ಕಲಬುರಗಿ: ಹಿರಿಯ ನಾಗರಿಕರ ವಿವಿಧ ಬೇಡಿಕೆಗಳ ಈಡೇಕೆಗೆ ಆಗ್ರಹಿಸಿ ಸ್ಲಂ ಜನಾಂದೋಲನ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ವೃದ್ಧಾಪ್ಯ ವೇತನವನ್ನು ರೂ 1,200 ರಿಂದ ರೂ 2,500ಕ್ಕೆ ಹೆಚ್ಚಿಸಬೇಕು, ವೃದ್ಧರಿಗೆ ಪೌಷ್ಟಿಕ ಆಹಾರ ಒದಗಿಸಲು ಸರ್ಕಾರ ಯೋಜನೆ ಅನುಷ್ಠಾನಗೊಳಿಸಬೇಕು, ವೃದ್ಧರಿಗೆ ಅಗತ್ಯವಿರುವ ಮಾತ್ರೆಗಳನ್ನು ಉಚಿತವಾಗಿ ನೀಡಬೇಕು ಮತ್ತು ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ತಪಾಸಣೆ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸಮಿತಿ ಗೌರವಾಧ್ಯಕ್ಷ ಬಾಬುರಾವ್ ದಂಡಿನಕರ್, ಅಧ್ಯಕ್ಷ ಅಲ್ಲಮಪ್ರಭು ನಿಂಬರ್ಗಾ, ಉಪಾಧ್ಯಕ್ಷ ಅನೀಲ ಚಕ್ರ, ಕಾರ್ಯದರ್ಶಿ ವಿಕಾಸ ಸಾವರಿಕ, ಬ್ರಹ್ಮಾನಂದ ಮಿಂಚಾ, ಗಣೇಶ ಕಾಂಬಳೆ, ಯಮನಪ್ಪ ಪ್ರಸಾದ, ಉಸುರಾಜ, ನರಸಮ್ಮ ಆತನೂರ, ಸಿದ್ರಾಮ ತಿರ್ಮಾನ್, ಅಶೋಕ ರಾಠೋಡ, ಪ್ರಕಾಶ ಗುಲಾಬವಾಡಿ ಸೇರಿದಂತೆ ಸೇರಿದಂತೆ ಸಮಿತಿಯ ಮುಖಂಡರು ನಾಗರಿಕರು ಇದ್ದರು,