ಸುರಪುರ: ಕನ್ನಡ ಸಾಹಿತ್ಯ ಸಂಘ ಮತ್ತು ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಸಂಯುಕ್ತಾಶ್ರಯದಲ್ಲಿ 37ನೇ ನಾಡಹಬ್ಬ ದಸರಾ ಉತ್ಸವ ಆಚರಣೆಯ ಅಂಗವಾಗಿ ನಾಡದೇವಿಯ ಭಾವಚಿತ್ರದ ಜೊತೆಗೆ ಸ್ತಬ್ಧ ಚಿತ್ರಗಳ ಮೆರವಣಿ ಕಾರ್ಯಕ್ರಮ ನಡೆಸಲಾಯಿತು.
ಗಮನ ಸೆಳೆದ ಸ್ತಬ್ಧ ಚಿತ್ರಗಳು; ನಾಡಹಬ್ಬ ಉತ್ಸವಾಚರಣೆ ನಿಮಿತ್ತ ನಗರದ ವಿವಿಧ ಶಾಲೆಗಳ ಸ್ತಬ್ಧ ಚಿತ್ರಗಳು ಗಮನಸೆಳೆದವು, ಒಂದಕ್ಕಿಂತಲೂ ಒಂದು ಸ್ತಬ್ಧಚಿತ್ರಗಳು ಅತ್ಯುತ್ತಮವಾಗಿ ಮೂಡಿಬಂದು ನೋಡಗರ ಮನ ತಣಿಸಿದವು. ಸರಕಾರಿ ಹಿರಿಯ ಮಾದರಿ ಶಾಲೆಯ (ದರಬಾರ) ಮಕ್ಕಳ ವೇಣುಗೋಪಾಲಸ್ವಾಮಿ ಜಾತ್ರೆಯ ಸ್ತಂಭಾರೋಹಣ, ಖುರೇಷಿ ಮೊಹಲ್ಲಾ ಶಾಲೆಯ ಗೌತಮ ಬುದ್ಧ, ಜಾಗೃತಿ ಸಮಾಜ ಸೇವಾ ಸಂಘದ ಚಂದ್ರಯಾನ-3, ಸರ್ವೋದಯ ಶಾಲೆಯ ಮರುಡೇಶ್ವರ, ಸನ್‍ಶೈನ್ ಶಾಲೆಯ ಲವಕುಶರ ಬಿಲ್ವಿದ್ಯ, ರಾಣಿ ಜಾನಕಿದೇವಿ ಶಾಲೆಯ ಕೃಷ್ಣ, ಪ್ರಿಯದರ್ಶಿÀನಿ ಶಾಲೆಯ ಬುದ್ದ, ಬಸವ, ಡಾ.ಅಂಬೇಡ್ಕರ್, ಆನಂದ ವಿದ್ಯಾಲಯ ಶಾಲೆಯ ದಿ. ರಾಜಾ ಮದನ ಗೋಪಾಲ ನಾಯಕ, ಬಣಗಾರ ಫೌಂಡೇಷನನ ಶರಣ ಶ್ರೀಶಂಕರ ದಾಸಿಮಯ್ಯ ಕಂದಗಲ್, ಮಾತಾ ಅನಾಥ ಆಶ್ರಮದಿಂದ ಡಾ.ಸುಶೀಲಮ್ಮ ಅನಾಥಶ್ರಮ, ಖಾಸ್ಗತೇಶ್ವರ ನೃತ್ಯಾಲಯದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಸ್ತಭ್ಧಚಿತ್ರಗಳು ಆಕರ್ಷಕವಾಗಿ ಮೂಡಿಬಂದವು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕಣಿ ಹಲಗೆ, ಶಹನಾಯಿ ವಾದನ, ಮಕ್ಕಳ ಲೇಜಿಮ್, ತಮಟೆ ವಾದನ ಕಣ್ಮನ ಸೆಳೆಯಿತು.
ನಗರದ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣ ದಿಂದ ಆರಂಭಗೊಂಡ ಸ್ತಬ್ಧಚಿತ್ರಗಳ ಮೆರವಣಿಗೆಗೆ ಮಾಜಿ ಸಚಿವ ರಾಜುಗೌಡ ಚಾಲನೆ ನೀಡಿ ಮಾತನಾಡಿ, ನಮ್ಮ ಪರಂಪರೆ ಮತ್ತು ಸಂಸ್ಕøತಿಯನ್ನು ಅನಾವರಣಗೊಳಿಸುವ ಅನೇಕ ಹಬ್ಬಗಳಿವೆ. ನಾಡಹಬ್ಬ ನಮ್ಮ ಬದುಕಿನ ಭಾಗವಾಗಬೇಕು. ಈ ನಾಡಿನ ಕಲೆ ಮತ್ತು ಸಂಸ್ಕøತಿಯನ್ನು ಮತ್ತೆ ಮತ್ತೆ ನೆನಪಿಸುವಂತಹ ಕಾರ್ಯಕ್ರಮ ರೂಪಿಸುವುದರ ಜೊತೆಗೆ ಇದನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇಂತಹ ಹಬ್ಬಗಳ ಮೂಲಕ ನಮ್ಮ ನಾಡಿನ ಸಂಸ್ಕøತಿ, ಪರಂಪರೆ, ಸಾಹಿತ್ಯ, ಕಲೆಗಳನ್ನು ನೆನಪಿಸಿಕೊಂಡು ಅದನ್ನು ಆಚರಣೆಗೆ ತರಬೇಕು ಎಂದರು.
