ಪಿಹೆಚ್‍ಡಿ ಪ್ರಮಾಣ ಪತ್ರ ಅತಿಥಿ ಉಪನ್ಯಾಸಕರ ಹುದ್ದೆಗೆ ಪರಿಗಣಿಸದಂತೆ ಆಗ್ರಹಿಸಿ ಡಿ.ಸಿಗೆ ಮನವಿ

0
15

ಸುರಪುರ: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆ ಸಂದರ್ಭದಲ್ಲಿ ದೂರ ಶಿಕ್ಷಣ ವಿಶ್ವ ವಿದ್ಯಾಲಯಗಳಿಂದ ಹಣ ನೀಡಿ ತಂದಿರುವ ನಕಲಿ ಪಿಹೆಚ್‍ಡಿ ಪ್ರಮಾಣ ಪತ್ರಗಳನ್ನು ಪರಿಗಣೆನೆಗೆ ತೆಗೆದುಕೊಳ್ಳಬಾರದು ಎಂದು ನಮ್ಮ ಕರ್ನಾಟಕ ಸೇನೆ ಸಂಘಟನೆ ಮುಖಂಡರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ ಹೊರ ರಾಜ್ಯದ ಪಿಎಚ್‍ಡಿ ಹಾಗೂ ದೂರ ಶಿಕ್ಷಣ ಪ್ರಮಾಣ ಪತ್ರಗಳು ನಕಲಿ ಪ್ರಮಾಣ ಪತ್ರಗಳನ್ನು ಲಕ್ಷಾಂತರ ರೂಪಾಯಿ ಹಣ ಕೊಡುವ ಏಜೆಂಟರು ಹಾವಳಿ ವಿಪರೀತವಾಗಿದ್ದು ಇಂತಹ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಕೆಲವು ಅಭ್ಯರ್ಥಿಗಳು ಅತಿಥಿ ಉಪನ್ಯಾಸಕರಾಗಿ ನೇಮಕಗೊಳ್ಳಲು ಹೊರಟಿದ್ದು ಇದರಿಂದ ಪ್ರಾಮಾಣಿಕ ಸಂಶೋಧನಾ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಹಾಗೂ ಶಿಕ್ಷಣ ಮೌಲ್ಯ ಕಳೆದುಕೊಳ್ಳುತ್ತಿದ್ದು ಇಂತಹ ಉಪನ್ಯಾಸಕರು ಬೋಧನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಆತಂಕ ಪರಿಸ್ಥಿತಿ ಎದುರಿಸುವಂತಾಗಿದೆ, ಇಂತಹ ಉಪನ್ಯಾಸಕರಿಂದ ರಾಷ್ಟ್ರ ನಿರ್ಮಾಣವಾಗುವದಿಲ್ಲ ನಾಶಗೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕೂಡಲೇ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಅಭ್ಯರ್ಥಿಗಳು, ಏಜೆಂಟರು ಮತ್ತು ವಿಶ್ವವಿದ್ಯಾಲಯಗಳ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿರುವ ಮುಖಂಡರು ಕಾಲೇಜುಗಳ ಪ್ರಾಚಾರ್ಯರು ಅತಿಥಿ ಶಿಕ್ಷಕರ ಆಯ್ಕೆ ಮಾಡುವ ಸಂದರ್ಭದಲ್ಲಿ ಇಂತಹ ಅಭ್ಯರ್ಥಿಗಳ ಪ್ರಮಾಣ ಪತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಇಂತಹ ಅಭ್ಯರ್ಥಿಗಳನ್ನು ದೂರವಿಟ್ಟು ನೈಜತೆ ಇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದರು ಒಂದು ವೇಳೆ ಲೋಪದೋಷಗಳು ಕಂಡು ಬಂದಲ್ಲಿ ಕಾಲೇಜುಗಳ ಮುಂದೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶ್ರೀಧರ ನಾಯಕ, ಕಾರ್ಯದರ್ಶಿ ಚಂದ್ರಶೇಖರ ನಾಯಕ, ಸಾಮಾಜಿಕ ಕಾರ್ಯಕರ್ತ ಸಚಿನಕುಮಾರ ನಾಯಕ, ಚಂದ್ರು ಪ್ರಧಾನಿ, ಗೋಪಾಲ, ಶಂಕರ ಇತರರಿದ್ದರು.

ಜಾಂಭವ ಯುವ ಸೇನೆ ಮನವಿ: ದೂರ ಶಿಕ್ಷಣ ವಿಶ್ವ ವಿದ್ಯಾಲಯಗಳಿಂದ ಹಣ ನೀಡಿ ತರುವ ನಕಲಿ ಪಿಹೆಚ್‍ಡಿ ಪ್ರಮಾಣ ಪತ್ರಗಳಿಗೆ ಅತಿಥಿ ಉಪನ್ಯಾಸಕ ಹುದ್ದೆ ನೀಡಬಾರದು ಮತ್ತು ಅಂತಹ ಪ್ರಮಾಣ ಪತ್ರಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾಕೆಂದರೆ ನಕಲಿ ಪ್ರಮಾಣ ಪತ್ರ ನೀಡುವವರಿಗೆ ಅತಿಥಿ ಉಪನ್ಯಾಸಕ ಹುದ್ದೆ ನೀಡಿದಲ್ಲಿ ಸಂಶೋಧನೆಯಿಂದ ಪಿಹೆಚ್‍ಡಿ ಪಡಿದವರಿಗೆ ಹುದ್ದೆ ಸಿಗದೆ ವಂಚನೆಯಾಗಲಿದೆ.ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಕಲಿ ಪಿಹೆಚ್‍ಡಿ ಪ್ರಮಾಣ ಪತ್ರಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ವಿಜಯಕುಮಾರ ಕೆ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಹಣಮಂತ ಎಮ್ ಬಿಲ್ಲವ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here