ಕಲಬುರಗಿ; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿಕ್ಷಣ ಇಲಾಖೆ ಹಾಗೂ ವಿಜ್ಞಾನ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢ ಶಾಲೆ ಕಲ್ಲ ಹಂಗರಗಾ ತಾಟಟಜಿಟಟ ಯಲ್ಲಿ ಶಾಲಾ ಮಕ್ಕಳಿಗೆ “ರೋಗ ವಾಹಕ ಆಶ್ರೀತ ರೋಗಗಳ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ” ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಸಂಯೋಜಕರಾಗಿ ತಾಲೂಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶರಣಮ್ಮ ಪಾಟೀಲ್, ತಾಲೂಕಾ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಅನಸೂಯಾ ಗೊಳಾ ಹಾಗೂ ಮೇಲ್ವಿಚಾರಕರಾಗಿ ಜಿಲ್ಲಾ ರೋಗ. ವಾಹಕ .ಆಶ್ರೀತ ರೋಗಗಳ ನಿಯಂತ್ರಣ ಜಿಲ್ಲಾ ಆರೋಗ್ಯ ಇಲಾಖೆಯ ಕಾರ್ಯಾಲಯದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಂತೋಷ ಮುಳಜೆ ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ಹಾಗೂ ಆರೋಗ್ಯ ಇಲಾಖೆಯ ಅರೋಗ್ಯ ನಿರೀಕ್ಷಣಾಧಿಕಾರಿ ರಾಘವೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಶಾರದಾ ಹೊಸಮನಿ . ಮತ್ತು ಶಾಲೆಯ ಶಿಕ್ಷಕರ ವೃಂದ ಸಹಕಾರ ನೀಡಿದರು ಹಾಗೂ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದರು.