೆ. ಆದಷ್ಟು ಬೇಗನೆ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿ, ಬಸ್ ಸಂಚಾಕ್ಕೆ ಅನುಕೂಲ ಮಾಡಿಕೊಡಬೇಕು. – ಭಾಗ್ಯಶ್ರೀ ಠಾಕೂರ ಶಹಾಬಾದ.