ಸುರಂಗದೊಳಗೆ 400 ಬಗೆಯ ಮೀನು: ನ.26 ರವರೆಗೆ ಪ್ರದರ್ಶನ

0
20

ಕಲಬುರಗಿ: ಪ್ರಪ್ರಥಮ ಬಾರಿಗೆ ಕಲಬುರ್ಗಿಯಲ್ಲಿ ಸುರಂಗ ಮಾರ್ಗದ ಅಕ್ವೇರಿಯಂ ಅಂಡರ್ ವಾಟರ್ ಅಕ್ವಾಟನಲ್ ಶೋ ಬಂದಿದ್ದು ನಗರದ ಜನರು ಪುಳಕಗೊಂಡಿದ್ದಾರೆ. ಸಾರ್ವಜನಿಕರು ಎಂದೂ ನೋಡಿರದ ವಿವಿಧ ಬಗೆಯ ಮೀನುಗಳ ಮೀನುಗಳನ್ನು ಸಮುದ್ರ ಒಳಗಿನ ಅನುಭೂತಿಯಲ್ಲಿ ಕಣ್ತುಂಬಿಕೊಳ್ಳಬಹುದು ಎಂದು ನ್ಯಾಷನಲ್ ಕನ್ಸ್ಯೂಮರ್ ಫೇರ್ ವ್ಯವಸ್ಥಾಪಕ ಸುನಿಲ್ ನಾಯರ್ ತಿಳಿಸಿದರು.

ಸಾವಿರ ಚದರ ಅಡಿ ಸುರಂಗ ಮಾರ್ಗದ ಅಕ್ವೇರಿಯಂ ನಿರ್ಮಿಸಲಾಗಿದ್ದು 400ಕ್ಕೂ ಹೆಚ್ಚು ವಿವಿಧ ಜಾತಿಯ ಮೀನುಗಳಿವೆ. ಸಾಮಾನ್ಯ ಅಕ್ವೇರಿಯಂ ಗಳಂತಿರದೆ ಮೀನುಗಳನ್ನು ಎಲ್ಲ ದಿಕ್ಕುಗಳಿಂದಲೂ ನೋಡಬಹುದು. ಏಂಜಲ್ ಫಿಶ್,ಜಲ್ಲಿ,ಕ್ಲಾನ್,ಬ್ಲಾಕ್, ಕೌ ಫಿಶ್ ಅಲ್ಲದೆ ಅತಿ ಅಪರೂಪದ ಸುನಾಮಿ ಸೇರಿದಂತೆ ವಿಲಕ್ಷಣ ಜಾತಿಯ ಮೀನುಗಳಿವೆ. ಆಯಾ ಜಾತಿಗೆ ತಕ್ಕಂತೆ ಅಕ್ವೇರಿಯಂ ಒಳಗೆ ವಾತಾವರಣ ನಿರ್ಮಾಣ ಮಾಡಲಾಗಿದ್ದು ಟನಲ್ ಉದ್ದಕ್ಕೂ ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಲಾಗಿದೆ.

Contact Your\'s Advertisement; 9902492681

ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ನವೆಂಬರ್ 26ರವರೆಗೂ ಪ್ರದರ್ಶನ ಇರಲಿದ್ದು 5 ರಿಂದ 12 ವರ್ಷದವರಿಗೆ 50 ರೂಪಾಯಿ, ವಯಸ್ಕರಿಗೆ 100 ರೂಪಾಯಿ ಪ್ರವೇಶ ದರ ನಿಗದಿಪಡಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಈ ಪ್ರದರ್ಶನ ಉಪಯುಕ್ತವಾಗಿರುವುದರಿಂದ ಅವರು ಶಾಲೆ ವತಿಯಿಂದ ಗುಂಪಾಗಿ ಬಂದರೆ ಶೇಕಡ 50ರಷ್ಟು ರಿಯಾಯಿತಿ ನೀಡಲಾಗುವುದು. ಟನಲ್ ಮಾತ್ರವಲ್ಲದೆ ಅಕ್ವೇರಿಯಂನಲ್ಲೂ ಮೀನುಗಳನ್ನು ನೋಡಬಹುದು. ಸಂಜೆ 4 ಗಂಟೆಯಿಂದ ರಾತ್ರಿ 9. 30ರವರೆಗೂ ಪ್ರದರ್ಶನ ಇರಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here