ನಾನಾ ಶಾಲೆ ಮತ್ತು ಸಂಘ-ಸಂಸ್ಥೆಗಳ ಸ್ತಬ್ಧಚಿತ್ರಗಳೊಂದಿಗೆ ಮಾರುಕಟ್ಟೆ, ಗಾಂಧೀಜಿ ವೃತ್ತ ಮಾರ್ಗವಾಗಿ ಗರುಡಾದ್ರಿ ಕಲಾ ಮಂದಿರದ ವರೆಗೆ ಮೆರವಣಿಗೆ ಜರುಗಿತು. ನಂತರ ಗರುಡಾದ್ರಿ ಮಂದಿರದಲ್ಲಿ ನಾಡದೇವಿಯ ಸ್ಥಾಪನೆ, ಪೂಜೆ ಹಾಗೂ ಅನ್ನಪ್ರಸಾದ ವಿತರಣೆ ನಡೆಯಿತು.
ನಾಡಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮನಾಯಕ, ಅಧ್ಯಕ್ಷ ರಾಜಾ ಮುಕುಂದನಾಯಕ, ಉಪಾಧ್ಯಕ್ಷರಾದ ಬಸವರಾಜ ಜಮದ್ರಖಾನಿ, ಕಿಶೋರಚಂದ್ ಜೈನ್, ಪ್ರಕಾಶ ಸಜ್ಜನ್, ಸೋಮನಾಥ ಡೊಣ್ಣಿಗೇರಿ, ಜಯಲಲಿತಾ ಪಾಟೀಲ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಮಸ್ಕಿ, ಕಾರ್ಯದರ್ಶಿಗಳಾದ ಮಹೇಶ ಜಾಗೀರದಾರ್, ರಾಜಶೇಖರ ದೇಸಾಯಿ, ದೇವು ಹೆಬ್ಬಾಳ, ಶ್ರೀಶೈಲ ಯಂಕಂಚಿ, ಕೋಶಾಧ್ಯಕ್ಷ ಗೋವರ್ಧನ ಝಂವ್ಹಾರ.
ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ್ ಸಜ್ಜನ್, ಪ್ರಮುಖರಾದ ಬಸವರಾಜ ನಿಷ್ಠಿ ದೇಶಮುಖ, ಗೋಪಾಲದಾಸ ಲಡ್ಡಾ, ಅಮೃತಲಾಲ್ ಜೈನ್, ಮಂಜುನಾಥ ಗುಳಗಿ, ಪ್ರಕಾಶ ಗುತ್ತೇದಾರ, ದತ್ತತ್ರೇಯ ಗುತ್ತೇದಾರ್, ಡಾ.ರಾಘವೇಂದ್ರ ಗುಡುಗುಂಟಿ, ಮಂಜುನಾಥ ಜಾಲಹಳ್ಳಿ, ಶ್ರೀನಿವಾಸ ಜಾಲವಾದಿ, ಮಹೇಶ್ ಪಾಟೀಲ್, ಅಮೀನರೆಡ್ಡಿ ಪಾಟೀಲ್, ಸಂಗಣ್ಣ ರಾಂಪುರೆ, ಯಲ್ಲಪ್ಪ ಹುಲಕಲ್, ಡಾ.ಬಿ.ಎಂ.ಹಳ್ಳಿಕೋಟಿ, ಶಂಕರನಾಯಕ, ಗೋಪಣ್ಣ ವಾಗಣಗೇರಾ, ಡಾ.ಗಂಗಾಧರ ರುಮಾಲ್, ಬಿ.ಲಕ್ಷ್ಮಣ ಗುತ್ತೇದಾರ್, ಜಗದೀಶ್ ಪಾಟೀಲ್, ವೆಂಕಟೇಶ್ವರ ಸುರಪುರ, ಅನ್ವರ ಜಮದಾರ, ಉಸ್ತಾದ್ ವಜಾಹತ್ ಹುಸೇನ್, ನರಸಿಂಹ ಬಾಡಿಯಾಳ, ಹಣಮಂತ್ರಾಯ ದೊರೆ, ಸತ್ಯನಾರಾಯಣ ಗುಡುಗುಂಟಿ, ಅಕ್ಕೂಬಾಯಿ ಬಿರಾದಾರ್, ಹಸೀನಾಬಾನು, ಅಲಕನಂದಾ ಐಜಿ, ರಾಘವೇಂದ್ರ ಭಕ್ರಿ, ಪ್ರಕಾಶ ಬಣಗಾರ ಸೇರಿ ಇತರರು ಇದ್ದರು.