ಕಲಬುರಗಿ: ಬಹುಜನ ಸಮಾಜ ಪಕ್ಷ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ಮಾನ್ಯವಾರ ದಾದಾಸಾಹೇಬ್ ಕಾನ್ಸಿರಾಮಜೀಯವರ ಪರಿನಿಬ್ಬಾಣ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳು ಮತ್ತು ಕಲಬುರಗಿ ಲೋಕಸಭಾ ಉಸ್ತುವಾರಿಗಳಾದ ಹುಚ್ಚಪ್ಪ ವಠಾರ, ಜಿಲ್ಲಾ ಸಂಯೋಜಕರಾದ ಮೈಲಾರಿ ಶೆಳ್ಳಗಿ, ಜಿಲ್ಲಾಧ್ಯಕ್ಷರಾದ ಸುನೀಲ ಇಂಗನಕಲ್ಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರಣು ಹಂಗರಗಿ, ಮುನೀರ್ ಷೇಕ್, ಜೀವನ ಗುಂಡಗುರ್ತಿ, ಸುನೀಲ ಜೇವರ್ಗಿ, ಜಯವಂತ ಗುಂಟೆನೋರ ಹಾರೂನ್ ಕತೀಭ್ ಸೇರಿದಂತೆ ಇತರರು ಇದ್ದರು.