ಕಲಬುರಗಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಸಮಿತಿ ವಿಶೇಷ ಸಭೆ ಜರುಗಿತು.
ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ವಿ ರಾಧಾಕೃಷ್ಣನ್ ಸಭೆಯನ್ನು ಉದ್ದೇಶಸಿ ಮಾತನಾಡಿ 2ವರ್ಷ ಗುತ್ತಿಗೆ ಪದ್ದತಿಯಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಯನ್ನು ನಿಯಮಾನುಸಾರ ತಪ್ಪದೆ ಕಾಯಂಮಾತಿ ಮಾಡಲೇಬೇಕು ಮತ್ತು ಪಿ ಎಫ್ ಹಾಗು ಈ ಎಸ ಐ ಗ್ರ್ಯಾಚುಟಿ ಹಾಗು ಬೋನಸ್ ಸೌಲಭ್ಯವನ್ನು ಎಲ್ಲಾ ನೌಕರರಿಗೂ ಸಿಗಲೇಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡುವ ಮೂಲಕ ಸರ್ಕಾರದಿಂದ ನಮ್ಮ ಹಕ್ಕಿನ ಸೌಲಭ್ಯಗಳನ್ನು ಪಡಿಯಬೇಕೆಂದು ಹೇಳಿದರು.
ಜಿಲ್ಲಾಧ್ಯಕ್ಷ ಶ್ರೀಕಾಂತ ಸ್ವಾಮಿ ಅವರು ಮಾತನಾಡಿ ಅದೇ ರೀತಿ ಜಿಲ್ಲಾ ಸಂಘವು ಸಕ್ರಿಯವಾಗಿ ಕಾರ್ಯನಿರ್ವಹಿಸಿತ್ತಿದ್ದು ಇನ್ನು ಹೆಚ್ಚಿನ ಕಾರ್ಮಿಕರಿಗೆ ಸೌಲಭ್ಯಕೊಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುವುದಕ್ಕೆ ಸನ್ನದ್ಧವಾಗಿದ್ದು ಎಲ್ಲರು ಸಂಘಟನಾತ್ಮಕವಾಗಿ ಸರ್ಕಾರದ ವಿರುದ್ಧ ನೌಕರರ ಹಿತ ಕಾಯಲು ಹೋರಾಡುವ ಅನಿವಾರ್ಯತೆಗೆ ಸದಾ ಸಿದ್ದವಾಗಿದ್ದು ಆದಷ್ಟು ಬೇಗ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಇದೆ ಸಂದರ್ಭದಲ್ಲಿ ಭಾರತೀಯ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷ ಶಂಕರ್ ಸುಲೆಗಾವ ಸಂಘಟನೆಯಲ್ಲಿ ನಿಸ್ವಾರ್ಥವಾಗಿ ಚಟುವಟಿಕೆಯಿಂದ ಕೂಡಿದ ಶಿವರಾಜ್ ವಾರಿಕ್ ಅವರನ್ನು ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಆಯ್ಕೆಮಾಡಿದರು.
ಸಭೆಯಲ್ಲಿ ಅಲ್ಟ್ರಾಟೆಕ್ ಸಿಮೆಂಟ್ನ್ ಮುಖಂಡರಾದ ಶರಣಬಸಪ್ಪ ಸಜ್ಜನ್, ಪ್ರಭು ಮಾಗಿ, ಸಿಮೆಂಟ್ನ ಮುಖಂಡರಾದ ಶೇಖರ್ ರೆಡ್ಡಿ , ಈ ಎಸ ಐ ನೌಕರರ ಸಂಘದ ಮುಖಂಡರಾದ ಲಕ್ಷ್ಮಿಕಾಂತ್, ಮರೇಪ್ಪ, ಕಟ್ಟಡ ಕಾರ್ಮಿಕ ಮಜ್ದೂರ್ ಸಂಘದ ಪ್ರಮುಖರಾದ ಶಿವಾನಂದ ಸ್ವಾಮಿ, ಗೀತಾ ಕುಲಕರ್ಣಿ, ಚಂದ್ರಕಲಾ ಸರಸ್ವತಿ ಸೇರಿದಂತೆ ಸರ್ವ ಸದಸ್ಯರು ಇದ್ದರು.