ಅಕ್ಕಿ ಖರೀದಿ ಟೆಂಡರ್ ನಲ್ಲಿ ಅಕ್ರಮ: ಆರೋಪ

0
257

ಕಲಬುರಗಿ: ಅಂತ್ಯೋದಯ ಅನ್ನ ಯೋಜನೆ ಆದ್ಯತಾ ಪಡಿತರ ಚೀಟಿದಾರರು ಮತ್ತು ಕಲ್ಯಾಣ ಸಂಸ್ಥೆಗಳಿಗೆ ಹೆಚ್ಚುವರಿ ಅಕ್ಕಿ ಸರಬರಾಜಿಗೆ ರಾಜ್ಯ ಸರ್ಕಾರ ಮುಕ್ತ ಟೆಂಡರ್ ಕರೆಯದೇ, ಕೇಂದ್ರದ ಸಂಸ್ಥೆಗಳಿಂದ ಅಕ್ಕಿ ಖರೀದಿಸಿ ಅಕ್ರಮ ಎಸಗಲಾಗಿದೆ’ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಸಾರವಾಡ ಆರೋಪಿಸಿದ್ದಾರೆ.

ಪ್ರತಿ ಕೆ.ಜಿಗೆ ₹34.60ರಂತೆ ಕೇಂದ್ರ ಸರ್ಕಾರದ ಸಂಸ್ಥೆಗಳಾದ ಕೇಂದ್ರೀಯ ಬಂಡಾರ, ಎನ್‍ಸಿಸಿಎಫ್‍ನಿಂದ ಸರ್ಕಾರ 40 ಸಾವಿರ ಮೆಟ್ರಿಕ್ ಟನ್ ಅಕ್ಕಿ ಖರೀದಿಸಲು ಮುಂದಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಮುಕ್ತ ಟೆಂಡರ್ ಕರೆದರೆ ಹಲವಾರು ಸಂಸ್ಥೆಗಳು ಟೆಂಡರ್‍ನಲ್ಲಿ ಭಾಗವಹಿಸುವ ಮೂಲಕ ಗುಣಮಟ್ಟದ ಅಕ್ಕಿ ಜನರಿಗೆ ದೊರಕುತ್ತಿತ್ತು. ಪ್ರಧಾನ ಮಂತ್ರಿ ಪೆÇೀಷಣಾ ಅಭಿಯಾನ ಯೋಜನೆ ಅಡಿಯ ಫಲಾನುಭವಿಗಳಿಗೆ ವಿತರಣೆ ಮಾಡಲು ಪ್ರತಿ ಕೆ.ಜಿಗೆ ₹29 ರಂತೆ ಅದೇ ಸಂಸ್ಥೆ ವಿತರಣೆ ಮಾಡಿದೆ. ಇದು ನೋಡಿದರೆ ಅಕ್ರಮ ಎಸಗಿರುವುದು ಕಂಡು ಬರುತ್ತದೆ’ ಎಂದರು.

ಕೂಡಲೇ ಈ ಆದೇಶವನ್ನು ರದ್ದುಪಡಿಸಿ ಸರ್ಕಾರ ಬೊಕ್ಕಸಕ್ಕೆ ಆಗುವ ನಷ್ಟವನ್ನು ತಪ್ಪಿಸಬೇಕು. ಗುಣಮಟ್ಟದ ಅಕ್ಕಿ ಪೂರೈಸಬೇಕು. ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿದ್ಧಲಿಂಗ ರಾಠೋಡ, ಸಂಭಾಜಿ ಪಿಸೇ, ರಾಜು ಕುಂಬಾರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here