ಕಲಬುರಗಿ: ಲಿಂ. ಪಿ.ಎಂ.ಮಣ್ಣೂರ ಅವರು ಕೇವಲ ಪತ್ರಕರ್ತರμÉ್ಟೀ ಅಲ್ಲ; ಹೃದಯವಂತರಾಗಿದ್ದರು ಎಂದು ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ನುಡಿದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ ನಿಧನದ ಪ್ರಯುಕ್ತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ನುಡಿನಮನ ಸಲ್ಲಿಸಿದರು.
ಮಣ್ಣೂರ ಅವರು ಕೇವಲ ಪತ್ರಿಕೋದ್ಯಮ ಮಾತ್ರವಲ್ಲ ಕಲೆ, ಸಾಹಿತ್ಯ, ರಂಗ ಭೂಮಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಿದ್ದರು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಟಿ.ವಿ. ಶಿವಾನಂದನ್ ಮಾತನಾಡಿ, ಮಣ್ಣೂರ ಅವರ ಪತ್ರಿಕಾ ಸೇವೆಯಿಂದ ಈ ನಾಡಿಗೆ ಸಾಕಷ್ಟು ಉಪಯೋಗವಾಗಿದೆ ಎಂದರು.
ಈ ಭಾಗದ ಬಗ್ಗೆ ಅಪಾರ ಕಾಳಜಿ ಅವರಿಗಿತ್ತು. ಅನ್ಯಾಯ ಕಂಡರೆ ಸಹಿಸುತ್ತಿರಲಿಲ್ಲ. ಕಮಲಾಕರ ಲಾಕಪ್ ಡೆತ್ ಪ್ರಕರಣವನ್ನು ಮೊಟ್ಟ ಮೊದಲು ಅವರು ಹೊರ ಹಾಕಿ ಅದಕ್ಕೆ ಲಾಜಿಕಲ್ ಅಂತ್ಯ ಒದಗಿಸಿದವರು. 28 ವರ್ಷ ಅವರೊಂದಿಗಿನ ಒಡನಾಟ ಮರೆಯಲಾಗದು ಎಂದು ಬಣ್ಣಿಸಿದರು.
ಹಿರಿಯ ವೈದ್ಯ ಡಾ. ಎಸ್.ಎಸ್. ಗುಬ್ಬಿ ಮಾತನಾಡಿ, ನಗೆ ಚಾಟಿಕೆ ಮೂಲಕ ಎಲ್ಲರನ್ನೂ ನಗಿಸುತ್ತ ಬದುಕಿನ ನಿಜ ದರ್ಶನ ಮಾಡಿಸುತ್ತಿದ್ದರು ಎಂದರು.
ಹಿರಿಯ ಪತ್ರಕರ್ತ ಶಂಕರ ಕೋಡ್ಲಾ ಮಾತನಾಡಿ, ಇನ್ನೊಬ್ಬರ ಸಮಸ್ಯೆಯನ್ನು ಪರಿಹರಿಸುವ ಗುಣ ಹೊಂದಿದ್ದ ಅವರು ಸದಾ ಲವಲವಿಕೆಯಿಂದ ಬದುಕುವುದಕ್ಕೆ ಪ್ರಾಧಾನ್ಯತೆ ನೀಡುತ್ತಿದ್ದರು ಎಂದು ಹೇಳಿದರು.
ಹಿರಿಯ ಪತ್ರಕರ್ತ ಸಿದ್ದಣ್ಣ ಮಾಲಗಾರ ಮಾತನಾಡಿ, ಸಂಘ ಸಂಸ್ಥೆ ಕಟ್ಟುವುದರ ಜೊತೆಗೆ ಅದನ್ನು ಕೆಡಹುವ ಜಾಣ್ಮೆಯೂ ಅವರಿಗೆ ಗೊತ್ತಿತ್ತು. ಜಿಲ್ಲಾ ಕಸಾಪ ಅಧ್ಯಕ್ಷರಾಗಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ, ಮಹಾನಗರ ಪಾಲಿಕೆಯ ಸದಸ್ಯರಾಗಿ, ಅನೇಕ ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿ ಹೀಗೆ ಬಹುಮುಖ ಪ್ರತಿಭೆ ಅವರದಾಗಿತ್ತು. ವೈಯಕ್ತಿಕ ಬದುಕನ್ನು ಬದಿಗಿಟ್ಟು ಸಾಮಾಜಿಕ ಕ್ಷೇತ್ರಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಎಂದರು.
ಪತ್ರಕರ್ತ ಸುಭಾμï ಬಣಗಾರ ಮಾತನಾಡಿ ಮಣೂರ್ ಅವರದ್ದು ಬಹುಮುಖ ವ್ಯಕ್ತಿತ್ವವಾಗಿತ್ತು. ರಾಜಕಾರಣಿಯಾಗಿ ಪತ್ರಕರ್ತರಾಗಿ, ಕಲಾವಿದರಾಗಿ, ಸಂಘಟಕರಾಗಿಯೂ ಅವರು ಗುರುತಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಪ್ರಾದೇಶಿಕ ಮತ್ತು ಜಿಲ್ಲಾ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಶರಣು ಜಿಡಗಾ, ಚಂದ್ರಕಾಂತ ಹಾವನೂರ, ಸಿದ್ದು ಸುಬೇದಾರ, ಸಿದ್ರಾಮಪ್ಪ ಮಾಲಿ ಬಿರಾದಾರ, ವಿಶ್ವನಾಥ ಸ್ವಾಮಿ, ಹಿರಿಯ ಪತ್ರಕರ್ತರಾದ ಶಿವರಾಯ ದೊಡ್ಡಮನಿ ಹಾಗೂ ಇತರರು ಭಾಗವಹಿಸಿದ್ದರು.
ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ರಾಜ್ಯ ಸಮಿತಿ ಸದಸ್ಯ ಡಾ. ಶಿವರಂಜನ ಸತ್ಯಂಪೇಟೆ, ಉಪಾಧ್ಯಕ್ಷರಾದ ರಾಮಕೃಷ್ಣ ಬಡಶೇಷಿ, ದೇವಿಂದ್ರಪ್ಪ ಆವಂಟಿ, ಸುರೇಶ ಬಡಿಗೇರ, ಕಾರ್ಯಕಾರಿ ಸಮಿತಿ ಸದಸ್ಯ ಬಾಬುರಾವ್ ಕೋಬಾಳ, ರಾಜು ಕೋಷ್ಠಿ, ಅಜೀಜುಲ್ಲಾ ಸರಮಸ್ತ್ ಸೇರಿದಂತೆ ಇತರರು ಭಾಗವಹಿಸಿದ್ದರು.