ಗ್ರಾಮ ಪಂಚಾಯಿತಿ ಅಧ್ಯಕ್ಷನ ಕೊಲೆ ಆರೋಪಿಗಳ ಬಂಧನಕ್ಕೆ ಶಾಸಕ ಎಂ.ವೈ.ಪಾಟೀಲ್ ಶಾಸಕರ ಆಗ್ರಹ

0
24

ಕಲಬುರಗಿ: ಅಫಜಲಪುರ ತಾಲ್ಲೂಕಿನ ಮದರಾ(ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷ ಗೌಡಪ್ಪಗೌಡ ಬಿರಾದಾರ ಅವರ ಹತ್ಯೆ ಖಂಡನೀಯ ಕೃತ್ಯವಾಗಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಅಜಲಪುರ ಶಾಸಕ ಎಂ.ವೈ.ಪಾಟೀಲ್ ಆಗ್ರಹಿಸಿದರು.

ಸಿಐಡಿ ತನಿಖೆ ನಡೆಯಲಿ: ಸದ್ಯ ಘಟನೆ ನಡೆದು ಕೆಲವು ಗಂಟೆಗಳು ಆಗಿವೆ. ಈಗಾಗಲೇ ಪೆÇಲೀಸರು ತನಿಖೆ ಶುರುಮಾಡಿದ್ದಾರೆ. ಘಟನೆಯ ಬಗ್ಗೆ ಉನ್ನತ ತನಿಖೆ ನಡೆಸುವಂತೆ ಆಗ್ರಹಿಸಲಾಗುವುದು. ಸರಕಾರ ಸಿಐಡಿ ತನಿಖೆ ಮಾಡಿಸಿದರೂ ಉತ್ತಮ. ಒಟ್ಟಿನಲ್ಲಿ ಕೊಲೆಗೆ ಕಾರಣ ಮತ್ತು ಆರೋಪಿಗಳ ಪತ್ತೆ ಆಗಬೇಕಾಗಿದೆ ಎಂದು ಹೇಳಿದರು.

ಈ ಹಿಂದೆ ಭೀಮಾ ತೀರ ಬೇರೆ ವಿಷಯಗಳಿಗೆ ಖ್ಯಾತಿಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಅಂತಹ ಘಟನೆ ನಡೆಯದೆ ಅದು ಮಾಸಿ ಹೋಗಿತ್ತು. ಇದೀಗ ಮತ್ತೆ ಅದೇ ಸ್ಥಿತಿ ನಿರ್ಮಾಣವಾಗಿದ್ದು ಖೇದಕರವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಮದರಾ(ಬಿ) ಗ್ರಾಪಂ ಅಧ್ಯಕ್ಷ ಗೌಡಪ್ಪಗೌಡ ಬಿರಾದಾರ ಅವರನ್ನು ಚೌಡಾಪುರದ ರಸ್ತೆಯಲ್ಲಿ ಹಾಡಹಗಲೇ ಕೊಲೆ ಮಾಡಿದ್ದಾರೆ. ನೂರಾರು ಜನರು ನೋಡಿದ್ದಾರೆ. ಇದು ಯಾವ ಕಾರಣಕ್ಕಾಗಿ ನಡೆದಿದೆ ಎಂಬ ಬಗ್ಗೆ ಪ್ರಾಥಮಿಕ ಮಾಹಿತಿ ಬಂದಿಲ್ಲ ಎಂದರು.

ಕಾಂಗ್ರೆಸ್ ಕಾರ್ಯಕರ್ತ ಗೌಡಪ್ಪಗೌಡ ಬಿರಾದಾರ ಅವರು ಎಲ್ಲರೊಂದಿಗೆ ಚೆನ್ನಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು. ಈ ಕೊಲೆಗೆ ರಾಜಕೀಯ ಕಾರಣ ಇರಬಹುದೇ ಎಂಬ ಸಂಶಯ ನನ್ನನ್ನು ಕಾಡುತ್ತಿದೆ. ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸರಕಾರ ಕ್ರಮ ಕೈಗೊಳ್ಳಬೇಕು. ಈ ಕುರಿತು ಮುಖ್ಯಮಂತ್ರಿಗಳ ಜತೆ ಮಾತನಾಡಲು ಪ್ರಯತ್ನಿಸಿದ್ದುಘಿ, ಅವರು ಸಿಕ್ಕಿಲ್ಲ, ಶೀಘ್ರ ಅವರ ಜತೆ ಮಾತನಾಡಲಾಗುವುದು ಎಂದು ಹೇಳಿದರು.

ಗೌಡಪ್ಪಗೌಡ ಬಿರಾದಾರ ಅವರು ಕಾಂಗ್ರೆಸ್ ಪಕ್ಷರ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲದೇ ಅವರು ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಕ್ರಶರ್ ಮಷಿನ್ ನಡೆಸಿಕೊಂಡಿದ್ದರು. ಕೊಲೆಗೆ ಮುಖ್ಯ ಕಾರಣ ರಾಜಕೀಯವೂ, ವ್ಯವಹಾರವೋ ಅಥವಾ ವೈಯಕ್ತಿಕವೋ ಎಂಬುದು ತಿಳಿಯಬೇಕಿದೆ. ನನ್ನ ವಿರುದ್ಧ ಹಲವರು ಸ್ಪರ್ಧೆ ಮಾಡಿದ್ದಾರೆ, ಯಾರೊಬ್ಬರ ಮೇಲೆ ಸಂಶಯ ಪಡುವ ಹಾಗಿಲ್ಲ. ಇದರ ಬಗ್ಗೆ ಸೂಕ್ತ ತನಿಖೆ ನಡೆದರೆ ಸತ್ಯ ಹೊರ ಬರುತ್ತದೆ ಎಂದು ಅವರು ಹೇಳಿದರು.

ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡದ, ಸಿದ್ದು ಸಿರಸಗಿ, ಅಷ್ಪಕ್ ಬಂದರವಾಡ್, ತಿಪ್ಪಶೆಟ್ಟಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here